• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಎಲ್ಲೆಲ್ಲಿ ಹೊಸ ವಿಮಾನ ನಿಲ್ದಾಣ..? ಕಾಮಗಾರಿಯ ಸ್ಥಿತಿಗತಿ ಹೇಗಿದೆ ತಿಳಿಯಿರಿ

|
Google Oneindia Kannada News

ಬೆಂಗಳೂರು, ಡಿ. 05: ರಾಜ್ಯದ ವಿಮಾನಯಾನ ಬೆಳವಣಿಗೆಗೆ ಮುಂದಿನ ವರ್ಷ ನಿಜಕ್ಕೂ ಉತ್ತಮವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಹಲವು ಜಿಲ್ಲೆಗಳಲ್ಲಿ ಸಾಲು ಸಾಲು ವಿಮಾನ ನಿಲ್ದಾಣ ಕಾಮಗಾರಿಗಳು ನಡೆಯುತ್ತಿವೆ. ಜೊತೆಗೆ ಸಾಲು ಸಾಲು ಯೋಜನೆಗಳು ಪ್ರಕಟವಾಗಿವೆ. ಹೀಗಾಗಿ ಮುಂದಿನ ವರ್ಷದಲ್ಲಿ ಮೂರು, ನಾಲ್ಕು ವಿಮಾನ ನಿಲ್ದಾಣಗಳನ್ನು ನಾವು ನಿರೀಕ್ಷಿಸಬಹುದು.

ಹೌದು, 2023 ರ ಆರಂಭದಲ್ಲಿ ಶಿವಮೊಗ್ಗ ಮತ್ತು ವಿಜಯಪುರದಲ್ಲಿ ಹೊಚ್ಚಹೊಸ ವಿಮಾನ ನಿಲ್ದಾಣಗಳು ಕಾರ್ಯಾರಂಭಗೊಳ್ಳಲಿವೆ, ಆದರೆ ಹಾಸನದಲ್ಲಿ ವರ್ಷಾಂತ್ಯದ ವೇಳೆಗೆ ಒಂದು ವಿಮಾನ ನಿಲ್ದಾಣ ಆರಂಭವಾಗುವ ನಿರೀಕ್ಷೆಯಿದೆ. ಈ ತಿಂಗಳು, ನವೆಂಬರ್‌ನಲ್ಲಿ ಔಪಚಾರಿಕವಾಗಿ ಉದ್ಘಾಟನೆಗೊಂಡ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಎರಡನೇ ಟರ್ಮಿನಲ್‌ನಲ್ಲಿ ದೇಶೀಯ ಕಾರ್ಯಾಚರಣೆಗಳು ಪ್ರಾರಂಭವಾಗಲಿವೆ. ಕೊಡಗಿನಲ್ಲಿ ಹೆಲಿಪೋರ್ಟ್ ಸಿದ್ಧವಾಗುತ್ತಿದೆ, ಮತ್ತು ಪೈಲಟ್‌ಗಳಿಗೆ ತರಬೇತಿ ನೀಡಲು ಎರಡು ಹೊಸ ಫ್ಲೈಯಿಂಗ್ ತರಬೇತಿ ಸಂಸ್ಥೆಗಳನ್ನು ಬೆಳಗಾವಿಯಲ್ಲಿ ಪ್ರಾರಂಭಿಸಲಾಗುವುದು.

Bengaluru Traffic : ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿಸ್ತೃತ ವರದಿBengaluru Traffic : ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿಸ್ತೃತ ವರದಿ

"ದೇಶದಲ್ಲಿ ಮೂರನೇ ಅತಿದೊಡ್ಡ ದೇಶೀಯ ಆಪರೇಟರ್ ಆಗಿರುವ ಬೆಂಗಳೂರು ವಿಮಾನ ನಿಲ್ದಾಣ ಅತ್ಯಂತ ಪ್ರಮುಖವಾಗಿದೆ. ನಾವು ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿಯಲ್ಲಿಯೂ ಉತ್ತಮ ವಿಮಾನ ನಿಲ್ದಾಣಗಳನ್ನು ಹೊಂದಿದ್ದೇವೆ " ಎಂದು ವಾಣಿಜ್ಯ ಮತ್ತು ಕೈಗಾರಿಕೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.

