Ration Card Cancellation: ರಾಜ್ಯದಲ್ಲಿ ಯಾರೆಲ್ಲಾ ಪಡಿತರ ಚೀಟಿಗಳು ರದ್ದು?
Ration Card Cancellation: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಸಹ ಒಂದಾಗಿದೆ. ಇನ್ನೂ ಕರ್ನಾಟಕದಲ್ಲಿ ಅನರ್ಹರ ಬಳಿ ಇರುವ ಕಾರ್ಡ್‌ಗಳನ್ನು ರದ್ದುಪಡಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಹಾಗಾದ್ರೆ ಯಾರಿಗೆಲ್ಲ ಕಾದಿದೆ ಮಾರಿಹಬ್ಬ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಈಗಾಗಗಲೇ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಅಂತಹವರನ್ನು ಎಪಿಎಲ್‌ಗೆ ಸೇರ್ಪಡೆ ಮಾಡುವ ಕೆಲಸವನ್ನು ಸರ್ಕಾರ ಮಾಡಿತ್ತು. ಆದರೆ, ಈ ವೇಳೆ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಕೂಡ ರದ್ದುಪಡಿಸಲಾಗಿದೆ ಎನ್ನುವ ಆರೋಪಗಳು ಕೆಳಿಬಂದಿದ್ದವು. ಅಲ್ಲದೆ, ಈ ಕುರಿತು ಹಲವು ಜಿಲ್ಲೆಗಳಲ್ಲಿ ಜನರು ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು.

ಬಳಿಕ ಎಚ್ಚತ್ತ ರಾಜ್ಯ ಸರ್ಕಾರ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ಒದಗಿಸಿ ಅವರಿಗೆ ಸಿಗಬೇಕಾದ ಪಡಿತರವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಆಪರೇಶನ್‌ಗೆ ಸರ್ಕಾರ ಮುಂದಾಗಿದ್ದು, ಅನರ್ಹರ ಬಳಿ ಇರುವ ಪಡಿತರ ಚೀಟಿಗಳನ್ನು ರದ್ದುಪಡಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಹಿಂದಿನಿಂದಲೂ ಸಹ ಅರ್ಹರಲ್ಲದವರೂ ಪಡಿತರ ಚೀಟಿಗಳನ್ನು ಹೊಂದಿದ್ದು, ಅವರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಗಳು ಕೇಳಿಬರುತ್ತಲೇ ಇದ್ದವು. ಆದರೆ ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ಅನರ್ಹರಿಗೆ ಬಿಗ್ ಶಾಕ್ ನೀಡಲು ಮುಂದಾಗಿದೆ.
ಅನರ್ಹ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ಕೊಟ್ಟಿದ್ದು, ಅನರ್ಹರರ ಪತ್ತೆಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಆಹಾರ ಕಾಯ್ದೆ ಉಲ್ಲಂಘಿಸಿರುವ ಮತ್ತು ಅನರ್ಹ ಪಡಿತರ ಚೀಟಿ ಪತ್ತೆ ಉದ್ದೇಶದಿಂದ ಥರ್ಡ್ ಪಾರ್ಟಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಅನರ್ಹರಿಗೆ ಬಿಸಿ ಮುಟ್ಟಿಸಲು ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ 44,00,000 ಅನರ್ಹ ಪಡಿತರ ಫಲಾನುಭವಿಗಳು ಇದ್ದಾರೆ ಎಂದು ಪತ್ತೆಹಚ್ಚಿ ಕಾರ್ಡ್ ರದ್ದುಪಡಿಸಲು ರಾಜ್ಯ ಸರ್ಕಾರ ಥರ್ಡ್ ಪಾರ್ಟಿ ಸರ್ವೇಗೆ ನಿರ್ಧರಿಸಿದೆ. 2011ರ ಜನಸಂಖ್ಯೆ ದತ್ತಾಂಶದ ಪ್ರಕಾರ 4,01,93,130 ಸ್ವೀಕೃತದಾರರ ಮಿತಿ ನಿಗದಿ ಮಾಡಲಾಗಿದೆ. ಆದರೆ 44 ಲಕ್ಷರ್ಖಖೂ ಹೆಚ್ಚುವರಿ ಪಡಿತರ ಚೀಟಿಗಳು ಇರುವುದಾಗಿ ತಿಳಿದುಬಂದಿದೆ.
2011ರ ಜನ ಸಂಖ್ಯೆ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ 11,99,700 ಅಂತ್ಯೋದಯ (ಎಎವೈ) 4,01, 93,130 ಸ್ವೀಕೃತದಾರರ ಮಿತಿ ನಿಗದಿ ಮಾಡಿದೆ. ಆದರೂ, ರಾಜ್ಯದಲ್ಲಿ ಆದ್ಯತಾ ಕುಟುಂಬ (ಪಿಎಚ್‌ಎಚ್) ಮತ್ತು ಎಎವೈ 44 ಲಕ್ಷಕ್ಕೂ ಹೆಚ್ಚು ಇರುವುದು ಕಂಡುಬಂದಿದೆ. ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಆದರೆ, ದೇಶದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ ಆಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ.
ಯಾರೆಲ್ಲಾ ರೇಷನ್ ಕಾರ್ಡ್‌ಗಳು ರದ್ದು?
* ವಾರ್ಷಿಕ ಆದಾಯ 1.20 ಲಕ್ಷಗಿಂತ ಹೆಚ್ಚಿರುವ ಕುಟುಂಬ
* 3 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿ ಹೊಂದಿದವರು
* ಸರ್ಕಾರಿ, ಅನುದಾನಿತ, ಸರ್ಕಾರಿ ಸಂಯೋಜಿತ ಸಂಸ್ಥೆಗಳಲ್ಲಿ ನೌಕರರ ಕಾರ್ಡ್ ರದ್ದು
* 1,000 ಚದರಡಿ ಪಕ್ಕಾ ಮನೆ ಹೊಂದಿದವರ ಕಾರ್ಡ್ ರದ್ದು
* ಆದಾಯ, ವೃತ್ತಿ ತೆರಿಗೆ, ಜಿಎಸ್‌ಟಿ ಪಾವತಿದಾರರ ರೇಷನ್ ಕಾರ್ಡ್ ರದ್ದು
* ವಾಣಿಜ್ಯೇತರ ವಾಹನ ಹೊಂದಿದವರ ಪಡಿತರ ಚೀಟಿ ರದ್ದು












Click it and Unblock the Notifications