ವಿಟಿಯು 5ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ
ಬೆಂಗಳೂರು, ಫೆಬ್ರವರಿ 23: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ 5ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದೆ. ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ನೋಡಬಹುದು.
ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಹಾಗೂ ಬ್ಯಾಚುಲರ್ ಆಫ್ ಟೆಕ್ನಾಲಜಿಯ ಐದನೇ ಸೆಮಿಸ್ಟರ್ ನ ಫಲಿತಾಂಶ ಪ್ರಕಟವಾಗಿದೆ. ಎಲ್ಲಾ ಪ್ರದೇಶಗಳಲ್ಲಿ ಫಲಿತಾಂಶ ಸಿಗಲಿದೆ.
ಫಲಿತಾಂಶ ನೋಡಲು ಸಿಗದೆ ವೆಬ್ ಸೈಟ್ ಸ್ಲೋ ಆಗಿ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಯುಎಸ್ಎನ್ ಸಂಖ್ಯೆ ಬಳಸಿ ನೋಡಬಹುದಾಗಿದೆ. ಸಿಬಿಸಿಎಸ್ ಹಾಗೂ ಸಿಬಿಸಿಎಸ್ ಯೇತರ ಕೋರ್ಸ್ ಗಳ ಫಲಿತಾಂಶ ಇದಾಗಿದೆ ವಿಟಿಯುನ ಅಧಿಕೃತ ವೆಬ್ ತಾಣದಲ್ಲಿ ಫಲಿತಾಂಶ ನೋಡಬಹುದು.

* vtu.ac.in ಗೆ ಭೇಟಿ ಕೊಡಿ
* results ಲಿಂಕ್ ಕ್ಲಿಕ್ ಮಾಡಿ
* ಯುಎಸ್ಎನ್ ನಂಬರ್ ಹಾಕಿ.
* ಸಬ್ಮಿಟ್ ಮಾಡಿ
* ಫಲಿತಾಂಶ ನೋಡಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ.
(ಒನ್ಇಂಡಿಯಾ ಸುದ್ದಿ)












Click it and Unblock the Notifications