ಹೊಳೆ ದಾಟಿದ‌ ಮೇಲೆ ಅಂಬಿಗನ ಹಂಗ್ಯಾಕೆ?; ಮೋದಿಗೆ ಪ್ರಶ್ನೆ

ಬೆಂಗಳೂರು, ಆಗಸ್ಟ್ 05 : ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಎಲ್. ಕೆ. ಅಡ್ವಾಣಿ ಆಗಮಿಸಿರಲಿಲ್ಲ. ಕಾಂಗ್ರೆಸ್‌ ನಾಯಕರು ಇದನ್ನು ಪ್ರಶ್ನೆ ಮಾಡಿದ್ದಾರೆ.

Recommended Video

      SP Balasubrahmanyam tested positive for coronavirus | Oneindia Kannada

      ಕರ್ನಾಟಕ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಬುಧವಾರ ಅವರು ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

      Why You Forget LK Advani Dinesh Gundu Rao Asks Modi

      'ಹೊಳೆ ದಾಟಿದ‌ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ' ಎಂಬ ಗಾದೆ ಮಾತಿನ ಮೂಲಕ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. 'ಉಪಕಾರ ಸ್ಮರಣೆ ಇಲ್ಲವಾಯಿತೇ' ಪ್ರಧಾನಿ ಮೋದಿಯವರನ್ನು ಕೇಳಿದ್ದಾರೆ.

      ದಿನೇಶ್ ಗುಂಡೂರಾವ್ ಟ್ವೀಟ್

      "ರಾಮ ಮಂದಿರ ಭೂಮಿ ಪೂಜೆ ನೆರವೇರುವ ಘಳಿಗೆಯು ಭಾವನಾತ್ಮಕ ಹಾಗೂ ಐತಿಹಾಸಿಕ. ಇದರೊಂದಿಗೆ ಶತಮಾನಗಳ ಕಾಯುವಿಕೆ ಕೊನೆಗೊಂಡಿದೆ. ಭಗವಾನ್ ಶ್ರೀರಾಮನು ಭಾರತೀಯರ ಸದ್ಗುಣಗಳನ್ನು ಪ್ರೇರೆಪಿಸುತ್ತಾನೆ" ಎಂದು ಅಡ್ವಾಣಿ ಮಂಗಳವಾರ ಹೇಳಿದ್ದರು.

      ರಾಮ ಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಲ್. ಕೆ. ಅಡ್ವಾಣಿ ಕೊರೊನಾ ಭೀತಿಯ ಹಿನ್ನಲೆಯಲ್ಲಿ ರಾಮ ಮಂದಿರ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

      "ಸಹನೆ ಮತ್ತು ತ್ಯಾಗ ಮೂರ್ತಿ ರಾಮ ಭಾರತೀಯ ಆರಾಧ್ಯ ದೈವ. ಆತನ ಮಂದಿರ ಈಗ ಎಲ್ಲಾ ಭಾರತೀಯರಿಗೆ ಸದ್ಗುಣಗಳನ್ನು ಪ್ರಚೋದಿಸಲು ನೆರವಾಗಬಲ್ಲದು ಎಂದು ನಾನು ನಂಬಿದ್ದೇನೆ" ಎಂದು ಎಲ್. ಕೆ. ಅಡ್ವಾಣಿ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+