ಯಾವುದೇ ನಗರವಿರಲಿ, ವಾಯು ಸಂಪರ್ಕದ ವಿಭಾಗವು ವ್ಯಾಪಾರ ಅವಕಾಶಗಳು, ಕೈಗಾರಿಕಾ ಬೆಳವಣಿಗೆ, ಕೃಷಿ ಸರಕುಗಳ ಮಾರುಕಟ್ಟೆ ಮತ್ತು ಪ್ರವಾಸೋದ್ಯಮಕ್ಕೆ ಭಾರೀ ಕೊಡುಗೆ ನೀಡುತ್ತದೆ.

ಜನವರಿ ಮೊದಲ ವಾರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ

ಜನವರಿ ಮೊದಲ ವಾರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ

384 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಶಿವಮೊಗ್ಗದ ವಿಮಾನ ನಿಲ್ದಾಣದ ಕಾಮಗಾರಿಗಳು ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಬಳಿಕ ಶಿವಮೊಗ್ಗವು ವಿಮಾನಯಾನ ನಕ್ಷೆಯಲ್ಲಿ ಪಾದಾರ್ಪಣೆ ಮಾಡಲಿದೆ. ಕೆಂಪೇಗೌಎ ವಿಮಾನ ನಿಲ್ದಾಣದ ಬಳಿಕ 3.2 ಕಿಮೀ ಉದ್ದದ ರನ್‌ವೇ ಹೋದಿರುವ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡುವ ಸಾಧ್ಯತೆ ಇದೆ.

ಇದು ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ನೆರೆಯ ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡುವುದರ ಜೊತೆಗೆ ಕಬ್ಬಿಣ ಮತ್ತು ಉಕ್ಕು, ಕಾಗದ ಕಾರ್ಖಾನೆಗಳು, ಡೈರಿ ಘಟಕಗಳು, ಸಾಬೂನು ಮತ್ತು ಆಟೋಮೊಬೈಲ್ ಆಧಾರಿತ ಘಟಕಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಕರಕುಶಲ ವಲಯದಲ್ಲಿ 13,000 ಕ್ಕೂ ಹೆಚ್ಚು ಸ್ವಯಂ ಉದ್ಯೋಗಿ ಕುಶಲಕರ್ಮಿಗಳು ಸಹ ಪ್ರಯೋಜನ ಪಡೆಯುತ್ತಾರೆ.

ವಿಮಾನ ನಿಲ್ದಾಣ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡದ ಎಂಟು ಮಹಡಿಗಳು, ವಿದ್ಯುತ್ ಸಬ್‌ಸ್ಟೇಷನ್‌ಗಳ ಹತ್ತು ವಾಚ್ ಟವರ್‌ಗಳು, ಅಪ್ರೋಚ್ ರಸ್ತೆ ಮತ್ತು 13.5 ಕಿಮೀ ಕಾಂಪೌಂಡ್ ಗೋಡೆ ಪೂರ್ಣಗೊಂಡಿದೆ. ಏಪ್ರನ್ ನಿರ್ಮಾಣ ಕಾರ್ಯ ಮತ್ತು ಕಮಲದ ಆಕಾರದ ಟರ್ಮಿನಲ್ ಮುಕ್ತಾಯದ ಹಂತದಲ್ಲಿದೆ ಎಂದಿದ್ದಾರೆ.

