14 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ
ಬೆಂಗಳೂರು, ನವೆಂಬರ್ 12 : ಕರ್ನಾಟಕದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯಲಿದೆ. ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಂಗಳವಾರ ಬೆಳಗ್ಗೆ 7ಗಂಟೆಯಿಂದ ರಾಜ್ಯದ ಒಟ್ಟು 418 ವಾರ್ಡ್‌ಗಳಿಗೆ ಮತದಾನ ನಡೆಯುತ್ತಿದೆ. ಎರಡು ಮಹಾನಗರ ಪಾಲಿಕೆ, 6 ನಗರ ಸಭೆ, 3 ಪಟ್ಟಣ ಪಂಚಾಯಿತಿ, 3 ಪುರಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು, ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮತದಾನದ ವಿವರಗಳು
* ನಗರಸಭೆ : ಕನಕಪುರ, ಕೋಲಾರ, ಮುಳಬಾಗಿಲು, ಕೆ. ಜಿ. ಎಫ್., ಗೌರಿ ಬಿದನೂರು, ಚಿಂತಾಮಣಿ
* ಪುರಸಭೆ : ಬೀರೂರು, ಮಾಗಡಿ, ಕಂಪ್ಲಿ
* ಪಟ್ಟಣ ಪಂಚಾಯಿತಿ : ಕೂಡ್ಲಗಿ, ಕುಂದಗೋಳ, ಜೋಗ್-ಕಾರ್ಗಲ್
* ಮಹಾನಗರ ಪಾಲಿಕೆ : ದಾವಣಗೆರೆ, ಮಂಗಳೂರು
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ನೋಟಾ ಬಳಕೆಗೆ ಅವಕಾಶವನ್ನು ನೀಡಲಾಗಿದೆ. ಕನಕಪುರದ ನಗರಸಭೆಯ 31 ವಾರ್ಡ್‌ಗಳ ಪೈಕಿ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‌ನ 368, ಬಿಜೆಪಿಯ 363, ಜೆಡಿಎಸ್‌ನ 233, ಸಿಪಿಐ 7, ಸಿಪಿಎಂ 12, ಬಿಎಸ್‌ಪಿ 24, ಎನ್‌ಸಿಸಿ 9, ಜೆಡಿಯು 5, ಎಸ್‌ಡಿಪಿಐ 16, ಕೆಪಿಜೆಪಿ 2, 475 ಪಕ್ಷೇತರರು ಸೇರಿ 1587 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.












Click it and Unblock the Notifications