SSLC: 10ನೇ ತರಗತಿ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆ: ಸಂತೋಷ್‌ಕುಮಾರ್ ಎಲ್. ಎಂ ಬರಹ
SSLC: 10ನೇ ತರಗತಿ ಮಕ್ಕಳಿಗೆ ಕನ್ನಡವೇ ಕಬ್ಬಿಣದ ಕಡಲೆ ಆಗಿರುವ ಬಗ್ಗೆ ಹವ್ಯಾಸಿ ಬರಹಗಾರ ಸಂತೋಷ್‌ಕುಮಾರ್ ಎಲ್.ಎಂ ಅವರ ಬರಹ ಇಲ್ಲಿದೆ.
10ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳಿಗೆ ಕನ್ನಡ ಪರೀಕ್ಷೆ ಇದೆ. ಹಾಗಾಗಿ "ಈ ಪಾಠ ಅರ್ಥವಾಗುತ್ತಿಲ್ಲ" ಅಂತ ನನ್ನ ಹತ್ತಿರ ಬಂದಳು. ಇದೇ ಮೊದಲ ಬಾರಿಗೆ ಆ ಪಾಠವನ್ನು ಓದಲು ಶುರುವಿಟ್ಟುಕೊಂಡ ನನಗೆ ತಲೆ ಕೂದಲನ್ನು ಕಿತ್ತುಕೊಳ್ಳುವಂತಾಯ್ತು. 10ನೇ ತರಗತಿಯವರೆಗೆ ಸಂಪೂರ್ಣ ಕನ್ನಡ ಮಾಧ್ಯಮದಲ್ಲೇ ಓದಿರುವ ನನಗೇ ಇದನ್ನು ಅರ್ಥ ಮಾಡಿಕೊಳ್ಳಲು ಈ ಪರಿ ಕಷ್ಟವಾಗುತ್ತಿದೆ ಎಂದರೆ, ಇನ್ನು ಕನ್ನಡವನ್ನು ಒಂದು ಭಾಷೆಯನ್ನಾಗಿ ಆಯ್ದುಕೊಂಡು ಓದುವ ಮಕ್ಕಳ ಕಥೆ ಇನ್ನೇನ್ನಾಗಬೇಡ ? ಇದೇ ಕಾರಣಕ್ಕೆ ಅನ್ನಿಸುತ್ತದೆ, CBSE ಸಿಲಬಸ್ ಆಯ್ದುಕೊಂಡು ಓದುವ ಮಕ್ಕಳು ಪ್ರೌಢಶಾಲೆಯಲ್ಲಿ ಬಹುತೇಕ ಸಂಸ್ಕೃತವನ್ನೇ ಒಂದು ಭಾಷೆಯನ್ನಾಗಿ ಆಯ್ದುಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಕನ್ನಡಕ್ಕಿಂತ ಸಂಸ್ಕೃತ ಸಬ್ಜೆಕ್ಟ್ ನಲ್ಲಿ ಹೆಚ್ಚು ಅಂಕ ತೆಗೆದುಕೊಳ್ಳಲು ಸುಲಭ ಅಂತ. ಇಲ್ಲಿ ಕೊಟ್ಟಿರುವ ಸಾಲುಗಳನ್ನೇ ಓದಿ ನೋಡಿ. ಮೊದಲಿಗೆ ಇದನ್ನು ಸರಿಯಾಗಿ ಓದಿ ಜೀರ್ಣಿಸಿಕೊಂಡು, ಅರ್ಥ ಮಾಡಿಕೊಂಡು ನಂತರ ಅದೇ ಭಾಷೆಯಲ್ಲಿ ಉತ್ತರ ಬರೆಯುತ್ತೇನೆ ಎಂದರೆ ಖಂಡಿತವಾಗಿ ಈ ಪಾಠವನ್ನು ಬರೆದವರಿಗೂ ಆಗದು.

ಉದಾಹರಣೆಗೆ ಇದನ್ನೊಮ್ಮೆ ಓದಿ:
ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವುದು ಮಾನವ ವ್ಯಕ್ತಿತ್ವ ಮತ್ತು ಸಮಾನತೆಗಳ ತತ್ವದಿಂದ ಅನುಗಮನ ಮಾಡಿದ ತತ್ವವೇ ಸರಿ. ಏಕೆಂದರೆ ರಾಜಕೀಯವಾದ ಸಮಸ್ತ ಅಧಿಕಾರವೂ ಜನತೆಯಿಂದ ಬರುತ್ತದೆ. ತಮ್ಮ ಸಾರ್ವಜನಿಕವಾದ ಮತ್ತು ಖಾಸಗಿಯಾದ ಜೀವನವನ್ನು ನಿರ್ದೇಶಿಸುವ, ಸಾಮರ್ಥ್ಯವನ್ನು ಅವರು ತಾವೇ ಹೊಂದಿರುತ್ತಾರೆಯೇ ಹೊರತು ಬೇರೆ ಯಾರೂ ಅಲ್ಲ ಎಂದು ಇದರ ಅರ್ಥವಾಗುತ್ತದೆ.