2023 ರ ಅಂತ್ಯದ ವೇಳೆಗೆ ಸಿದ್ದವಾಗಲಿದೆ ಹಾಸನ ವಿಮಾನ ನಿಲ್ದಾಣ

2023 ರ ಅಂತ್ಯದ ವೇಳೆಗೆ ಸಿದ್ದವಾಗಲಿದೆ ಹಾಸನ ವಿಮಾನ ನಿಲ್ದಾಣ

ನಾಲ್ಕು ದಶಕಗಳಿಂದ ಹಾಸನ ವಿಮಾನ ನಿಲ್ದಾಣವು ಹೊಸ ಅಡಚಣೆಗಳನ್ನು ಎದುರಿಸುತ್ತಲೇ ಇದೆ. ಹಾಸನ ನಗರದಿಂದ 6 ಕಿಮೀ ದೂರದಲ್ಲಿರುವ ಭುವನಹಳ್ಳಿ ಬಳಿ 450 ಎಕರೆ ಪ್ರದೇಶದಲ್ಲಿ 360 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಬೀದರ್ ಮತ್ತು ಕಲಬುರಗಿಯ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹಾಸನ ವಿಮಾನ ನಿಲ್ದಾಣ ಯೋಜನೆಯು 2023 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ರನ್‌ವೇ ಮತ್ತು ಪ್ಲಾಟ್‌ಫಾರ್ಮ್‌ನ ನಿರ್ಮಾಣದೊಂದಿಗೆ ಶೇಕಡಾ 40 ಕ್ಕಿಂತ ಹೆಚ್ಚು ಕೆಲಸ ಪೂರ್ಣಗೊಂಡಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದ (ಕೆಎಸ್‌ಐಐಡಿಸಿ) ಅಧ್ಯಕ್ಷ ಶೈಲೇಂದ್ರ ಕೆ ಬೆಲ್ದಾಳೆ ಹೇಳಿದ್ದಾರೆ.

ಈಗಷ್ಟೇ ಹೊಸ ಅಡಚಣೆಯೊಂದು ತಲೆದೋರಿದ್ದು, ವಿಮಾನ ನಿಲ್ದಾಣವನ್ನು ದಾಟುವ 220 ಕೆವಿ ವಿದ್ಯುತ್ ಮಾರ್ಗವು ರನ್‌ವೇ ಮತ್ತು ಲ್ಯಾಂಡಿಂಗ್‌ಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಅದನ್ನು ಸ್ಥಳಾಂತರಿಸಲು ಪರ್ಯಾಯ ಭೂಮಿಯನ್ನು ಹುಡುಕಲಾಗುತ್ತಿದೆ. ಹೊಸದಾಗಿ ಲೈನ್ ಅಳವಡಿಸಲು ಹಾಗೂ ಟವರ್ ನಿರ್ಮಾಣಕ್ಕೆ ಬೇಕಾದ ಪರ್ಯಾಯ ಭೂಮಿಗೆ ಉತ್ತಮ ಪರಿಹಾರ ನೀಡಬೇಕು ಎಂದು ಭೂ ಮಾಲೀಕರು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮಾತನಾಡಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿದ್ಯುತ್‌ ಮಾರ್ಗ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಕೊಡಗಿನಲ್ಲಿ ಮೊದಲು ಹೆಲಿಪೋರ್ಟ್, ನಂತರ ವಿಮಾನ ನಿಲ್ದಾಣ

ಕೊಡಗಿನಲ್ಲಿ ಮೊದಲು ಹೆಲಿಪೋರ್ಟ್, ನಂತರ ವಿಮಾನ ನಿಲ್ದಾಣ

ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೊಡಗಿನಲ್ಲಿ ಹೆಲಿಪೋರ್ಟ್ ಅಭಿವೃದ್ಧಿಪಡಿಸುವುದು ಆದ್ಯತೆಯಾಗಿದೆ. ಬಳಿಕ ಮಿನಿ ವಿಮಾನ ನಿಲ್ದಾಣ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಇಲ್ಲಿನ ಕೂಡಿಗೆ ಹೆಲಿಪೋರ್ಟ್‌ಗೆ ಬಜೆಟ್‌ನಲ್ಲಿ 10 ಕೋಟಿ ರೂಪಾಯಿ ನೀಡಲಾಗಿದ್ದು, ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಯೋಜನೆಗೆ ಇನ್ನೂ ಟೆಂಡರ್ ಅಂತಿಮಗೊಂಡಿಲ್ಲ ಎಂದಿದ್ದಾರೆ.

