ವ್ಯಕ್ತಿಚಿತ್ರ: 'ಸ್ಪೀಕರ್' ಸ್ಥಾನಕ್ಕೇರಿದ ಕೊಂಬಾರಣ್ಣ ಗಣಪತಿ ಬೋಪಯ್ಯ
ಬೆಂಗಳೂರು, ಮೇ 18: ಕರ್ನಾಟಕ ವಿಧಾನಸಭೆ ಮತ್ತೊಮ್ಮೆ ವಿಶ್ವಾಸಮತ ಯಾಚನೆ ಪ್ರಹಸನಕ್ಕೆ ಸಜ್ಜಾಗಿದೆ. ಬಿಜೆಪಿಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರಿಗೆ ವಿಶ್ವಾಸಮತ ಯಾಚನೆ ಹೊಸ ವಿಷಯವಲ್ಲ. ಮೂರು ದಿನಗಳ ಅಂತರದಲ್ಲಿ ಎರಡು ಬಾರಿ ವಿಶ್ವಾಸಮತ ಯಾಚನೆ ನಡೆದಿತ್ತು.
ನಾಳೆ (ಮೇ 12) ಮತ್ತೊಮ್ಮೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆಗೆ ಸಜ್ಜಾಗುತ್ತಿದ್ದಾರೆ. 2010ರಲ್ಲಿ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಂದು ಕೆಜಿ ಬೋಪಯ್ಯ ಸ್ಪೀಕರ್ ಆಗಿದ್ದರು. ಇಂದು ಹಂಗಾಮಿ ಸ್ಪೀಕರ್ ಆಗಿದ್ದಾರೆ. ಬೋಪಯ್ಯ ಅವರ ಸಂಕ್ಷಿಪ್ತ ಹಿನ್ನಲೆ ಇಲ್ಲಿದೆ.

ಕೊಂಬಾರಣ್ಣ ಗಣಪತಿ ಬೋಪಯ್ಯ ಅವರು ಕೊಡಗು ಒಕ್ಕಲಿಗ(ಗೌಡ) ಕುಟುಂಬದಲ್ಲಿ 1955ರ ಅಕ್ಟೋಬರ್ 17ರಂದು ಕೊಡಗು ಜಿಲ್ಲೆ ಮಡಿಕೇರಿ ಸಮೀಪ ಕಾಲೂರು ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದವರು.
ಕೊಂಬಾರಣ್ಣ ಗಣಪತಿ ಮತ್ತು ಚಿನ್ನಮ್ಮ ದಂಪತಿಯ ಎರಡನೆಯ ಪುತ್ರ. 1974ರಲ್ಲಿ ಸೋಮವಾರ ಪೇಟೆಯಲ್ಲಿ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಮುಂದೆ, ಬೆಂಗಳೂರು ಬಿಎಂಎಸ್ ಕಾಲೇಜಿನಲ್ಲಿ ಕಾನೂನು ವ್ಯಾಸಂಗ. ಕಾನೂನು ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಬೋಪಯ್ಯ ಅವರು 1980ರಲ್ಲಿ ಮಡಿಕೇರಿಗೆ ವಾಪಸಾಗಿ, ಕಾನೂನು ವೃತ್ತಿಗೆ ಅಂಕಿತರಾದರು.
ಅವರ ಪತ್ನಿ ಕುಂತಿ ಅವರು ಸೋಮವಾರಪೇಟೆಯ ಕುಡಿಗೆ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ದಂಪತಿಯ ಹಿರಿಯ ಪುತ್ರಿ ಪ್ರಜ್ಞಾ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಎರಡನೆಯ ಪುತ್ರಿ ಯಶ್ಚಿಕಾ ಕಾಲೇಜಿನಲ್ಲಿ ಓದುತ್ತಿದ್ದಾರೆ.
ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಸಂಘ ಪರಿವಾರದ ಒಡನಾಟ ಸಂಪಾದಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಸದಸ್ಯರಾಗಿದ್ದರು. ತುರ್ತುಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೀಡಾದರು.
1990ರ ದಶಕದ ಆರಂಭದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಬಳಿಕ ಅಧ್ಯಕ್ಷರಾಗಿ ನೇಮಕಗೊಂಡರು. 2004ರಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ವಿಧಾನಸಭೆಗೆ ಆರಿಸಿಬಂದರು. 2008ರಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಆಗ ಹಂಗಾಮಿ ಸ್ಪೀಕರ್ ಆಗಿ ನೂತನ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಂದೆ ಮುಂದೆ ಡೆಪ್ಯುಟಿ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಗೊಂಡರು.
2009ರ ಡಿಸೆಂಬರ್ 30ರಂದು ಜಗದೀಶ್ ಶೆಟ್ಟರ್ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಕಾಂಗ್ರೆಸಿನ ಟಿಬಿ ಜಯಚಂದ್ರ ಅವರನ್ನು ಸೋಲಿಸಿ, ಪೂರ್ಣ ಪ್ರಮಾಣದಲ್ಲಿ ಸ್ಪೀಕರ್ ಆಗಿ ಬೋಪಯ್ಯ ನೇಮಕಗೊಂಡರು. 2011ರ ಅಕ್ಟೋಬರಿನಲ್ಲಿ 11 ಶಾಸಕರನ್ನು ಕಾನೂನುಬಾಹಿರವಾಗಿ ಅನರ್ಹಗೊಳಿಸಿ, ಬಿಜೆಪಿ ಸರ್ಕಾರವನ್ನು ಅರ್ಥಾತ್ ಯಡಿಯೂರಪ್ಪ ಸರಕಾರವನ್ನು ಉಳಿಸಿಕೊಂಡರು. ಮುಂದೆ ಸುಪ್ರೀಂಕೊರ್ಟಿನಿಂದ ಛೀಮಾರಿ ಹಾಕಿಸಿಕೊಂಡರು. ಯಡಿಯೂರಪ್ಪ ಅವರ ಕೆಂಗೆಣ್ಣಿಗೆ ಗುರಿಯಾಗಿದ್ದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications