JDS: 7 ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ಘೋಷಿಸಿದ ಜೆಡಿಎಸ್‌ಗೆ ಆಗುವ ಲಾಭಗಳೇನು?
ಬೆಂಗಳೂರು, ಏಪ್ರಿಲ್ 20: ಕರ್ನಾಟಕ ವಿಧಾನಸಭಾ ಚುನಾವಣೆ ಮೂರನೇ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ರಾಜ್ಯದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅನ್ಯ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸುವುದಾಗಿ ಹೇಳಿಕೊಂಡಿದೆ. ಆದರೆ ಇಲ್ಲಿ ಜೆಡಿಎಸ್‌ಗೆ ಆಗುವ ಲಾಭಗಳೇನು ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ.
ಇದರಲ್ಲಿ ಪ್ರಮುಖವಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅಕಾಲಿಕವಾಗಿ ಮರಣ ಹೊಂದಿದ ಆರ್ ಧ್ರುವನಾರಾಯಾಣ್ ಅವರ ಮಗ 28 ವರ್ಷದ ದರ್ಶನ್ ಧ್ರುವನಾರಾಯಣ್ ಅವರಿಗೆ ಬೆಂಬಲ ಘೋಷಿಸಿರುವುದು ಮುಖ್ಯವಾಗಿದೆ. ದರ್ಶನ್ ಧ್ರುವನಾರಾಯಣ್ ಅವರು ಕಾಂಗ್ರೆಸ್ ಪಕ್ಷದ ಶಾಸಕ ಅಭ್ಯರ್ಥಿಯಾಗಿದ್ದಾರೆ. ಅವರ ತಂದೆ ಆರ್ ಧ್ರುವನಾರಾಯಣ್ ಅವರು ರಾಜಕೀಯ ಅಜಾತಶತ್ರು ಆಗಿದ್ದವರು, ಎಲ್ಲ ಪಕ್ಷದವರೊಂದಿಗೂ ಸೌಮ್ಯ ಸ್ವಭಾವದಿಂದ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಗುಣ ಅವರಲ್ಲಿತ್ತು.

ಇನ್ನು ದರ್ಶನ್ ಅವರ ತಂದೆ ನಂಜನಗೂಡ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಅಭ್ಯರ್ಥಿಯಾಗಿದ್ದರು. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮೂರನೇ ಪ್ರಬಲ ಪಕ್ಷವ ಆಗಿದೆ, ಅಲ್ಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರು ಇದ್ದು, ಮತಗಳು ಇವೆ. ಈಗಿರುವಾಗಲೇ ಆರ್ ಧ್ರುವನಾರಾಯಣ್ ಅವರು ಅಕಾಲಿಕವಾಗಿ ನಿಧನ ಹೊಂದಿದರು. ಆಗ ಜಿಟಿ ದೇವೇಗೌಡ ಅವರು ಮಾತನಾಡಿ ಧ್ರುವನಾರಾಯಣ್ ನಮ್ಮ ಭಾಗದ ಹಿರಿಯ ನಾಯಕರಾಗಿದ್ದರು.
ಅವರ ನಿಧನದಿಂದ ನಮಗೆಲ್ಲಾ ನೋವಾಗಿದೆ. ಈಗ ಅವರ ಮಗ ದರ್ಶನ್ ಧ್ರುವನಾರಾಯಣ್ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ ನಾವು ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ನಿಲ್ಲಿಸಬೇಕೆ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು. ಅವರು ಹೇಳಿದಂತೆ ಕೊನೆಗೆ ಜೆಡಿಎಸ್ ಮೂರನೇ ಪಟ್ಟಿಯಲ್ಲಿ ದರ್ಶನ್‌ಗೆ ಬೆಂಬಲವನ್ನು ನೀಡಲಾಯಿತು. ಇಲ್ಲಿ ಜಿಟಿ ದೇವೇಗೌಡ ತಂತ್ರ ಉಪಯೋಗಿಸಿದ್ದರು. ಚಾಮುಂಡೇಶ್ವರಿ ಸೇರಿದಂತೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಮತದಾರರು ಇದ್ದಾರೆ.
ಇಲ್ಲಿ ಜಿಟಿ ದೇವೇಗೌಡ ಅವರು ಕಾಂಗ್ರೆಸ್‌ನವರನ್ನು ಓಲೈಸಲು ಈ ಮಾತುಗಳನ್ನು ಆಡಿರಬಹುದು ಎಂದು ಮೂಲಗಳು ತಿಳಿಸಿವೆ, ಅವರು ನಿಂತಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವೇ ಹೌದು. ಈ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರ ಮತ್ತು ಮೈಸೂರಿನಲ್ಲಿ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಸಿಂಪತಿಯ ಮತಗಳನ್ನು ಪಡೆಯಬಹುದು ಎಂದೂ ಕೂಡ ಲೆಕ್ಕಚಾರ ಇದ್ದಂತಿದೆ. ಅಲ್ಲದೆ ಇದು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಬಗ್ಗೆ ಕಾಂಗ್ರೆಸ್ ಮತದಾರರನ್ನು ಓಲೈಸುವ ತಂತ್ರದ ಭಾಗವು ಆಗಿದೆ ಎನ್ನಲಾಗಿದೆ.
ಉಳಿದಂತೆ 6 ಕ್ಷೇತ್ರಗಳಾದ ಗುಲ್ಬರ್ಗಾ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಐಎಂ, ಬಾಗೇಪಲ್ಲಿ, ಸಿವಿ ರಾಮನ್‌ನಗರ, ಕೆಆರ್ ಪುರಂ, ವಿಜಯನಗರ, ಮಹದೇವಪುರ ಈ ಎಲ್ಲ ಕ್ಷೇತ್ರಗಳಲ್ಲೂ ಕೂಡ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸದೇ ಸಿಪಿಐಎಂ ಅಭ್ಯರ್ಥಿಗಳಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ. ಇದು ರಾಷ್ಟ್ರ ರಾಜಕೀಯದ ದೃಷ್ಟಿ ಎಂದು ನೋಡಬಹುದಾಗಿದೆ.
ಇತ್ತೀಚೆಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಬೆಂಬಲ ಘೋಷಿಸುವುದಾಗಿ ತಿಳಿಸಿದ್ದರು. ಹೀಗಾಗಿ ಇಲ್ಲಿ ದೇವೇಗೌಡರ ನಿರ್ಧಾರದಂತೆ ಎಲ್ಲ ಕ್ಷೇತ್ರಗಳಲ್ಲೂ ಸಿಪಿಐಎಂ ಅಭ್ಯರ್ಥಿಗಳಿಗೆ ಬೆಂಬಲ ನೀಡಲಾಗಿದೆ. ಅದರಂತೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ದೇವೇಗೌಡ ಹೆಸರಿಗೆ ಇಲ್ಲಿ ಇಂಬು ಸಿಗಬಹುದು ಎನ್ನುವ ದೃಷ್ಟಿಯಿಂದಲೂ ಬೆಂಬಲ ಘೋಷಿಸಿರುವ ಸಾಧ್ಯತೆ ಇದೆ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಎಡಪಕ್ಷಗಳಿಂದ ಬೆಂಬಲ ಸಿಗಬಹುದೆಂಬ ಲೆಕ್ಕಾಚಾರವು ಇರಬಹುದು.












Click it and Unblock the Notifications