Ramachandra Rao: ಡಿಜಿಪಿ ರಾಮಚಂದ್ರ ರಾವ್ ಕೇಸ್; ತಪ್ಪು ಸಾಬೀತಾದರೆ ಶಿಕ್ಷೆ ಏನು?
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಕೆ.ರಾಮಚಂದ್ರರಾವ್ ರಾವ್ ಅವರು ಕಚೇರಿಯಲ್ಲಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದ್ದು, ಕರ್ನಾಟಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದೆ. ಇದರಿಂದ ಮುಜುಗರ ಎದುರಿಸಿರುವ ಗೃಹ ಇಲಾಖೆಯು ರಾಮಚಂದ್ರ ರಾವ್ ಅವರನ್ನು ಈಗಾಗಲೇ ಅಮಾನತು ಮಾಡಿ, ತನಿಖೆ ಆರಂಭಿಸಿದೆ.
ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಮಹಿಳೆಯೋರ್ವರ ಜೊತೆ ಡಿಜಿಪಿ ಇರುವ ಖಾಸಗಿ ವಿಡಿಯೋ ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದ್ದು, ವಿಡಿಯೋದಲ್ಲಿರೋದು 1 ವರ್ಷದ ಹಿಂದೆ ಸೆರೆಯಾಗಿದ್ದ ದೃಶ್ಯಗಳು ಎಂಬುದು ಗೊತ್ತಾಗಿವೆ. ಕಚೇರಿಯಲ್ಲಿ ಕುಳಿತು ಪೊಲೀಸ್ ಯೂನಿಫಾರಂನಲ್ಲಿಯೇ ರಾಮಚಂದ್ರರಾವ್ ಮುತ್ತಿಟ್ಟಿರುವ ಹಸಿಬಿಸಿ ದೃಶ್ಯದ ವಿಡಿಯೋಗಳು ವೈರಲ್ ಆಗಿದ್ದು, ಪೊಲೀಸ್ ಇಲಾಖೆ ತೀವ್ರ ಮುಜುಗರಕ್ಕೊಳಗಾಗಿದೆ.

ಅತ್ತ ಮಗಳು ರನ್ಯಾರಾವ್ ಚಿನ್ನ ಕಳ್ಳಸಾಗಾಣಿಕೆ ಕೇಸ್ನಕಲ್ಲಿ ಸಿಕ್ಕಿ ಒದ್ದಾಡುತ್ತಿದ್ದರೆ ಇತ್ತ ಮಲತಂದೆಯ ರಾಸಲೀಲೆಯ ವಿಡಿಯೋ ವೈರಲ್ ಆಗಿರೋದು ಜನ ಹುಬ್ಬೇರುವಂತೆ ಮಾಡಿದೆ. ಈ ಹಿಂದೆ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದ ಪ್ರಕರಣ ಸಂಬಂಧ ನಟಿ ರನ್ಯಾ ರಾವ್ ಬಂಧನ ಬೆನ್ನಲ್ಲೇ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರೂ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ನಟಿ ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆಗೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿತ್ತು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇವರ ಮಲಮಗಳು ರನ್ಯಾ ರಾವ್ ಭಾಗಿ ಪ್ರಕರಣ ಸಂಬಂಧ ಪೊಲೀಸರ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಮಾರ್ಚ್ 2025ರಲ್ಲಿ ಇವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು.
ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್ ವಿಚಾರ ಸಂಬಂಧ ಅಧಿಕಾರಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿ ಬಂದಿದ್ದು, ಹಿಂದೆಯೂ ರಾಮಚಂದ್ರ ರಾವ್ ಇದೇ ರೀತಿ ನಡೆದುಕೊಂಡಿದ್ದರು, ಆದರೂ ಇಲಾಖೆಯಲ್ಲಿ ಮುಂದುವರಿದಿದ್ದಾರೆ. ಕಚೇರಿಯಲ್ಲೇ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿರೋದು, ಗೃಹ ಇಲಾಖೆಗೆ ದೊಡ್ಡ ಅಪಮಾನ ಎಂಬ ಮಾತುಗಳು ಕೇಳಿ ಬಂದಿವೆ.