ಅರ್ಥವಾಯಿತೇ? ಮೊದಲನೆಯ ಸಾಲನ್ನು ಓದುತ್ತಾ ಕೊನೆಯ ಪದಕ್ಕೆ ಬರವಷ್ಟರಲ್ಲಿ ಮೊದಲ ಪದವೇ ಮರೆತು ಹೋಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಒಟ್ಟಾರೆ ವಾಕ್ಯದ ಅರ್ಥವೇ ಮರೆತು ಹೋಗಿರುತ್ತದೆ. ಇದನ್ನು ಓದಿ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವುದಾದರೂ ಹೇಗೆ, ಇದು ಬರಿ ಉದಾಹರಣೆ ಅಷ್ಟೇ... ಸುಮ್ಮನೆ ನೀವು ಓದಿಕೊಳ್ಳಲಿ ಅಂತ ಮೂರು ಪುಟಗಳನ್ನು ಹಾಕಿದ್ದೇನೆ. ಅನೇಕ ಕಡೆ ಇವರು ಕನ್ನಡದಲ್ಲಿಯೇ ಬರೆದಿದ್ದಾರೋ, ಅಥವಾ ಬೇರೊಂದು ಭಾಷೆಯಲ್ಲಿದ್ದ ಪಾಠವನ್ನು ತಮಗೆ ಬಂದ ಕನ್ನಡದಲ್ಲಿ ಅನುವಾದ ಮಾಡಿದ್ದಾರೋ ಅನ್ನಿಸುತ್ತದೆ. ಉರು ಹೊಡೆಯುವ ಶಕ್ತಿಯುಳ್ಳ ವಿದ್ಯಾರ್ಥಿಗಳಷ್ಟೇ ಇಂತಹ ಸಬ್ಜೆಕ್ಟುಗಳಲ್ಲಿ ಅಂಕಗಳನ್ನು ಪಡೆಯಲು ಸಾಧ್ಯ. ಅಂಬೇಡ್ಕರ್ ಅವರಾಗಲಿ, ಮಹಾತ್ಮ ಗಾಂಧೀಜಿಯವರಾಗಲಿ, ಸ್ವಾಮಿ ವಿವೇಕಾನಂದ ಅವರಾಗಲಿ. ಈ ರೀತಿಯ ಪಾಠಗಳಿಂದ ಮಕ್ಕಳು ಅವರನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ ? ಇದರಿಂದಲೇ ಆ ಮಹಾನ್ ಚೇತನಗಳು ನಮ್ಮ ಶಿಕ್ಷಣದಿಂದ ನಮಗರ್ಥವಾಗುತ್ತಿಲ್ಲ. ಅವರ ಕೊಡುಗೆ ಎಲ್ಲರನ್ನೂ ಸರಿಯಾಗಿ ತಲುಪುತ್ತಿಲ್ಲ.
ಇಂತಹ ಕೆಟ್ಟ ಅನುವಾದ ಮಾಡಿ ಪಾಠಗಳನ್ನು ತಯಾರು ಮಾಡುವುದಾದರೆ ಇಂಥವರು ಓದುವುದಾದರೂ ಯಾತಕ್ಕೆ? ಇವರಿಗಿರುವ ಡಿಗ್ರಿ ಡಾಕ್ಟರೇಟ್'ಗಳು ಯಾಕೆ? ಕನ್ನಡ ಭಾಷೆಯೇ ಎಷ್ಟು ಸುಂದರ, ಸರಳ.... ಅದನ್ನೇ ಬಳಸಿಕೊಂಡು ಒಂದು ಸರಿಯಾದ ಪಠ್ಯಪುಸ್ತಕ ಮಾಡಲಿಲ್ಲವೆಂದರೆ ಅದಕ್ಕೆ ಸಂಬಂಧಪಟ್ಟ ಸಮಿತಿಗಳು, ಪ್ರಾಧಿಕಾರಗಳು ಇರುವುದಾದರೂ ಯಾವುದಕ್ಕೆ.
ಸಮಿತಿ ರಚನೆ ಆಗಿದೆ: ಪುರುಷೋತ್ತಮ ಬಿಳಿಮಲೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು, ಕನ್ನಡ ಪಠ್ಯ ಪುಸ್ತಕಗಳ ಸರಳೀಕರಣ ಇಂದಿನ ಅಗತ್ಯ. ಸಮಿತಿ ರಚಿಸಿದ್ದೇನೆ. ಕೆಲಸ ನಡೀತಿದೆ ಎಂದು ಹೇಳಿದ್ದಾರೆ.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications