ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ: ಗಣಪತಿ ಪತ್ನಿ ಪಾವನಾ

Written By:
Subscribe to Oneindia Kannada

ಬೆಂಗಳೂರು, ಜುಲೈ, 13: ಪತಿ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಡಿವೈಎಸ್ ಎಂಕೆ ಗಣಪತಿ ಪತ್ನಿ ಪಾವನಾ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಎಂಕೆ ಗಣಪತಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದರೂ ಪ್ರಾಮಾಣಿಕ ತನಿಖೆ ಮೇಲೆ ನಂಬಿಕೆ ಇಲ್ಲ ಎಂದು ಗಣಪತಿ ಪತ್ನಿ ಪಾವನಾ ಹೇಳಿದ್ದಾರೆ.[ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]

Ganapati

ಸರ್ಕಾರ ತನಿಖೆಯನ್ನು ಸಿಬಿಐ ಗೆ ವಹಿಸಬೇಕು. ಇನ್ನು ಸಹ ಎಫ್ ಐಆರ್ ದಾಖಲಿಸಿಲ್ಲ. ನನ್ನ ಹೇಳಿಕೆ ದಾಖಲು ಮಾಡಿಕೊಂಡಿಲ್ಲ. ನ್ಯಾಯಾಂಗ ತನಿಖೆ ಸಹ ಸರ್ಕಾರದ ಅಧೀನ ದಲ್ಲಿ ಬರುವುದರಿಂದ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.[ಕರ್ನಾಟಕ: ಪೊಲೀಸರ ಆತ್ಮಹತ್ಯೆ ಆಘಾತಕಾರಿ ಅಂಕಿ ಅಂಶ]

ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ತನಿಖೆ ಮಾಡಬೇಕು. ಒಂದು ವೇಳೆ ನಮ್ಮ ಮಾತಿಗೆ ಬೆಲೆ ಕೊಡದಿದ್ದರೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಥವಾ ವೆಂಕಟಾಚಲ ಪ್ರಕರಣದ ತನಿಖೆ ಮಾಡಬೇಕು ಎಂದು ಪಾವನಾ ಒತ್ತಾಯ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government ordered for judicial probe on DySP MK Ganapathi suicide case. Mangaluru Deputy Superintendent of Police (DySP) M.K. Ganapathi committed suicide in Madikeri on July 7, 2016. After this statetnent Ganapathi wife Pavana said 'We don't trust judicial probe.
Please Wait while comments are loading...