ತಪ್ಪು ಸಾಬೀತಾದರೆ ಶಿಕ್ಷೆ ಏನು?
ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ರೆ ಅಮಾನತು ಮಾಡುವುದು ಒಂದೇ ಶಿಕ್ಷೆ ನಾ.. ರಾಮಚಂದ್ರ ರಾವ್ ಅವರನ್ನ ಯಾಕೆ ವಜಾ ಮಾಡಲು ಆಗ್ತಾ ಇಲ್ಲ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಯಾವುದೇ ಅಧಿಕಾರಿ ತಪ್ಪು ಮಾಡಿದಾಗ ಅಲ್ಲಿ ಮೊದಲು ಕೇಳಿ ಬರುವುದು ಅಮಾನತು. ಸಾರ್ವಜನಿಕರ ಆಕ್ರೋಶವನ್ನ ಕಡಿಮೆ ಮಾಡಲು ಅಮಾನತು ಮಾಡಲಾಗುತ್ತದೆ. ಕಾನೂನಿನ ಪ್ರಚಾರ ಅಮಾನತು ಎಂಬುದು ಶಿಕ್ಷೆ ಅಲ್ಲ. ಅಮಾನತು ಆದ ತಕ್ಷಣ ಅವರ ಸಂಬಳ ಪೂರ್ತಿ ಕಡಿತವಾಗಲ್ಲ.
ಸರ್ಕಾರಿ ನಿಯಮದ ಪ್ರಚಾರ ಅಮಾನತ ಆದ ಅಧಿಕಾರಿಗೆ ಮೊದಲು ಮೂರು ತಿಂಗಳು ಜೀವನಾಧಾರ ಭತ್ಯೆಯನ್ನ 50% ಸಂಬಳ ಕೊಡ್ತಾರೆ. ಮೂರು ತಿಂಗಳ ಕಳೆದ್ರು ತನಿಖೆ ಮುಗಿಯದಿದ್ದರೆ ಜೀವನಾಧಾರ ಭತ್ಯೆಯನ್ನ 75% ಹೆಚ್ಚಳ ಮಾಡಲಾಗುವುದು. ಕೆಲಸ ಮಾಡದಿದ್ರು, ಸಂಬಳ ಬರುತ್ತದೆ. ಅಮಾನತು ಮಾಡಲು ಎರಡು ಉದ್ದೇಶ ಇದೆ. ಮೊದಲ ಉದ್ದೇಶ, ಆ ಅಧಿಕಾರಿ ಅಧಿಕಾರದಲ್ಲಿ ಮುಂದುವರೆದ್ರೆ ತಮ್ಮ ಪವರ್ ಬಳಿಸಿಕೊಂಡು ಸಾಕ್ಷಿಯನ್ನ ನಾಶ ಮಾಡಬಹುದು, ಇನ್ನೊಂದು ಕಾರಣ ಅಂದ್ರೆ ಇಲಾಖೆಯ ಮಾನಮರ್ಯಾತೆ ಉಳಿಸಿಕೊಳ್ಳಲು.
ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ರೆ ಎರಡು ರೀತಿಯಲ್ಲಿ ಅಸ್ತ್ರ ಪ್ರಯೋಗ ಮಾಡಬಹುದು. ಮೊದಲ ಅಸ್ತ್ರ ಅಂದ್ರೆ ಇಲಾಖಾ ತನಿಖೆ. ಇಲಾಖಾ ತನಿಖೆ ಪೊಲೀಸ್ ಇಲಾಖೆಯ ಒಳಗಡೆ ನಡೆಯುತ್ತದೆ. ಇಲಾಖಾ ತನಿಖೆಯಲ್ಲಿ ಅಧಿಕಾರಿಯ ಕೆಲಸ ಹೋಗುತ್ತದೆ, ಜೈಲ್ ಆಗಲ್ಲ. ಎರಡನೇಯದ್ದು, ಕ್ರಿಮಿನಲ್ ಮೊಕದ್ದಮೆ ಅಂದ್ರೆ ಕೋರ್ಟ್ ನಲ್ಲಿ ನಡೆಯುವುದು, ಕ್ರಿಮಿನಲ್ ಕೇಸ್ ನಲ್ಲಿ ಅಪರಾಧ ಸಾಬೀತಾದರೆ ಜೈಲಿಗೆ ಹೋಗಬೇಕಾಗುತ್ತದೆ.
