ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಕಾಶ ಸಿಕ್ಕದರೆ ದಲಿತ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು: ಎಚ್.ಡಿ ಕುಮಾರಸ್ವಾಮಿ

|
Google Oneindia Kannada News

ತುಮಕೂರು, ಡಿಸೆಂಬರ್ 2: ಅವಕಾಶ ಸಿಕ್ಕದರೆ ಸರ್ಕಾರ ಅಧಿಕಾರ ಬಂದರೆ ದಲಿತರು ಯಾಕೆ ಸಿಎಂ ಆಗಬಾರದು. ಅಂತಹ ಸಮಯ ಬಂದ್ರೆ ಮಾಡ್ತೀನಿ, ಎಲ್ಲದಕ್ಕೂ ನಮ್ಮ ಪಕ್ಷದಲ್ಲಿ ಮುಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು

ತುಮಕೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ರಾಜಕೀಯ ಉದ್ದೇಶಕ್ಕಾಗಿ ಹುನ್ನಾರ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ತಮಿಳುನಾಡು, ಮಹಾಜನ್ ವರದಿ ನೀಡಿದ ಮೇಲೆ ಕೇರಳ ಗಡಿ ಭಾಗದಲ್ಲೂ ಸಮಸ್ಯೆಗಳನ್ನ ಹೇಳ್ತಾರೆ. ಇದನ್ನು ಪದೇ ಪದೇ ಯಾಕೆ ಕೆಣುಕುತ್ತಿದ್ದಾರೆ? ಅಭಿವೃದ್ಧಿ ವಿಚಾರವನ್ನು ಇಟ್ಟುಕೊಂಡು ಚುನಾವಣೆಗೆ ಹೋಗಲ್ಲ ಇವರು, ಈ ರೀತಿ ವಿಷಯಗಳನ್ನ ಇಟ್ಟುಕೊಂಡು ಸಮಾಜದ ಹೊಡೆಯುವ ಹುನ್ನಾರ ಇದು. ಸರ್ಕಾರ ಇದನ್ನ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ನಮ್ಮ ನೆಲ, ಜಲ ಕಾಪಾಡುವ ಬಗ್ಗೆ ಎಲ್ಲಾರು ಯೋಚನೆ ಮಾಡಬೇಕು ಎಂದರು.

Breaking: ತುಮಕೂರು ಗ್ರಾ. ಶಾಸಕ ಗೌರಿಶಂಕರ್ ವಿರುದ್ಧ ಪ್ರಕರಣBreaking: ತುಮಕೂರು ಗ್ರಾ. ಶಾಸಕ ಗೌರಿಶಂಕರ್ ವಿರುದ್ಧ ಪ್ರಕರಣ

ಈಗೀನ ಸರ್ಕಾರ ಬರೋಕೆ ಕಾರಣ ಯಾರು.?: ಎಚ್. ಡಿ. ಕುಮಾರಸ್ವಾಮಿ ಪ್ರಶ್ನೆ

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಇದು ಬಿಟ್ಟರೆ ಕಾಂಗ್ರೆಸ್ ಬೇರೆ ಎನು ಇದೆ. ಕಳೆದ ಬಾರಿ ಹೇಳಿ ಹೇಳಿ 70 ಸ್ಥಾನಕ್ಕೆ ಬಂದ್ರು, ಬಿಜೆಪಿ 65 ಸ್ಥಾನಕ್ಕೆ ನಿಲ್ಲರೋರನ್ನ 105 ತೆಗೆದುಕೊಂಡು ಹೋದವರು ಇದೇ ಕಾಂಗ್ರೆಸ್ ನವರು. ಹಲವಾರು ಭಾಗ್ಯಗಳನ್ನ ಕೊಟ್ಟು ಯಾರು ಮಾಡ್ದೆ ಇರೋ ಸಾಧನ ಮಾಡಿದ್ದೇವೆ ಅಂತ ಹೇಳಿ. ಯಾಕೆ 78 ಸ್ಥಾನಕ್ಕೆ ಬಂದ್ರು.?
ಈಗೀನ ಸರ್ಕಾರ ಬರೋಕೆ ಕಾರಣ ಯಾರು.? ನನ್ನಷ್ಟು ಶಾಸಕರಿಗೆ ಸಿಕ್ತಾ ಇದ್ದ ಮುಖ್ಯಮಂತ್ರಿ ಯಾರಿದ್ದರು ಎಂದು ಪ್ರಶ್ನಿಸಿದರು.

why shouldnt a Dalit community become the chief minister if given a chance says HD Kumaraswamy