2018 ರಲ್ಲಿ, ರಾಜ್ಯವು ಜಿಲ್ಲೆಯಲ್ಲಿ ಏರ್‌ಸ್ಟ್ರಿಪ್ ಅಭಿವೃದ್ಧಿಗೆ ಪ್ರಸ್ತಾಪಿಸಿತ್ತು. ಕುಶಾಲನಗರ ಬಳಿಯ ಕೂಡಿಗೆ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಅಧಿಕಾರಿಗಳು ಹಲವು ಬಾರಿ ಭೇಟಿ ನೀಡಿ ಕೃಷಿ ಇಲಾಖೆ ಒಡೆತನದ 49 ಎಕರೆ ಭೂಮಿಯನ್ನು ಯೋಜನೆಗೆ ಅಂತಿಮಗೊಳಿಸಲಾಗಿದೆ. ಹೆಲಿಪೋರ್ಟ್ ಕಾಮಗಾರಿ ಪೂರ್ಣಗೊಂಡ ನಂತರ ಅದನ್ನು ಕೈಗೆತ್ತಿಕೊಳ್ಳಲಾಗುವುದು.

ದಾವಣಗೆರೆಯಲ್ಲಿ ವಿಮಾನ ನಿಲ್ದಾಣಕ್ಕೆ ಜಮೀನು ಗುರುತಿಸಲಾಗಿದೆ

ದಾವಣಗೆರೆಯಲ್ಲಿ ವಿಮಾನ ನಿಲ್ದಾಣಕ್ಕೆ ಜಮೀನು ಗುರುತಿಸಲಾಗಿದೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದರ ನಿರ್ಮಾಣದಿಂದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯನಗರ ಮತ್ತು ಕೊಪ್ಪಳಕ್ಕೆ ಆರ್ಥಿಕ ಉತ್ತೇಜನ ನೀಡಲಿದೆ. ವಿಮಾನ ನಿಲ್ದಾಣಕ್ಕೆ ಆನಗೋಡು ಗ್ರಾಮದ ಬಳಿ ಜಮೀನು ಗುರುತಿಸಲಾಗಿದೆ.

ಬೆಳಗಾವಿಯಲ್ಲಿ ಎರಡು ಫ್ಲೈಯಿಂಗ್ ಶಾಲೆಗಳು: 1942 ರಲ್ಲಿ ಸ್ಥಾಪಿತವಾದ ಬೆಳಗಾವಿಯ ವಿಮಾನ ನಿಲ್ದಾಣವು ಸಾಂಬ್ರಾದಲ್ಲಿ ಸೂರತ್, ಅಹಮದಾಬಾದ್, ಜೋಧಪುರ, ಮುಂಬೈ, ನಾಗ್ಪುರ, ಇಂದೋರ್, ತಿರುಪತಿ, ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರು ಹತ್ತು ನಗರಗಳನ್ನು ಸಂಪರ್ಕಿಸುತ್ತದೆ.

ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಮೌರ್ಯ ಮಾತನಾಡಿ, ಎರಡು ಫ್ಲೈಯಿಂಗ್ ತರಬೇತಿ ಸಂಸ್ಥೆಗಳನ್ನು ಮಂಜೂರು ಮಾಡಿರುವುದು ನಮ್ಮ ಅದೃಷ್ಟ. ರೆಡ್ ಬರ್ಡ್ ಫ್ಲೈಯಿಂಗ್ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಮತ್ತು ಪೈಲಟ್‌ಗಳ ತರಬೇತಿಯನ್ನು ಈ ವರ್ಷಾಂತ್ಯದಲ್ಲಿ ಪ್ರಾರಂಭಿಸಬಹುದು. ಮುಂದಿನ ವರ್ಷದಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಹಲವು ವರ್ಷಗಳ ಬೇಡಿಕೆ ಉಡುಪಿ ವಿಮಾನ ನಿಲ್ದಾಣ ಯೋಜನೆ

