"ಪಹಲ್ಗಾಮ್ ದಾಳಿ ನಂತರ ಪ್ರಧಾನಿ ನರೇಂದ್ರ ಮೋದಿ ಎಲ್ಲಿಗೆ ಹೋಗಿದ್ದರು ?"
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಾಗೂ ಇದಾದ ಮೇಲೆ ಭಾರತದಲ್ಲಿ ನಡೆದ ವಿವಿಧ ಬೆಳವಣಿಗೆಗಳ ಬಗ್ಗೆ ಖರ್ಗೆ ಅವರು ರಿಯಾಕ್ಟ್ ಮಾಡಿದ್ದು ವಿವಿಧ ವಿಚಾರಗಳ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ಸನ್ಮಾನ್ಯ #TrollMinister PriyankKharge ಪ್ರಿಯಾಂಕ್ ಖರ್ಗೆ ಅವರೇ ಅಂತಲೇ ಬಿಜೆಪಿ ತರಾಟೆಗೆ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಮೋದಿ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದೇನು ಎನ್ನುವ ವಿವರ ನೋಡೋಣ.
ಪಹಲ್ಗಾಮ್ ದಾಳಿಯಾಗಿ ಮೇ 13ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿ ಹೋಗಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ ಎನ್ನಲಾಗಿದ್ದು. ಇದನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಪಹಲ್ಗಾಮ್ ಘಟನೆ ನಡೆದ ತತಕ್ಷಣ ಪ್ರಧಾನಿ ನರೇಂದ್ರ ಮೋದಿ @narendramodi ಅವರು ತಮ್ಮ ವಿದೇಶ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಂಡ ಕಾರಣದಿಂದ ಇಂದು ಭಯೋತ್ಪಾದಕ ಪಾಕಿಸ್ತಾನ ಬಾಲ ಮುದುರಿ ಕೂತಿದೆ ಎಂದಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು. ಸಮಾಜದ ಸ್ವಾಸ್ಥ್ಯ ಹದಗೆಡಿಸುವ "ಚೀಫ್" ಅನ್ನು ಫಾಲೋ ಮಾಡಿದ ರೀತಿ, ನೀವು ಪ್ರಧಾನಿಯವರ ಅಧಿಕೃತ ಖಾತೆಗಳನ್ನು ಫಾಲೋ ಮಾಡಿದ್ದರೆ, ಈ ರೀತಿಯ ಅರ್ಥವಿಲ್ಲದ ವ್ಯರ್ಥ ಪ್ರಲಾಪ ಮಾಡುವುದು ತಪ್ಪುತ್ತಿತ್ತು.
ಅಷ್ಟಕ್ಕೂ ನೀವು ಹಾಗೂ ನಿಮ್ಮ ತಂದೆಯವರು 40 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಕಲಬುರಗಿ ಜಿಲ್ಲೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಸತತವಾಗಿ ಕೊನೆಯ ಸ್ಥಾನಗಳಿಸಿದರೂ ಇದುವರೆಗೂ ನೀವೇಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಪ್ರಶ್ನೆ ಮಾಡಿದೆ.
ಅಂದ ಹಾಗೆ ಕಲುಷಿತ ನೀರು ಕುಡಿದು ಕರ್ನಾಟಕದಲ್ಲಿ ಸಾವಿರಾರು ಜನ ಅಸ್ವಸ್ಥರಾದಾಗ ನೀವೇಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಒಂದೇ ಒಂದು ಸಭೆ ನಡೆಸಿಲ್ಲ.. ಕಲ್ಬುರ್ಗಿಯಲ್ಲಿ ಕೊಲೆ-ದರೋಡೆ-ಅತ್ಯಾಚಾರ-ಅಂಬೇಡ್ಕರ್-ಬಸವಣ್ಣರ ಪ್ರತಿಮೆಗೆ ಹಾನಿ ನಡೆದಂತಹ ಸಂದರ್ಭದಲ್ಲಿ, ನೀವೇಕೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಒಂದೇ ಒಂದು ಸಭೆ ನಡೆಸಿಲ್ಲ. ಮೊದಲು ನಿಮ್ಮ ಹಳವಂಡಗಳನ್ನು ಸರಿಪಡಿಸಿಕೊಳ್ಳಿ, ಮೋದಿ ನಾಯಕತ್ವ ಹೇಗಿದೆ ಎಂಬುದನ್ನು ತಿಳಿಯಲು ಒಮ್ಮೆ ನಿಮ್ಮ ಸ್ವಂತ ಖರ್ಚಿನಲ್ಲಿ ಆದಂಪುರ ವಾಯುನೆಲೆಗೆ ಭೇಟಿ ನೀಡಿ ಎಂದು ಟಾಂಗ್ ನೀಡಲಾಗಿದೆ.
ವಿದೇಶಾಂಗ ನೀತಿ ಗುತ್ತಿಗೆಗೆ ನೀಡಲಾಗಿದೆಯೇ ?
ಇನ್ನು ಈಚೆಗೆ ಭಾರತದ ವಿದೇಶಾಂಗ ನೀತಿಯನ್ನು ಹೊರ ಗುತ್ತಿಗೆ ನೀಡಿದ್ದೇವೆಯೇ ಎಂದು ಸಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದರು. ಈ ವಿಚಾರ ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.












Click it and Unblock the Notifications