Bangaluru-Pune Expressway: ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಯಾವಾಗ? ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಿಗೆ ಉಪಯೋಗ?
Bangaluru-Pune Expressway: ಬಹುನಿರೀಕ್ಷಿತ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ ಯಾವಾಗ ಉದ್ಘಾನೆಯಾಗಲಿದೆ ಎನ್ನುವ ಪ್ರಶ್ನೆಗಳು ಹುಟ್ಟುಕೊಂಡಿದ್ದವು. ಆದರೆ ಇದೀಗ ಇದಕ್ಕೆ ಉತ್ತರ ದೊರೆತಿದೆ. ಹಾಗಾದ್ರೆ ಲೋಕಾರ್ಪಣೆ ಯಾವಾಗ ಹಾಗೂ ಇದರಿಂದ ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಿಗೆ ಉಪಯೋಗ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಿಸುತ್ತಿದೆ. ಇದು ನಿರ್ಮಾಣ ಪೂರ್ಣಗೊಂಡ್ರೆ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಕಡಿತವಾಗಲಿದೆ. ಅಲ್ಲದೆ, ರಾಜ್ಯದ ಹಲವು ಪ್ರದೇಶಗಳಿಗೆ ತುಂಬಾ ಉಪಯುಕ್ತ ಆದಂತಾಗಲಿದೆ.

ಎಲ್ಲೆಲ್ಲಿ ಹಾದುಹೋಗಲಿದೆ?: ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಒಟ್ಟು 12 ಜಿಲ್ಲೆಗಳ ಮೂಕ ಹಾದುಹೋಗಲಿದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಸತಾರಾ ಮತ್ತು ಪುಣೆ ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಲ್ಲಿ ಹಾದುಹೋಗಲಿದೆ?
* ಬೆಂಗಳೂರು ಗ್ರಾಮಾಂತರ
* ತುಮಕೂರು
* ಚಿತ್ರದುರ್ಗ
* ದಾವಣಗೆರೆ
* ವಿಜಯನಗರ
* ಕೊಪ್ಪಳ
* ಗದಗ
* ಬಾಗಲಕೋಟೆ
* ಬೆಳಗಾವಿ
ಮಹಾರಾಷ್ಟ್ರದ ಯಾವೆಲ್ಲಾ ಜಿಲ್ಲೆಗಳಲ್ಲಿ ಹಾದುಹೋಗಲಿದೆ?
* ಸಾಂಗ್ಲಿ
* ಸತಾರಾ
* ಪುಣೆ
ಯಾವಾಗ ಪೂರ್ಣ?: 700 ಕಿಲೋ ಮೀಟರ್ ಉದ್ದದ ಈ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದರೆ, ಬೆಂಗಳೂರು-ಪುಣೆ-ಮುಂಬೈ ನಗರಗಳ ನಡುವಿನ ಪ್ರಯಾಣದ ಸಮಯ ಕೇವಲ 15ರಿಂದ 7 ಗಂಟೆಗೆ ಇಳಿಕೆಯಾಗಲಿದೆ. ಇದರ ನಿರ್ಮಾಣಕ್ಕೆ ಸುಮಾರು ₹50,000 ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು 2028ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಈ ಎಕ್ಸ್‌ಪ್ರೆಸ್ ವೇ ಪುಣೆ ರಿಂಗ್ ರಸ್ತೆಯ ಕಂಜಾಲೆಯಿಂದ ಪ್ರಾರಂಭವಾಗಿ ಬೆಂಗಳೂರು ಮಹಾನಗರ ವ್ಯಾಪ್ತಿಯ ಸ್ಯಾಟಲೈಟ್ ರಿಂಗ್ ರಸ್ತೆಯ ಮುತಗಡಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಇದರಿಂದ ದಟ್ಟಣೆ ಕಡಿಮೆ ಆದಂತಾಗಲಿದೆ. ಅಲ್ಲದೆ, ಹಲವು ಯೋಜನೆಗಳ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿದಂತಾಗಲಿದೆ. ಭಾರತ್‌ಮಾಲಾ ಪರಿಯೋಜನ ಹಂತ 2 ಉಪಕ್ರಮದ ಭಾಗವಾಗಿರುವ ಈ ಎಕ್ಸ್‌ಪ್ರೆಸ್ ವೇನಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 120 ಕೀಲೋ ಮೀಟರ್ ಆಗಿದೆ.
ಅಗ್ರಣಿ, ಚಿಕ್ಕ ಹಗರ್, ಚಂದ ನಾಡಿ, ನೀರಾ, ಯೆರಳ, ಕೃಷ್ಣ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ, ವೇದಾವತಿ ನದಿಗಳ ಮೂಲಕ ಈ ಹೆದ್ದಾರಿ ಹಾದುಹೋಗಲಿದೆ. ಅಲ್ಲದೆ. 6 ರೋಡ್ ಓವರ್ ಬ್ರಿಡ್ಜ್‌ಗಳು (ಆರ್‌ಒಬಿಗಳು), 22 ಇಂಟರ್‌ಚೇಂಜ್‌ಗಳು, 55 ಫ್ಲೈಓವರ್‌ಗಳು, 14 ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಕ್ರಾಸಿಂಗ್ ಪಾಯಿಂಟ್‌ಗಳನ್ನು ಒಂಗೊಂಡಿರಲಿದೆ.
ಪ್ರಯೋಜನೆಗಳೇನು?
* ರಿಯಲ್ ಎಸ್ಟೇಟ್: ಈ ಹೆದ್ದಾರಿ ನಿರ್ಮಾಣ ಆದ್ರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಲ್ಲೂ ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ನಗರಾಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಕಾಗಿದೆ.
* ಆರ್ಥಿಕ ಬೆಳವಾಣಿಗೆ: ಈ ಎಕ್ಸ್‌ಪ್ರೆಸ್‌ವೇ ವ್ಯಾಪಾರ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ, ಪ್ರಾದೇಶಿಕ ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚು ಸಹಾಯಕವಾಗಲಿದೆ.
* ಉದ್ಯೋಗ ಸೃಷ್ಟಿ: ಈ ಯೋಜನೆಯು ನಿರ್ಮಾಣ ಹಂತದಲ್ಲಿದ್ದು, ಇದು ಪೂರ್ಣಗೊಂಡರೆ ಸಂಬಂಧಿತ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ತೆರೆದುಕೊಳ್ಳುವ ಸಾಧ್ಯತೆ ಇದೆ. ಹೆದ್ದಾರಿ 2028ರ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications