Meghana Raj: ‘ಚಿರು ಹೋದ ಮೇಲೆ ಮೇಘನಾ ರಾಜ್‌ ಗಂಡನ ಮನೆಯಲ್ಲಿಲ್ಲʼ: ಕಾರಣ ಬಿಚ್ಚಿಟ್ಟ ಸುಂದರ್‌ ರಾಜ್‌

ಬೆಂಗಳೂರು, ಜುಲೈ 06: ಗಂಡ ಇಲ್ಲ ಅನ್ನೋ ಕೊರಗು ಮಾತ್ರ ಮೇಘನಾ ರಾಜ್‌ ಸರ್ಜಾ ಅವರನ್ನು ಇನ್ನೂ ಕಾಡುತ್ತಿದೆ. ಚಿರು ಸರ್ಜಾ ನಿಧನದ ಬಳಿಕ ಮೇಘನಾ ರಾಜ್‌ ಅವರು ಗಂಡನ ಮನೆಗೆ ಯಾಕೆ ಹೋಗಿಲ್ಲ ಎನ್ನುವ ಕುರಿತು ಚರ್ಚೆಯಾಗಿತ್ತು. ಸದ್ಯ ಮೇಘನಾ ಯಾರ ಮನೆಯಲ್ಲಿದ್ದಾರೆ ಎಂಬ ಬಗ್ಗೆ ಸುಂದರ್‌ ರಾಜ್‌ ಕಾರಣವನ್ನ ತಿಳಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮೇಘನಾ ರಾಜ್‌ ತಂದೆ ಸುಂದರ್‌ ರಾಜ್‌ ಅವರು ಮಾತನಾಡಿ, ಗಂಡ ಇಲ್ಲ ಅನ್ನೋ ಕೊರಗು ಮಾತ್ರ ಮೇಘನಾ ರಾಜ್‌ ಸರ್ಜಾ ಅವರನ್ನು ಇನ್ನೂ ಕಾಡುತ್ತಿದೆ. ಒಂದು ಹೆಣ್ಣು ಎಲ್ಲವನ್ನು ಬಿಟ್ಟು ಗಂಡನ ಮನೆಗೆ ಹೋಗಿರುತ್ತಾಳೆ ಎಂದರೆ, ತಂದೆ ತಾಯಿಗಿಂತ ಹೆಚ್ಚೇ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಿದ್ದಾಗ ಆಕೆಯನ್ನು ಸಾಕಿ ಸಲುಹಿ, ಅಲಂಕಾರದ ಗೊಂಬೆಯನ್ನಾಗಿ ಮಾಡಿ ಗಂಡನ ಮನೆಗೆ ಕಳಿಸಿರುತ್ತೇವೆ. ಆ ಅಲಂಕಾರವನ್ನು ಕೀಳಬಾರದು. ಹೋದ ಹೆಣ್ಣೂ ಕೂಡ ಆ ಮನೆಗೆ ಶೋಭೆ ತರುವಂತಿರಬೇಕು. ಗಲಾಟೆ ಮಾಡಿಕೊಂಡು, ಕೂಡು ಕುಟುಂಬವನ್ನು ಮುರಿಯುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.

We Are Taking Care Of Meghana Raj Sarja After Chiru Death Says Father Sundar Raj

ಅಲ್ಲಿಯೂ ಒಬ್ಬಳು ಹೆಣ್ಣಿರುತ್ತಾಳೆ. ಆಕೆಯೂ ಚೆನ್ನಾಗಿಯೇ ನೋಡಬೇಕು. ಅತ್ತೆಗೆ ನನ್ನ ಮಗ ನಾನು ಹೇಳಿದಂತೆ ಮಾತು ಕೇಳಬೇಕು ಅಂತಿರುತ್ತೆ. ಹೆಂಡತಿಗೆ ನಾನು ಕಟ್ಟಿಕೊಂಡು ಬಂದಿದ್ದೇನೆ. ನಾನು ಹೇಳಿದ ಮಾತು ಕೇಳಬೇಕು ಅಂತಿರುತ್ತೆ. ಪಾಪ ಇವನು ಎರಡು ಕಡೆನೂ ನೋಡಬೇಕಾಗುತ್ತದೆ. ಹೆಂಡತಿಯನ್ನು ನೋಡೋದಾ? ಅಮ್ಮನನ್ನು ನೋಡೋದಾ? ಅಂತಾಗುತ್ತೆ ಎಂದಿದ್ದಾರೆ.