ಹಲವು ವರ್ಷಗಳ ಬೇಡಿಕೆ ಉಡುಪಿ ವಿಮಾನ ನಿಲ್ದಾಣ ಯೋಜನೆ

ದೇವಸ್ಥಾನದ ಪಟ್ಟಣವಾದ ಉಡುಪಿಯ ನಿವಾಸಿಗಳು ಹಲವಾರು ವರ್ಷಗಳಿಂದ ಬೇಡಿಕೆಯಿದ್ದು, ಹತ್ತಿರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವರ್ಷ ಜುಲೈನಲ್ಲಿ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪಿ ಸಿ ರಾವ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದು, ಉದೇ ದೇಶ್ ಕಾ ಆಮ್ ನಾಗರಿಕ್ ಯೋಜನೆಯಡಿಯಲ್ಲಿ ಉಡುಪಿಗೆ ವಿಮಾನ ನಿಲ್ದಾಣವನ್ನು ಶೀಘ್ರವಾಗಿ ನಿರ್ಮಿಸುವಂತೆ ಮನವಿ ಮಾಡಿದ್ದರು.

2017ರಲ್ಲಿ ಮುಂಬೈ ಸಂಸ್ಥೆಯೊಂದು 500 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿತ್ತು. ಬೈಂದೂರು ತಾಲೂಕಿನ ಒತ್ತಿನೆಣೆಯಲ್ಲಿ 250 ಎಕರೆ ಭೂಮಿಯನ್ನು ಯೋಜನೆಗೆ ಮೀಸಲಿಡಬೇಕು ಎಂದು ಅದರ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಭಟ್ಕಳ, ಕುಮಟಾ ಮತ್ತಿತರ ಪ್ರದೇಶಗಳಲ್ಲದೆ ಉಡುಪಿ, ಕುಂದಾಪುರ, ಬೈಂದೂರು ಭಾಗದ ಜನರಿಗೆ ಅನುಕೂಲವಾಗಲಿದೆ.

ವಿಮಾನಯಾನದ ಬೆಲೆಗಳ ಬಗ್ಗೆ ಭಾರೀ ಅಸಮಾಧಾನ

ವಿಮಾನಯಾನದ ಬೆಲೆಗಳ ಬಗ್ಗೆ ಭಾರೀ ಅಸಮಾಧಾನ

ರಾಜ್ಯದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭಾರ ಕಡಿಮೆ ಮಾಡಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಅತೀ ಅವಶ್ಯಕವಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚೆಗೆ ಕೆಳ ಮಹಡಿಯಲ್ಲಿ ಅರೈವಲ್ ಹಾಲ್ ತೆರೆದಿದೆ.

ಇನ್ನು, ವಾಯು ಸಾರಿಗೆ ಪ್ರಯಾಣ ದರದ ಬಗ್ಗೆ ಜನರಲ್ಲಿ ಭಾರೀ ಅಸಮಾಧಾನವಿದೆ. ಸಾವಿರಾರು ರೂಪಾಯಿ ಪಾವತಿಸಲು ಪ್ರಯಾಣಿಕರು ಕೂಡ ಬೇಸರ ಹೊರಹಾಕುತ್ತಾರೆ. ಇಷ್ಟರಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಬೆಂಗಳೂರು ಮತ್ತು ಹುಬ್ಬಳ್ಳಿಯನ್ನು ಸಂಪರ್ಕಿಸುವ ಕಾರಣ ವಾಯು ಸಾರಿಗೆಯನ್ನು ಆರಿಸುವವರ ಸಂಖ್ಯೆಯು ಕಡಿಮೆಯಾಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಬೆಲೆಯ ಜೊತೆಗೆ ವಿಮಾನ ಪ್ರಯಾಣದ ಮತ್ತೊಂದು ದೊಡ್ಡ ಅನಾನುಕೂಲವೆಂದರೆ ಪ್ರಯಾಣಿಕರು ನಗರದ ಹೊರವಲಯದಲ್ಲಿ ಇಳಿಯಬೇಕು, ಆದರೆ ರೈಲುಗಳು ಅವರನ್ನು ನಗರಕ್ಕೆ ತಂದು ಬಿಡುತ್ತವೆ.

(ಮಾಹಿತಿ ಕೃಪೆ- ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)

English summary
Where are the new Airports in Karnataka? Know the status of the works in hassan, belagavi, Kodagu, Shivamogga etc. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X