ಉಪ ಕದನ : ಚಿಕ್ಕೋಡಿಯಲ್ಲಿ ಶೇ 78ರಷ್ಟು ಮತದಾನ

ಬೆಂಗಳೂರು, ಆ.21 : ಸಂಜೆ 5 ಗಂಟೆಯ ವೇಳೆಗೆ ಶಿಕಾರಿಪುರದಲ್ಲಿ ಶೇ 70, ಬಳ್ಳಾರಿ ಗ್ರಾಮಾಂತರದಲ್ಲಿ ಶೇ 65 ಮತ್ತು ಚಿಕ್ಕೋಡಿ-ಸದಲಗಾದಲ್ಲಿ ಶೇ 78 ರಷ್ಟು ಮತದಾನವಾಗಿದೆ.

ಶಿಕಾರಿಪುರ ಕ್ಷೇತ್ರದ ಮಾಲಗೊಂಡನಕೊಪ್ಪ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದರು. ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಮತಗಟ್ಟೆ ಸ್ಥಾಪಿಸಿರುವುದರಿಂದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ, ಪ್ರತಿಭಟನೆ ನಡೆಸುತ್ತಿದ್ದರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.

ಸಮಯ 3 ಗಂಟೆ : ಚಿಕ್ಕೋಡಿ-ಸದಲಗಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದಿರಾನಗರದ ಮತಗಟ್ಟೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಬಿಜೆಪಿಯವರು ನಕಲಿ ಮತದಾನ ಮಾಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಸಮಯ 2 ಗಂಟೆ : ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಂಸದರನ್ನು ನಿಷೇಧಿತ ಪ್ರದೇಶದೊಳಗೆ ಪ್ರವೇಶ ನೀಡಿದ್ದಕ್ಕೆ ಗಾಂಧಿ ಮಾರ್ಕೆಟ್ ಮತಗಟ್ಟೆಯ ಚುನಾವಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಸಮಯ 1 ಗಂಟೆ : ಮಧ್ಯಾಹ್ನ 1 ಗಂಟೆ ವೇಳೆಗೆ ಚಿಕ್ಕೋಡಿ ಕ್ಷೇತ್ರದಲ್ಲಿ ಶೇ 56, ಬಳ್ಳಾರಿ ಗ್ರಾಮಾಂತರದಲ್ಲಿ ಶೇ 45 ಮತ್ತು ಶಿಕಾರಿಪುರದಲ್ಲಿ ಶೇ 42ರಷ್ಟು ಮತದಾನವಾಗಿತ್ತು.

poll

ಸಮಯ 12 ಗಂಟೆ : ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ. ಉಪ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಹೇಳಿದ್ದಾರೆ.

ಸಮಯ 11 ಗಂಟೆ : ಶಿಕಾರಿಪುರ ಕ್ಷೇತ್ರದ ಮಾಲಗೊಂಡನಕೊಪ್ಪ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಗ್ರಾಮದಿಂದ 3 ಕಿ.ಮೀ ದೂರದಲ್ಲಿ ಮತಗಟ್ಟೆ ಸ್ಥಾಪಿಸಿರುವುದರಿಂದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಸಮಯ 10 ಗಂಟೆ : ಬಳ್ಳಾರಿಯ ಕೌಲ್ ಬಜಾರ್ ಮತಗಟ್ಟೆ ಪಕ್ಕದ ರಸ್ತೆಯಲ್ಲಿ ವಾಮಾಚಾರ ನಡೆಸಲಾಗಿದೆ.

ಸಮಯ 9 ಗಂಟೆ : ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯ ವೇಳೆಗೆ ಶೇ 13 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರು ಬೆಳಗ್ಗೆ ಮತ ಚಲಾವಣೆ ಮಾಡಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದ್ದಾರೆ.

ಸಮಯ 7.30 : ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಮತದಾನ ಆರಂಭವಾಗಿದೆ. ಶಿಕಾರಿಪುರ, ಬಳ್ಳಾರಿ ಗ್ರಾಮಾಂತರ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಮತಗಟ್ಟೆ ಸಂಖ್ಯೆ 132ರಲ್ಲಿ ಮತ ಚಲಾವಣೆ ಮಾಡಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಂತ ವೀರಪ್ಪಗೌಡ ಸಹ ಕುಟುಂಬ ಸಮೇತರಾಗಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

yeddyurappa

ಸಂಸದರಾಗಿ ಆಯ್ಕೆಯಾದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದು, ಜೆಡಿಎಸ್ ಶಿಕಾರಿಪುರ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದೆ.

ಬಳ್ಳಾರಿ ಗ್ರಾಮಾಂತರದಲ್ಲಿ 1,88,307, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ 1,92,615 ಮತ್ತು ಶಿಕಾರಿಪುರ ಕ್ಷೇತ್ರದಲ್ಲಿ 1,77,055 ಮತದಾರರಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ಮತ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಎಲ್ಲಾ ಕಾರ್ಖನೆಗಳ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಲಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಶಿಕಾರಿಪುರ
ಬಿ.ವೈ.ರಾಘವೇಂದ್ರ - ಬಿಜೆಪಿ
ಶಾಂತವೀರಪ್ಪ ಗೌಡ - ಕಾಂಗ್ರೆಸ್
ಸಕಲೇಶ್ ಹುಲ್ಮಾರ್ - ಕರ್ನಾಟಕ ಜನತಾ ಪಕ್ಷ

ಬಳ್ಳಾರಿ ಗ್ರಾಮಾಂತರ
ಓಬಳೇಶ್ - ಬಿಜೆಪಿ
ಎನ್.ವೈ.ಗೋಪಾಲಕೃಷ್ಣ - ಕಾಂಗ್ರೆಸ್
ಬಿ.ರಘು - ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ
ಜಿ.ಚಂದ್ರಶೇಖರ - ಪಕ್ಷೇತರ
ಬಿ.ರಾಮುಡು - ಪಕ್ಷೇತರ ಸೇರಿ ಒಟ್ಟು 5 ಅಭ್ಯರ್ಥಿಗಳು.

ಚಿಕ್ಕೋಡಿ-ಸದಲಗಾ
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ - ಬಿಜೆಪಿ
ಗಣೇಶ್ ಪ್ರಕಾಶ ಹುಕ್ಕೇರಿ -ಕಾಂಗ್ರೆಸ್
ಬಿ.ವೆಂಕಟೇಶ್ -ಕರುನಾಡ ಪಾರ್ಟಿ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+