ಆದರೆ, ಮೇಘನಾ ಗೆ ಮಾತ್ರ ಆ ಪರಿಸ್ಥಿತಿ ಬರಲಿಲ್ಲ. ಆರಂಭದಲ್ಲಿಯೇ ಹೊರಟು ಹೋಯಿತು. ನಮಗೇ ಮೈನಸ್‌ ಆಯಿತು, ಟಾರ್ಚರ್‌ ಅದೂ ಇದೂ ಅನ್ನೋ ಮಾತೂ ನಾನು ಆಡಬಾರದು. ಮೇಘನಾಳನ್ನು ನಾವೇ ನೋಡಿಕೊಳ್ಳುತ್ತಿರುವುದರಿಂದ ಅವರ ಪಾತ್ರ ಏನೂ ಇಲ್ಲ ಎಂದು ಸುಂದರ್‌ ರಾಜ್‌ ತಿಳಿಸಿದ್ದಾರೆ.

ನಮ್ಮ ಮಗಳ ಬಗ್ಗೆ ತುಂಬ ಕಾಳಜಿ ವಹಿಸಿದ್ದೇವೆ. ಅವಳನ್ನು ಯಾರ ಮೇಲೂ ಡಿಪೆಂಡ್‌ ಆಗದಂತೆ ಸ್ಟ್ರಾಂಗ್‌ ಮಾಡಿ ಹೋಗಬೇಕು. ನೀನು ಒಂಟಿ, ಒಂಟಿ ಸಲಗ. ಮದುವೆ ಆದ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಮದುವೆ ಆಗದೇ ಉಳಿದ ಎಲ್ಲರಿಗೂ ಇದು ಅನ್ವಯಿಸುತ್ತದೆ. ಹೆಣ್ಮಕ್ಕಳೇ ಸ್ಟ್ರಾಂಗ್‌ ಗುರು ಅನ್ನೋ ಮಾತು ನಿಜವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಹೆಣ್ಮಕ್ಕಳಿದ್ದಾರೆ. ನನ್ನ ಮಗಳೂ ಹಾಗೇ ಆಗಬೇಕು ಎಂದಿದ್ದಾರೆ.

ಪತಿ ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ಬಳಿಕ ಕುಗ್ಗಿದ ಮೇಘನಾ ರಾಜ್‌ ಸರ್ಜಾಗೆ, ಹೆತ್ತವರೇ ಆಸರೆಯಾಗಿ, ಶಕ್ತಿಯಾಗಿ ನಿಂತಿದ್ದಾರೆ. ಚಿರು ಸರ್ಜಾ ನಿಧನರಾದ ಬಳಿಕ ಮನೆಯವರಷ್ಟೇ ಅಲ್ಲದೇ ಆಪ್ತ ಸ್ನೇಹಿತರೂ ಧೈರ್ಯ ತುಂಬಿದರು. ಅದರ ಪರಿಣಾಮ, ಚಿರು ನಿಧನದ ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದ ಮೇಘನಾ, ಮತ್ತೆ ಬಣ್ಣ ಹಚ್ಚುವ ಮೂಲಕ ನಟನೆಗೆ ವಾಪಾಸಾಗಿದ್ದರು. ತತ್ಸಮ ತದ್ಭವ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಮರಳಿದ್ದರು. ಆದರೆ, ಜತೆಯಲ್ಲಿ ಗಂಡ ಇಲ್ಲ ಅನ್ನೋ ಕೊರಗು ಮಾತ್ರ ಮೇಘನಾ ಅವರನ್ನು ಇನ್ನೂ ಕಾಡುತ್ತಿದೆ.

ಸದ್ಯ ಮಗನ ಆರೈಕೆಯಲ್ಲಿಯೇ ಮುಳುಗಿರುವ ಮೇಘನಾ ರಾಜ್‌ ಸರ್ಜಾ, ಮಗ ರಾಯನ್‌ ಮುಖದಲ್ಲಿಯೇ ತಮ್ಮ ಭವಿಷ್ಯದ ಕನಸು ಕಾಣುತ್ತಿದ್ದಾರೆ. ಇತ್ತ ಮಗಳು ಮೇಘನಾಗೆ ಅಪ್ಪ ಸುಂದರ್‌ ರಾಜ್‌, ಅಮ್ಮ ಪ್ರಮೀಳಾ ಜೋಷಾಯ್‌ ಜತೆಯಾಗಿ ನಿಂತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮಗನ ಜತೆಗಿನ ಖುಷಿ ಕ್ಷಣಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಯೂಟ್ಯೂಬ್‌ ಚಾನೆಲ್‌ ಸಹ ಶುರು ಮಾಡಿ, ಅಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+