RSS ಪಥಸಂಚಲನದಲ್ಲಿ ಯಡವಟ್ಟು, ಹಲ್ಲೆ ವಿಡಿಯೋ ವೈರಲ್

ರಾಜ್ಯ ಕಾಂಗ್ರೆಸ್‌ ಸರ್ಕಾರವು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ವಿರುದ್ಧ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಿಗಿನಿಗಿ ಕೆಂಡವಾಗುತ್ತದೆ. ಆದರೆ, ತಮಿಳುನಾಡು ಸರ್ಕಾರದಂತೆ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಕ್ಕೆ ಮೀನಾಮೇಷ ಎಣಿಸುವುದಾಗಲಿ ಅಥವಾ ಸಮಸ್ಯೆ ಮಾಡುವುದಾಗಲಿ ಮಾಡುವುದಿಲ್ಲ. ಆರ್‌ಎಸ್‌ಎಸ್‌ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ರೀತಿಯ ಭದ್ರತೆ ಹಾಗೂ ಮುಂಜಾಗ್ರತೆಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಉದಾಹರಣೆ ಇದೆ. ಈ ನಡುವೆ ಧಾರವಾಡದಲ್ಲಿ ನಡೆಯುತ್ತಿದ್ದ ಆರ್‌ಎಸ್‌ಎಸ್‌ ಪಥ ಸಂಚಲನ ಕಾರ್ಯಕ್ರಮದಲ್ಲಿ ಯಡವಟ್ಟೊಂದು ನಡೆದಿದೆ.

ರಾಜ್ಯದಲ್ಲಿ ಆರ್‌ಎಸ್‌ಎಸ್‌ ಹಲವು ಶಾಖೆಗಳನ್ನು ಹೊಂದಿದೆ. ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಹಲವು ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಉದಾಹರಣೆಗಳು ಸಹ ಇವೆ. ಆಗ್ಗಾಗ್ಗೆ ಆರ್‌ಎಸ್‌ಎಸ್‌ ಪಥ ಸಂಚಲಗಳನ್ನು ನಡೆಸುತ್ತದೆ. ಇದಕ್ಕೆ ನೂರಾರು ಜನ ಭಾಗವಹಿಸುವುದು ಇದೆ. ಸಾರ್ವಜನಿಕರು ಸಹ ಆಸಕ್ತಿಯಿಂದ ಈ ಪಥ ಸಂಚಲನ ಕಾರ್ಯಕ್ರಮಗಳನ್ನು ನೋಡುವುದು ಇದೆ. ಅದೇ ರೀತಿ ಅದ್ಧೂರಿ ಪಥಸಂಚಲನವನ್ನು ಧಾರವಾಡದಲ್ಲಿ ಆಯೋಜಿಸಲಾಗಿತ್ತು. ಆದರೆ, ಪಥಸಂಚಲದಲ್ಲಿ ಯಡವಟ್ಟೊಂದು ಸಂಭವಿಸಿದೆ.

What happened in RSS Path Sanchalan what is in the viral video

ಹುಬ್ಬಳ್ಳಿ - ಧಾರವಾಡದಲ್ಲಿ ಆರ್‌ಎಸ್‌ಎಸ್‌ನ ಕಾರ್ಯಚಟುವಟಿಕೆಗಳು ತುಸು ಹೆಚ್ಚಾಗಿಯೇ ನಡೆಯುವುದು ಸಹ ಇದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ನೇತೃತ್ವದಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ಅದ್ಧೂರಿ ಪಥ ಸಂಚಲನ ಆಯೋಜಿಸಲಾಗಿತ್ತು. ಈ ಪಥ ಸಂಚಲನಕ್ಕೆ ನೂರಾರು ಜನ ಭಾಗವಹಿಸಿದ್ದರು.

ಹುಬ್ಬಳ್ಳಿಯ ನೆಹರೂ ಮೈದಾನದಿಂದ ಪ್ರಾರಂಭವಾದ ಪಥಸಂಚಲನಕ್ಕೆ ನಗರದೆಲ್ಲೆಡೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಪಥಸಂಚಲನ ಆರಂಭವಾಗುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಯರು ಪಥಸಂಚಲನದ ಮೇಲೆ ಪುಷ್ಪ ಮಳೆ ಸುರಿಸದರು. ಮಾರ್ಗದುದ್ದಕ್ಕೂ ಪಥಸಂಚಲನ ವಿಕ್ಷಣೆಗೆ ನಿಂತಿದ್ದ ಮಹಿಳೆಯರು, ಮಕ್ಕಳು ಆರ್‌ಎಸ್‌ಎಸ್‌ ಕಾರ್ಯಕರ್ತರ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ಅಲ್ಲದೇ ಜೈಶ್ರೀರಾಮ ಜೈ ಜೈ ಶ್ರೀರಾಮ, ಜೈ ಶಿವಾಜಿ, ಜೈ ಭವಾನಿ ಎಂದು ಘೋಷಣೆ ಮೊಳಗಿತು. ಆದರೆ, ಮಾರ್ಗ ಮಧ್ಯದಲ್ಲಿ ಸಣ್ಣ ಯಡವಟ್ಟೊಂದು ಸಂಭವಿಸಿದೆ.

