ಚಿನ್ನ ಉತ್ಪಾದನೆಯಲ್ಲಿ ದಾಖಲಾಯ್ತು ಹೊಸ ದಾಖಲೆ, ಏನದು ?
ಚಿನ್ನ.. ಚಿನ್ನ.. ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿನ್ನದ ಬೆಲೆ ಎಷ್ಟಾದರೂ ಆಗಲಿ ಒಂದಷ್ಟು ಚಿನ್ನ ಖರೀದಿ ಮಾಡಬೇಕು. ಅದರಿಂದ ಆಭರಣ ಮಾಡಿಸಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು ಕೂಡ. ಈ ಹಬ್ಬದ ಸಮಯದಲ್ಲಿ ಹಾಗೂ ಶುಭ ಸಮಾರಂಭಗಳಲ್ಲಿ ಚಿನ್ನ ಖರೀದಿ ಪ್ರಕ್ರಿಯೆ ಬಲು ಜೋರಾಗಿಯೇ ಇದೆ. ಇದರ ನಡುವೆ ಚಿನ್ನ ಉತ್ಪಾದನೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿರುವುದು ವರದಿಯಾಗಿದೆ. ಅದರಲ್ಲೂ ಇದು ಕನ್ನಡಿಗರು ಖುಷಿಪಡುವ ವಿಚಾರವೂ ಇದೆ.
ಚಿನ್ನದ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದು ಖುಷಿಯ ವಿಚಾರವೇ ಆಗಿದೆ. ಏಕೆಂದರೆ ಭಾರತದಲ್ಲಿ ಹೆಚ್ಚು ಚಿನ್ನವನ್ನು ವಿದೇಶದಿಂದ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಇದೀಗ ಕರ್ನಾಟಕ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ.

ಇಲ್ಲಿ ನಿಗದಿ ಮಾಡಲಾಗಿದ್ದ ಚಿನ್ನಕ್ಕಿಂತ ಹೆಚ್ಚು ಚಿನ್ನ ಉತ್ಪಾದನೆಯನ್ನು ಮಾಡಲಾಗಿದೆ. 2024ರ ಏಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳ ವರೆಗೆ 752 ಕೆ.ಜಿ ಮೊತ್ತದ ಚಿನ್ನವನ್ನು ಉತ್ಪಾದನೆ ಮಾಡಬೇಕು ಎನ್ನುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಗುರಿ ಮೀರಿ ಚಿನ್ನದ ಉತ್ಪಾದನೆ ಆಗಿದೆ. ನಿರೀಕ್ಷೆಗಿಂತಲೂ ಬರೋಬ್ಬರಿ 9 ಕೆ.ಜಿ ಹೆಚ್ಚಿನ ಚಿನ್ನದ ಉತ್ಪಾದನೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ವಾರ್ಷಿಕವಾಗಿ 752 ಕೆ.ಜಿ ಚಿನ್ನ ಉತ್ಪಾದನೆ ಮಾಡಬೇಕು ಎನ್ನುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಇದೀಗ 761 ಕೆ.ಜಿ ಪ್ರಮಾಣದ ಚಿನ್ನ ಉತ್ಪಾದನೆಯಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಅದಿರು ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚಿನ್ನದ ಬೆಲೆ ಹೇಗಿದೆ ?
ದೇಶದಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಹೇರಿಕೆಯಾಗುತ್ತಲ್ಲೇ ಇದೆ. ಈಗಾಗಲೇ ಚಿನ್ನದ ಬೆಲೆ 80 ಸಾವಿರದ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶದಲ್ಲಿ ಒಮ್ಮೆಗೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿಲ್ಲ. ಆದರೆ, ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ.
ಕೆಲವೊಮ್ಮೆ ರೂಪಾಯಿಗಳಲ್ಲಿ ಚಿನ್ನದ ಬೆಲೆ ಇಳಿಕೆಯಾದರೆ, ಅಷ್ಟೇ ಮೊತ್ತದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವುದು ಸಹ ಇದೆ. ಇಂದಿನ ಚಿನ್ನದ ಬೆಲೆಯು 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 8,133 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 81,330 ರೂಪಾಯಿ ತಲುಪಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಆಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಹಬ್ಬದ ಸಮಯದಲ್ಲಿ ಹೆಚ್ಚು ಚಿನ್ನ: ಇನ್ನು ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಸಮಯದಲ್ಲಿ ಚಿನ್ನದ ಖರೀದಿ ಹಾಗೂ ಮಾರಾಟ ಜೋರಾಗಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಚಿನ್ನ ಖರೀದಿ ಹಾಗೂ ಮಾರಾಟವು ಜೋರಾಗಿ ನಡೆಯುತ್ತದೆ. ಇದೀಗ ದೇಶದಲ್ಲಿ ಸಾಲು ಸಾಲು ಹಬ್ಬಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಖರೀದಿ ಭರಾಟೆ ಜೋರಾಗಿಯೇ ಇದೆ.












Click it and Unblock the Notifications