ಪ್ರಳಯವಾದರೂ ಅತೃಪ್ತರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಸಿದ್ದರಾಮಯ್ಯ
Recommended Video
ಬೆಂಗಳೂರು, ಜುಲೈ 23: ಪಕ್ಷಕ್ಕೆ ಕೈಕೊಟ್ಟು ಸರ್ಕಾರ ಉರುಳುವಂತೆ ಮಾಡಿದ ಶಾಸಕರ ಬಗ್ಗೆ ಕಠಿಣ ನಿಲುವು ತಳೆದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಕಾರಣಕ್ಕೂ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿವೆ.
ಈ ಬಗ್ಗೆ ಸದನದಲ್ಲಿಯೇ ಸ್ಪಷ್ಟನೆ ಕೊಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರುಗಳು, ಕೈ ಕೊಟ್ಟ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಅವರು ಮಾತನಾಡುವಾಗ ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರೇ ಈ ವಿಷಯವನ್ನು ಪ್ರಸ್ತಾಪಿಸಿದರು. ಅವರು (ಅತೃಪ್ತರು) ವಾಪಸ್ ಬಂದರೆ ಏನು ಮಾಡುತ್ತೀರಿ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಅವರು ವಾಪಸ್ ಬಂದರೆ ಖಂಡಿತವಾಗಿಯೂ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲಿ ಹೇಳಿದರು. ಜೆಡಿಎಸ್‌ನ ಮೂರು ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿದ್ದಾರೆ.
ಸಿದ್ದರಾಮಯ್ಯ ಅವರು ಸಹ ಎದ್ದು ನಿಂತು, 'ರಾಜ್ಯದ ಜನರಿಗೆ ಇದು ಗೊತ್ತಾಗಬೇಕು ಹಾಗಾಗಿ ಸದನದಲ್ಲಿಯೇ ನಾನು ಘೋಷಣೆ ಮಾಡುತಿದ್ದೇನೆ, ಪ್ರಳಯವಾದರೂ ಸಹ ಬಿಜೆಪಿಯ ಆಮೀಷಗಳಿಗೆ ಬಲಿಯಾಗಿ ಪಕ್ಷಕ್ಕೆ ಕೈಕೊಟ್ಟ ಶಾಸಕರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.












Click it and Unblock the Notifications