What happened in RSS Path Sanchalan what is in the viral video

ಆರ್‌ಎಸ್‌ಎಸ್‌ ಕಾರ್ಯಕರ್ತನಿಗೆ ಬೈದವನಿಗೆ ಗೂಸಾ

ಹುಬ್ಬಳ್ಳಿಯಲ್ಲಿ ಆರ್‌ಎಸ್ಎಸ್ ಕಾರ್ಯಕರ್ತರು ಪಥಸಂಚಲನ ನಡೆದಿದೆ. ಇಲ್ಲಿನ ಸಿಬಿಟಿ ಬಾಕಳೆ ಗಲ್ಲಿಯಲ್ಲಿ ವ್ಯಕ್ತಿಯೊಬ್ಬ ಅಡ್ಡ ನಿಂತು ಆರ್‌ಎಸ್‌ಎಸ್‌ ಕಾರ್ಯಕರ್ತರ ಪಥಸಂಚಲನಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದ ಬಳಸಿ, ಕಾರ್ಯಕರ್ತರನ್ನು ಎಲ್ಲರ ಮುಂದೆಯೇ ಅವಮಾನಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಜನ ಆ ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಸಿದ್ದಾರೆ.

ಆರ್‌ಎಸ್ಎಸ್ ವತಿಯಿಂದ ಹುಬ್ಬಳ್ಳಿಯ ನೆಹರು ಮೈದಾನದಿಂದ ಪಥಸಂಚಲನ ಆರಂಭವಾಗಿದ್ದ ಸಂದರ್ಭದಲ್ಲಿ ಸಿಬಿಟಿಯ ಬಾಕಳೆ ಗಲ್ಲಿಯಲ್ಲಿ ಕಾರ್ಯಕರ್ತರು ಪಥಸಂಚಲನ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಅಡ್ಡ ಬಂದು ಪಥಸಂಚಲನಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲೆ ಇದ್ದ ಸಾರ್ವಜನಿಕರು ಸೈಡ್ ಬಾ ಎಂದು ಕರೆದಿದ್ದಾರೆ. ಮುಂದೆ ಸರಿದು ನಿಂತ ವ್ಯಕ್ತಿ ಕೂಡಲೇ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಇದನ್ನು ಕೇಳಿಸಿಕೊಂಡ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗ ಥಳಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಪೊಲೀಸರಿಂದ ರಕ್ಷಣೆ: ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ನಿಂದಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಗುಂಪು ಸೇರಿ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಟ್ರಾಫಿಕ್‌ ಪೊಲೀಸರು ಸಾರ್ವಜನಿಕರನ್ನು ತಡೆದಿದ್ದಾರೆ. ಇದರಿಂದ ಎದುರಾಗಬಹುದಿದ್ದ ಅನಾಹುತ ತಪ್ಪಿದೆ.

ಎಲ್ಲಿಂದ ಎಲ್ಲಿಗೆ ಪಥಸಂಚಲ: ಹುಬ್ಬಳ್ಳಿಯ ನೆಹರೂರ ಮೈದಾನದಿಂದ ಎರಡು ಮಾರ್ಗದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಯಿತು. ಪಥಸಂಚಲದ ಒಂದು ತಂಡದ ಕಾರ್ಯಕರ್ತರು ಕೃಷ್ಣಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತಘಿ, ದಾಜಿಬಾನ್‌ಪೇಟೆ, ತುಳಜಾಭವಾನಿ ವೃತ್ತ, ಪೆಂಡಾರಗಲ್ಲಿ, ಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟೆ, ಸರ್ಾಗಟ್ಟಿ ವೃತ್ತ, ಬೆಳಗಾವಿಗಲ್ಲಿ ಮಾರ್ಗವಾಗಿ ದುರ್ಗದಬೈಲ್ ತಲುಪಿತು. ಇನ್ನೊಂದು ತಂಡವು ಟೌನ್‌ಹಾಲ್, ಶಕ್ತಿ ರಸ್ತೆ, ಸ್ಟೇಷನ್ ರಸ್ತೆ, ಗಣೇಶಪೇಟೆ ವೃತ್ತ, ಸಿಬಿಟಿ, ಮಂಗಳವಾರ ಪೇಟೆ ಮಾರ್ಗವಾಗಿ ದುರ್ಗಬೈಲ್ ತಲುಪಿತು. ಇಲ್ಲಿಂದ ಎರಡು ತಂಡಗಳು ಸೇರಿ ಮುಂದೆ ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಮರಳಿ ನೆಹರೂ ಮೈದಾನಕ್ಕೆ ಬರುವ ಮೂಲಕ ಆರ್‌ಎಸ್‌ಎಸ್‌ ಪಥಸಂಚಲನ ಮುಕ್ತಾಯವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+