ಜನರ ವಿಶ್ವಾಸದಿಂದ ಚುನಾವಣೆ ಗೆಲ್ಲಬೇಕು, ಕುತಂತ್ರದಿಂದ ಅಲ್ಲ

ಚುನಾವಣಾ ಅಭ್ಯರ್ಥಿಗಳ ಬದಲಾವಣೆ ವಿಚಾರವಾಗಿ ಮಾತನಾಡಿ, ಸದ್ಯಕ್ಕೆ ನಾನು ಘೋಷಣೆ ಮಾಡಿರುವ ಅಭ್ಯರ್ಥಿಗಳ ಬದಲಾವಣೆ ಇಲ್ಲ. ದೇವೇಗೌಡರು ಪ್ರತಿಯೊಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅವರು ಮಾಡುವ ಕೆಲಸದ ಮೇಲೆ ತೀರ್ಮಾನ ಮಾಡ್ತಾರೆ. ಜನರ ವಿಶ್ವಾಸ ಗಳಿಸಿದ್ದಾರೆ ಅವರನ್ನ ಘೋಷಣೆ ಮಾಡಿದ್ದೇನೆ. 14 ಕ್ಷೇತ್ರದಲ್ಲಿ 13 ಸ್ಥಾನಗಳಿಗೆ ಘೋಷಣೆ ಮಾಡಿದ್ದೇನೆ, ಘೋಷಣೆ ಮಾಡಿರುವ ಅಭ್ಯರ್ಥಿಗಳು ಜನತೆಯ ಅಲೆ‌ ನೋಡಿ ಮೈ ಮರೆತರೇ ಬದಲಾವಣೆ ಆಗಬಹುದು, ಆ ದೃಷ್ಟಿಯಿಂದ ದೇವೇಗೌಡರು ಹೇಳಿದ್ದಾರೆ. ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ರು ಬದಲಾವಣೆ ಆಗಬಹುದು. ಅಭ್ಯರ್ಥಿಗಳಿಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಚುನಾವಣೆಯಲ್ಲಿ ನಾನು ಜನರ ವಿಶ್ವಾಸದಿಂದ ಗೆಲ್ಲಬೇಕು, ಕುತಂತ್ರದಿಂದ ಗೆಲ್ಲುವ ಅವಶ್ಯಕತೆ ಇಲ್ಲ. ಜನತ ವಿಶ್ವಾಸ ಗಳಿಸಿ,ಅವರ‌ ಕಷ್ಟ ದುಃಖದಲ್ಲಿ ಭಾಗಿಯಾಗಬೇಕು. ಕಾರ್ಯಕರ್ತರ ಜೊತೆ ವಿಶ್ವಾಸ ತೆಗೆದುಕೊಳ್ಳುವುದು ಮುಖ್ಯ ಎಂದರು.

ಜಮೀರ್ ಹಾಗೂ ಜಯಚಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ರೀತಿಯ ಚರ್ಚೆ ನನ್ನ ಮುಂದೆ ಇಲ್ಲ. ಕಾಂಗ್ರೆಸ್ ನಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ, ಜಯಚಂದ್ರ ಅಲ್ಲಿ ಹಿರಿಯ ನಾಯಕರು, ಅಲ್ಲಿನ ಪರಿಸ್ಥಿತಿ ಬಗ್ಗೆ ಅವರಿಗೆ ಚನ್ನಾಗಿ ಗೊತ್ತಿದೆ ಎಂದರು.

why shouldnt a Dalit community become the chief minister if given a chance says HD Kumaraswamy

ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಕುರಿತು ನಾನು ಲಘುವಾಗಿ ಮಾತಾಡಲ್ಲ. ಮುಖ್ಯಮಂತ್ರಿ ಆಗಿ, ಉಪಮುಖ್ಯಮಂತ್ರಿಯಾಗಿ ವರ್ಷಸ್ಸು ಇಟ್ಟುಕೊಂಡಿದ್ದಾರೆ ಎಂದರು.

ನನಗೆ ಪಂಚರತ್ನ‌ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಬಹುಮತದ ಸರ್ಕಾರ ಬೇಕು

ಮುಂದಿನ ನಾಲ್ಕು ತಿಂಗಳು ಬಹಳ ಪ್ರಮುಖವಾದ ದಿನಗಳು ಅತ್ಯಂತ ಸೂಕ್ಷ್ಮ ವಾದ ದಿನಗಳು. ರಥಯಾತ್ರೆಗೆ ಜನರು ಮನೆ ಮನೆಯಿಂದ ತಾಯಂದಿರು, ಮಕ್ಕಳನ್ನ ಎತ್ತಿಕೊಂಡು ಬಂದು ಬೆಂಬಲ ಸೂಚನೆ ಕೊಡ್ತಾ ಇದ್ದಾರೆ, ಇದನ್ನ ಗಮನದಲ್ಲಿಟ್ಟುಕೊಂಡು ಮೈ ಮರೆತರೇ ಅದಕ್ಕೆ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಬೇಕು. 50,60 ಸ್ಥಾನ ಗುರಿ ಅಲ್ಲ. ಮನೆಯಲ್ಲಿ ಇದ್ದರು 50 ಸ್ಥಾನ ಗೆಲ್ಲುತ್ತೇವೆ. ನನಗೆ ಪಂಚರತ್ನ‌ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಬಹುಮತದ ಸರ್ಕಾರ ಬೇಕು ಎಂದರು.

English summary
why shouldnt a Dalit community become the chief minister if given a chance says HD Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X