ಅಂದು ರಾಮದಾಸ್, ಇಂದು ಪ್ರತಾಪ್ ಸಿಂಹ ಬೆನ್ನಿಗೆ ಹೊಡೆದ ಮೋದಿ: ಆದರೆ ಇಬ್ಬರಿಗೂ ಮಾತ್ರ ಟಿಕೆಟ್‌ ಇಲ್ಲ

ಬೆಂಗಳೂರು, ಏಪ್ರಿಲ್‌ 17: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಬಿಜೆಪಿ ಹೈಕಮಾಂಡ್‌ ಗೆ 28 ಕ್ಷೇತ್ರಗಳನ್ನ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಹೌದು, ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎರಡು ಬಾರಿ ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Why Pratap Simha Missed Mysore BJP Ticket Despite PM Modi Pat his Back Like Ramdass

ಚುನಾವಣೆ ಘೋಷಣೆ ಬಳಿಕ ಎರಡನೇ ಬಾರಿಗೆ ರಾಜ್ಯಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಏಪ್ರಿಲ್‌ 14 ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನದ ಪ್ರಮುಖ ನಾಯಕರಿಂದ ವೇದಿಕೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಅವಕಾಶವನ್ನ ಮಾಡಿಕೊಡಲಾಗಿತ್ತು. ಇನ್ನೂ ವೇದಿಕೆಯ ಮೇಲೆ ಆಗಮಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಹಾಲಿ ಸಂಸದರಾದ ಪ್ರತಾಪ್‌ ಸಿಂಹ ಅವರ ಬೆನ್ನಿಗೆ ಪ್ರೀತಿಯಿಂದ ಹೊಡೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಹಾಲಿ ಸಂಸದರಾದ ಪ್ರತಾಪ್‌ ಸಿಂಹ ಜೊತೆಗೆ ಆತ್ಮೀಯವಾಗಿ ಮಾತನಾಡಿ ಬೆನ್ನು ತಟ್ಟಿದ್ದಾರೆ. ಮೋದಿ ಆತ್ಮೀಯವಾಗಿ ಮಾತನಾಡಿದ್ದು, ಹೀಗುದ್ದರೂ ಪ್ರತಾಪ್‌ ಸಿಂಹಗೆ ಟಿಕೆಟ್‌ ಹೇಗೆ ಮಿಸ್‌ ಆಯ್ತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಲಿ ಸಂಸದರಾದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರ ಟಿಕೆಟ್‌ ಗಾಗಿ ಬಾರೀ ಪೈಪೋಟಿ ನಡೆಸಿದ್ದರು. ಆದರೆ, ಈ ಬಾರಿ ಬಿಜೆಪಿ ಹೈಕಮಾಂಡ್‌ ಯದುವೀರ್‌ ಅವರಿಗೆ ಟಿಕೆಟ್‌ ನೀಡಿದೆ.

ರಾಮದಾಸ್‌ ಗೂ ಟಿಕೆಟ್‌ ಮಿಸ್!‌

ಕಳೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ವೇದಿಕೆಯ ಮೇಲೆ ಕೃಷ್ಣರಾಜ ಕ್ಷೇತ್ರದ ಶಾಸಕರಾಗಿದ್ದ ಎಸ್.ಎ.ರಾಮದಾಸ್ ಅವರನ್ನು ಕರೆದು ಮಾತನಾಡಿಸಿ, ಪ್ರೀತಿಯಿಂದ ಬೆನ್ನಿಗೆ ಹೊಡೆದಿದ್ದರು. ಕಳೆದ ಬಾರಿ ರಾಮದಾಸ್ ಅವರಿಗೆ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಅನ್ನು ನೀಡಿರಲಿಲ್ಲ, ಬದಲಿಗೆ ಬಿಜೆಪಿಯು ಟಿ.ಎಸ್. ಶ್ರೀವಸ್ತ ಅವರಿಗೆ ನೀಡಿತ್ತು.

ಒಟ್ನಲಿ, ಟಿಕೆಟ್‌ ಸಿಗದ ವಿಚಾರವಾಗಿ ಈ ಹಿಂದೆ ರಾಮದಾಸ್‌ ಅವರಿಗೂ ಸಹ ತೀವ್ರ ಅಸಮಾಧಾನ ಇತ್ತು. ಈ ವೇಳೆ ಮೋದಿ ಅವರು ರಾಮದಾಸ್‌ ಅವರ ಜೊತೆಗೆ ಮಾತನಾಡಿ ಬೆನ್ನು ತಟ್ಟಿ ಹೋಗಿದ್ರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಸಹ ಮೈಸೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೈ ತಪ್ಪಿದ್ದು, ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಸಿದ್ದಾರೆ. ಈ ವೇಳೆ ಮೋದಿ ಅವರು ಪ್ರತಾಪ್‌ ಸಿಂಹ ಅವರ ಜೊತೆಗೆ ಮಾತನಾಡಿ ಆತ್ಮೀಯತೆಯಿಂದ ಬೆನ್ನು ತಟ್ಟಿದ್ದಾರೆ. ಮೋದಿಯವರು ಬೆನ್ನು ತಟ್ಟುವ ಮೂಲಕ ವಿಶ್ವಾಸ ಕಳೆದುಕೊಳ್ಳಬೇಡಿ ಎನ್ನುವ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+