ರಾಮಚಂದ್ರ ರಾವ್ ಕೇಸ್ ನಲ್ಲಿ ಇಲಾಖಾ ತನಿಖೆ ನಡೆಯುತ್ತಿದೆ. ಯಾಕೆಂದ್ರೆ ರಾಮಚಂದ್ರ ರಾವ್ ಕೇಸ್ ನಲ್ಲಿ ಯಾವುದೇ ಸಂತ್ರಸ್ತರು ದೂರು ನೀಡಿಲ್ಲ. ಹೀಗಾಗಿ ಇಲಾಖಾ ತನಿಖೆ ನಡೆಯುತ್ತದೆ. ರಾಮಚಂದ್ರ ರಾವ್ ಮೇಲಿರುವ ಆರೋಪ ಕಚೇರಿಯನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವುದು. ಹೀಗಾಗಿ ಇಲಾಖಾ ಹಂತದಲ್ಲಿ ತನಿಖೆ ನಡೆಸಲಾಗುತ್ತದೆ. IPS ಅಧಿಕಾರಿಗಳು ಬರುವುದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತಾರೆ.
Tha ALL INDIA SERVICES RULES 1969 ಪ್ರಕಾರ ರಾಮಚಂದ್ರ ರಾವ್ ಅವರಿಗಿಂತ ಸಿನೀಯರ್ ಇರುವವರನ್ನ ತನಿಖಾ ಅಧಿಕಾರಿಯನ್ನ ನೇಮಕ ಮಾಡಲಾಗುತ್ತದೆ. ಈ ಅಧಿಕಾರಿ ಸಾಕ್ಷಿಯನ್ನ ಕಲೆ ಹಾಕುವುದು. ಈ ತನಿಖೆಯಲ್ಲಿ ಅಪರಾಧ ಸಾಬೀತಾದ್ರೆ ದೊಡ್ಡ ಮಟ್ಟದ ಶಿಕ್ಷೆ ಕೊಡಬಹುದು. ದೊಡ್ಡ ಮಟ್ಟದ ಶಿಕ್ಷೆ ಅಂದ್ರೆ Rank Reduction. ಈಗಿರುವ ಡಿಜಿಪಿ ಹುದ್ದೆಯಿಂದ ಐಜಿಪಿ ಅಥವಾ ಅದಕ್ಕಿಂತ ಕೆಳಗಿನ ಹುದ್ದೆ ನೀಡುವುದು. ಇದೊಂದು ರೀತಿ ಅಮಾನಕರ ಶಿಕ್ಷೆ. ಕಡ್ಡಾಯ ನಿವೃತ್ತಿ ನೀಡಲಾಗುವುದು. ಇನ್ನೊಂದು ಕೆಲಸದಿಂದ ತೆಗೆದು ಹಾಕುವುದು. ಈಗಾಗಲೇ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಅಮಾನತು ಮಾತ್ರವಲ್ಲ ಡಿಸ್‌ಮಿಸ್ ಕೂಡ ಮಾಡಬಹುದು ಎಂದು ಹೇಳಿದ್ದಾರೆ.
ಒಬ್ಬ ಅಧಿಕಾರಿಯನ್ನ ಡಿಸ್‌ಮಿಸ್ ಮಾಡಿದ್ರೆ, ಆ ಅಧಿಕಾರಿಗೆ ಬರುವ ಪಿಂಚಣಿ ಶಾಶ್ವತವಾಗಿ ಕಟ್ ಆಗುತ್ತದೆ. ಅಲ್ಲದೇ ಗ್ರಾಚ್ಯುಟಿ ಸೇರಿದಂತೆ ಯಾವುದೇ ಹಣ ಸಿಗುವುದಿಲ್ಲ, ಅಲ್ಲದೇ ಭವಿಷ್ಯದಲ್ಲಿ ಯಾವುದೇ ಹುದ್ದೆಗೂ ಸೇರಿಕೊಳ್ಳಲು ಸಾಧ್ಯವಾಗುವುದಿಲ್ಲ.












Click it and Unblock the Notifications