Kichcha Sudeep : ನಟ ಕಿಚ್ಚ ಸುದೀಪ್‌ಗೆ ಅಪರಿಚಿತರಿಂದ ಬೆದರಿಕೆ ಪತ್ರ: ದೂರು ದಾಖಲು

ಬೆಂಗಳೂರು, ಏಪ್ರಿಲ್‌ 5: ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್‌ ಅವರಿಗೆ ಅಪರಿಚಿತರಿಂದ ಬೆದರಿಕೆ ಪತ್ರವೊಂದು ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟ ಸುದೀಪ್‌ಗೆ ಅವರ ಖಾಸಗಿ ವೀಡಿಯೋವನ್ನು ಹರಿಯ ಬಿಡುತ್ತೇನೆ ಎಂದು ಅಪರಿಚಿತರಿಂದ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಕಿಚ್ಚ ಅವರ ಮ್ಯಾನೇಜರ್‌ ಆಗಿರವ ಜಾಕ್‌ ಮಂಜು ಅವರು ಬೆದರಿಕೆ ಪತ್ರದ ಸಮೇತ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

Will Leak Private Video; Threat Letter to Kichcha Sudeep ; Actor Files Complaint

ಅಪರಿಚಿತರು ಪತ್ರದಲ್ಲಿ ಕಿಚ್ಚ ಸುದೀಪ್‌ಗೆ ಸೇರಿದ್ದು ಎನ್ನಲಾದ ಖಾಸಗಿ ವಿಡಿಯೋವನ್ನು ಹರಿಯಬಿಡುವುದಾಗಿ ಪತ್ರದಲ್ಲಿ ಧಮಕಿ ಹಾಕಿದ್ದಾರೆ. ಅಲ್ಲದೆ ಪತ್ರದಲ್ಲಿ ನಟ ಸುದೀಪ್‌ಗೆ ಕೆಲ ಅವಾಚ್ಯ ಶಬ್ದಗಳಲ್ಲಿ ಬೈದು ಪತ್ರ ಬರೆದಿದ್ದಾರೆ. ಈ ಪತ್ರ ಮ್ಯಾನೇಜರ್‌ ಜಾಕ್‌ ಮಂಜುಗೆ ಸಿಕ್ಕಿದ್ದು ಬಳಿಕ ಅವರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿ ದೂರು ನೀಡಿದ್ದಾರೆ.

ದೂರಿನನ್ವಯ ಐಪಿಸಿ ಸೆಕ್ಷನ್‌ 504 (ಬೆದರಿಕೆ) 506(ಪ್ರಾಣ ಬೆದರಿಕೆ) ಹಾಗೂ ಐಟಿ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರ ನಡುವೆ ಬುಧವಾರ ಕಿಚ್ಚ ಸುದೀಪ್‌ ಅವರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದರ ಬಗ್ಗೆ ಸ್ಪಷ್ಟಿಕರಣ ನೀಡಲು ಕಿಚ್ಚ ಸುದೀಪ್‌ ಅವರು ಪತ್ರಿಕಾಗೋಷ್ಟಿಯನ್ನು ಕರೆದಿದ್ದಾರೆ. ಈಗ ಅವರ ಮೇಲೆ ಅವರ ನಿಲುವಿನ ಮೇಲೆ ಎಲ್ಲರ ಗಮನ ನಿಂತಿದೆ.

ಅವರು ರಾಷ್ಟ್ರೀಯ ಪಕ್ಷ ಬಿಜೆಪಿ ಸೇರಲಿದ್ದಾರಾ ಅಥವಾ ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ನೀಡಲಿದ್ದಾರಾ ಎಂಬ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದೆಲ್ಲದ್ದಕ್ಕೂ ಅವರು ಮಾಹಿತಿ ನೀಡಲಿದ್ದಾರೆ. ಇದೆಲ್ಲಾ ಪ್ರಹಸನಗಳಿಗೂ ಬುಧವಾರ ಮಧ್ಯಾಹ್ನ ಉತ್ತರ ದೊರೆಯುವ ಸಾಧ್ಯತೆ ಇದೆ. ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಚುನಾವಣಾ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿಮಾ ಸ್ಟಾರ್‌ ಗಳನ್ನು ಪಕ್ಷಗಳತ್ತ ಕರೆತರುವ ನಿಟ್ಟಿಯಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.

Will Leak Private Video; Threat Letter to Kichcha Sudeep ; Actor Files Complaint

ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಖ್ಯಾತ ನಟ ಕಿಚ್ಚ ಸುದೀಪ ಬುಧವಾರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ವರದಿಗಳು ಈಗಾಗಲೇ ಹರಿದಾಡಿವೆ. ಅನೇಕ ರಾಜಕೀಯ ನಾಯಕರ ಜೊತೆ ನಟ ಕಿಚ್ಚ ಸುದೀಪ್​ ಅವರಿಗೆ ಒಡನಾಟ ಹೊಂದಿದ್ದಾರೆ. ಈಗಾಗಲೇ ಅವರನ್ನು ಬಿಜೆಪಿ ಕಾಂಗ್ರೆಸ್‌ ಎರಡೂ ಪಕ್ಷಗಳು ಸಂಪರ್ಕ ಮಾಡಿವೆ. ಕರ್ನಾಟಕದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್​ ಅವರನ್ನು ರಾಜಕೀಯ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ನದೆದಿವೆ. ನಟ ಕಿಚ್ಚ ಸುದೀಪ್​ ನೇರವಾಗಿ ರಾಜಕೀಯಕ್ಕೆ ಧುಮುಕುತ್ತಾರಾ ಅಥವಾ ಮುಂದಿನ 30 ದಿನಗಳ ಕಾಲ ಬಿಜೆಪಿಯ ಸ್ಟಾರ್‌ ಕ್ಯಾಂಪೇನರ್‌ ಆಗಿ ಅಖಾಡಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡಿವೆ.

ಮೊದಲಿನಿಂದಲೂ ಬಿಜೆಪಿ ನಾಯಕರೊಟ್ಟಿಗೆ ನಿಕಟ ಸಂಪರ್ಕಲ್ಲಿದ್ದ ಸುದೀಪ್‌ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಈ ಕುರಿತು ಇಂದು (ಬುಧವಾರ) ನಡೆಯುವ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ನಟ ಸುದೀಪ್‌ ಮಾಹಿತಿ ನೀಡಲಿದ್ದಾರೆ. ಹಿಂದೆ ಕಿಚ್ಚ ಸುದೀಪ್ ಅವರು ನಾನೊಬ್ಬ ಕಲಾವಿದ. ನನ್ನ ಜೊತೆಗೆ ಮಾತುಕತೆಗೆ ಬಂದಿದ್ದರು. ಇಲ್ಲ ಅಂತ ತೇಲಿಸೋಕೆ ಹೋಗಲ್ಲ. ಇತ್ತೀಚೆಗೆ ಪೊಲಿಟಿಕಲ್ ನಾಯಕರಿಗೆ ನಂಬಿಕೆ ಬಂದಿದೆ. ಡಿಕೆ ಶಿವಕುಮಾರ್​, ಸುಧಾಕರ್, ಬಸವರಾಜ ಬೊಮ್ಮಾಯಿ, ರಮ್ಯಾ ಅವರು ನನ್ನ ಸ್ನೇಹಿತರು. ನಾನು ಇನ್ನೂ ನಿರ್ಧಾರ ತಗೊಂಡಿಲ್ಲ. ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗುತ್ತದೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+