ರಾಜಭವನದ ಸೌಂದರ್ಯ ಸವಿಯಲು ಇಂದೇ ನೋಂದಣಿ ಮಾಡಿಸಿ

ಬೆಂಗಳೂರು, ಆಗಸ್ಟ್ 18 : ಕರ್ನಾಟಕದ ರಾಜಭವನಕ್ಕೆ ಈ ವರ್ಷವೂ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ. ಅಧಿಕೃತ ಪಾಸು ಹೊಂದಿರುವ ಜನರು ಆಗಸ್ಟ್ 31ರ ತನಕ ಭೇಟಿ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಸ್ವಾತಂತ್ರ ದಿನಾಚರಣೆ ಹಿನ್ನಲೆಯಲ್ಲಿ ಕಳೆದ ವರ್ಷದಿಂದ ರಾಜಭವನಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ. ಈ ವರ್ಷವೂ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡ ಜನರಿಗೆ ರಾಜಭವನ ವೀಕ್ಷಣೆ ಮಾಡಲು ಅವಕಾಶವಿದೆ.

Visit To Karnataka Raj Bhavan Till August 31

ಆಗಸ್ಟ್ 17ರ ಶನಿವಾರ ಮೊದಲ ದಿನ 2 ಸಾವಿರಕ್ಕೂ ಅಧಿಕ ಜನರು ರಾಜಭವನಕ್ಕೆ ಭೇಟಿ ನೀಡಿದ್ದಾರೆ. ರಾಜಭವನದ ಒಳಗೆ ವೈಶಿಷ್ಟ್ಯಗಳನ್ನು ವಿವರಣೆ ನೀಡಲು ಗೈಡ್‌ಗಳನ್ನು ನೇಮಕ ಮಾಡಲಾಗಿದೆ.

ಸುಮಾರು 16 ಎಕರೆ ಪ್ರದೇಶದಲ್ಲಿ ರಾಜಭವನ ಮತ್ತು ಉದ್ಯಾನವಿದೆ. ಭೇಟಿ ನೀಡುವ ಜನರು ಗುಲಾಬಿ, ಮಲ್ಲಿಗೆ ಸೇರಿದಂತೆ ವಿವಿಧ ಉದ್ಯಾನ, ಕೂಕ್ ಪೈನ್ ಮರ, 19ನೇ ಶತಮಾನದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು.

ಹಲ್ಲು ಹಾಸಿನ ಮೇಲೆ ಹೂಗಳಿಂದ ನಿರ್ಮಾಣ ಮಾಡಲಾದ ಆನೆ, ಬಾತುಕೋಳಿ, ಹಂಸ, ಜಿರಾಫೆ ಮುಂತಾದವುಗಳನ್ನು ವೀಕ್ಷಿಸಬಹುದು. ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯ ತನಕ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ರಾಜಭವನಕ್ಕೆ ಭೇಟಿ ನೀಡುವವರು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು. ರಾಜಭವನದ ಒಳಗೆ ಪ್ರತಿ 30 ಜನರ ತಂಡವನ್ನು ರಚನೆ ಮಾಡಿ ಕಳಿಸಲಾಗುತ್ತದೆ. ಪ್ರತಿ ತಂಡಕ್ಕೆ 20 ರಿಂದ 30 ನಿಮಿಷ ಅವಕಾಶ ನೀಡಲಾಗುತ್ತದೆ.

ಆಗಸ್ಟ್ 31ರ ತನಕ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು http://www.rajbhavan.kar.nic.in/ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+