ಸನಾತನ ಧರ್ಮವನ್ನು ಅವಹೇಳನ ಮಾಡೋ ಮಗ, ಮೈಸೂರು ಚಾಮುಂಡಿ ಬೆಟ್ಟಕ್ಕೆ ಉದಯನಿಧಿ ಸ್ಟಾಲಿನ್ ಅಮ್ಮ ದುರ್ಗಾ ಭೇಟಿ
ಸನಾತನ ಧರ್ಮ ನಿರ್ನಾಮ ಆಗಬೇಕು ಎಂದು ತಮಿಳುನಾಡಿನ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಎಂ.ಕೆ ಸ್ಟಾಲಿನ್ ಅವರು ಹೇಳಿದ್ದರು. ಇದೀಗ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ, ಉದಯನಿಧಿ ಸ್ಟಾಲಿನ್ ಅವರ ತಾಯಿ ದುರ್ಗಾ ಸ್ಟಾಲಿನ್ ಅವರು ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇವರು ಧರ್ಮ ಪಾಲನೆ ಮಾಡಿರುವುದನ್ನು ನೋಡಿ ಹಲವರು ಉದಯನಿಧಿ ಸ್ಟಾಲಿನ್ ಅವರನ್ನು ಟೀಕೆ ಮಾಡಿದ್ದಾರೆ. ಅಲ್ಲದೆ, ಮನೆಯಲ್ಲೇ ಸನಾತನ ಧರ್ಮವನ್ನು ತಡೆಯುವುದಕ್ಕೆ ಸಾಧ್ಯವಿಲ್ಲದೆ ಇರುವವರು ರಾಜ್ಯದಲ್ಲಿ, ದೇಶದಲ್ಲಿ ಸನಾತನ ಧರ್ಮವನ್ನು ತಡೆಯುವ ಮಾತನಾಡುತ್ತಿದ್ದಾರೆ ಎಂದು ಹಲವು ನೆಟ್ಟಿಗರು ಟೀಕೆ ಮಾಡಿದ್ದಾರೆ.
ತಮ್ಮ ಸಹೋದರಿ ಜಯಂತಿ ಮತ್ತು ಮಾಜಿ ಶಾಸಕಿ ರಾಜೇಂದ್ರನ್ ಅವರ ಪತ್ನಿ ಇಂದಿರಾ ರಾಜೇಂದ್ರನ್ ಅವರೊಂದಿಗೆ ಮಡಿಕೇರಿಯಿಂದ ಚೆನ್ನೈಗೆ ಹೋಗುವ ಮಾರ್ಗದಲ್ಲಿ ಮೈಸೂರಿಗೆ ಭೇಟಿ ನೀಡಿದ್ದಾರೆ. ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜೆ. ರೂಪಾ ಅವರು ದುರ್ಗಾ ಸ್ಟಾಲಿನ್ ಅವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ದೃಢಪಡಿಸಿದ್ದಾರೆ. ಮಾಜಿ ಸಚಿವೆ ಮತ್ತು ಹಿರಿಯ ಜೆಡಿ (ಎಸ್) ನಾಯಕ ಜಿ.ಟಿ. ದೇವೇಗೌಡ ಅವರ ಪತ್ನಿ ಲಲಿತಾ ಅವರು, ಡಿಎಂಕೆ ಮುಖ್ಯಸ್ಥರ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು, ಸೋಮವಾರ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನ ಮತ್ತು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ತಮ್ಮ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.

ದುರ್ಗಾ ಅವರು ತಮ್ಮ ಪತಿಯ ಮೂಲಕ ಸ್ಟಾಲಿನ್ ಅವರ ಕುಟುಂಬಕ್ಕೆ ಆಪ್ತರಾಗಿರುವ ತಮ್ಮ ಮಗಳು ಅನ್ನಪೂರ್ಣ ಅವರ ಆಹ್ವಾನದ ಮೇರೆಗೆ ತಮ್ಮ ಮನೆಗೆ ಸೌಜನ್ಯ ಭೇಟಿ ನೀಡಿದ್ದಾರೆ ಎಂದು ಲಲಿತಾ ಅವರು ಹೇಳಿದ್ದಾರೆ. ದುರ್ಗಾ ಸ್ಟಾಲಿನ್ ಅವರು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ, ನಾವು ಅವರನ್ನು ನಮ್ಮ ಮನೆಗೆ ಕಾಫಿ ಕುಡಿಯಲು ಆಹ್ವಾನಿಸಿದ್ದೇವೆ ಎಂದು ಹೇಳಿದ್ದಾರೆ. ಮುಂದುವರಿದು ದುರ್ಗಾ ಸ್ಟಾಲಿನ್ ಮತ್ತು ಅವರೊಂದಿಗೆ ಬಂದ ಇತರರನ್ನು ಮೈಸೂರಿನ ವಿ.ವಿ. ಮೊಹಲ್ಲಾದಲ್ಲಿರುವ ತಮ್ಮ ಮನೆಯಲ್ಲಿ ಆತಿಥ್ಯ ವಹಿಸಿದ ಸಂದರ್ಭದಲ್ಲಿ ಜಿ.ಟಿ ದೇವೇಗೌಡರು ಅವರು ಸಹ ಹಾಜರಿದ್ದರು.
ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದ ಉದಯನಿಧಿ ಸ್ಟಾಲಿನ್
ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿದ ಹೇಳಿಕೆಗಳು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸನಾತನ ಧರ್ಮವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಅಲ್ಲದೆ ಇದು ಜನರನ್ನು ಜಾತಿ-ಲಿಂಗದ ಹೆಸರಿನಲ್ಲಿ ವಿಭಜಿಸುತ್ತದೆ ಎಂದು ಆರೋಪಿಸಿದ್ದರು, ಟೀಕೆ ಮಾಡಿದ್ದರು. ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಮೇಲೆ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ತಮ್ಮ ಹಿಂದಿನ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದರು. ಸನಾತನ ಧರ್ಮವು ಜನರನ್ನು ವಿಭಜಿಸುತ್ತದ. ಹೀಗಾಗಿ, ಅದನ್ನು ನಿರ್ನಾಮ ಮಾಡಬೇಕು ಎಂದು ಪ್ರತಿಪಾದಿಸಿದ್ದರು.
DMK President MK Stalin’s wife, Durga Stalin, visits Sri Nimishamba Temple.
— Aman Dubey (@Amandud2) June 2, 2026
While her ignorant son Udhayanidhi Stalin speaks in the Assembly about eradicating Sanatan Dharma. pic.twitter.com/hQGZFCychQ












Click it and Unblock the Notifications