ನ್ಯಾ. ವಿಶ್ವನಾಥ್ ಶೆಟ್ಟಿ ಹೊಸ ಲೋಕಾಯುಕ್ತ

Subscribe to Oneindia Kannada

ಬೆಂಗಳೂರು, ಜನವರಿ 26: ಲೋಕಾಯುಕ್ತ ಸಂಸ್ಥೆಗೆ ಕೊನೆಗೂ ದಂಡ ನಾಯಕರೊಬ್ಬರು ಸಿಕ್ಕಿದ್ದಾರೆ. ನ್ಯಾಯಮೂರ್ತಿ ಭಾಸ್ಕರ್ ರಾವ್ ರಿಂದ ತೆರವಾಗಿದ್ದ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ನೇಮಕವಾಗಿದ್ದಾರೆ. ಸರಕಾರ ಕಳುಹಿಸಿದ್ದ ಶಿಫಾರಸ್ಸಿಗೆ ರಾಜ್ಯಪಾಲರು ಇಂದು ಸಹಿ ಹಾಕಿದ್ದು, ಶೆಟ್ಟಿ ಹೊಸ ಲೋಕಾಯುಕ್ತರಾಗಿದ್ದಾರೆ.

ಈ ಹಿಂದೆ ಸರಕಾರ ಕಳುಹಿಸಿದ್ದ ಶಿಫಾರಸ್ಸಿಗೆ ಲೋಕಾಯುಕ್ತರು ಸಹಿ ಹಾಕಲು ಹಿಂದೇಟು ಹಾಕಿದ್ದರು. ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿರುವ ವಿಚಾರದಲ್ಲಿ ವಿಶ್ವನಾಥ್ ಶೆಟ್ಟಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.['ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರದ ಷಡ್ಯಂತ್ರ']

 Vishwanath Shetty will be the new Lokayukta

ಆದರೆ ರಾಜ್ಯಪಾಲ ವಜೂಭಾಯಿ ವಾಲಾರನ್ನು ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, 'ಬಹುತೇಕ ನ್ಯಾಯಮೂರ್ತಿಗಳು ನ್ಯಾಯಾಂಗ ಬಡಾವಣೆಯಲ್ಲಿ ಸೈಟ್ ಪಡೆದಿದ್ದಾರೆ. ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ. ಎಂದು ವಿವರಣೆ ನೀಡಿದ್ದರು.[ಲೋಕಾಯುಕ್ತ ಹುದ್ದೆಗೇರಲಿರುವ ನ್ಯಾ.ವಿಶ್ವನಾಥ್ ಶೆಟ್ಟಿ ವ್ಯಕ್ತಿಚಿತ್ರ]

ಇದೀಗ ರಾಜ್ಯಪಾಲರು ಸರಕಾರದ ಶಿಫಾರಸ್ಸಿಗೆ ಅಂಕಿತ ಹಾಕಿದ್ದಾರೆ. ಈ ಮೂಲಕ ಕಳೆದ ಒಂದು ವರ್ಷದಿಂದ ಖಾಲಿ ಇದ್ದ ಪ್ರತಿಷ್ಠಿತ ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರ ಹುದ್ದೆಗೆ ಕೊನೆಗೂ ಒಬ್ಬರ ನೇಮಕವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Governor Vajubhai Vala signed the proposal of Justice Vishwanath Shetty for the post of Lokayukta sent by state government Karnataka.
Please Wait while comments are loading...