viral video: ಏ ಸರಿರೇ ಲೇ ನಂಗ್ ಕುಂದ್ರೋಕ್ ಬಿಡ್ರಿ ಅಂದ ಡ್ರೈವರ್

ಸರ್ಕಾರಿ ಬಸ್‌ಗಳಲ್ಲಿ ನಡೆಯುವ ಕಾಮಿಡಿಗಳು ಒಂದೆರಡಲ್ಲ. ಇದೀಗ ಕಲ್ಯಾಣ ಕರ್ನಾಟಕದ ಸಾರಿಗೆ ಬಸ್‌ವೊಂದರ ಡ್ರೈವರ್‌ ಮಾತು ಅಗ್ದಿ ವೈರಲ್‌ ಆಗೈತಿ. "ಏ ಸರಿರೇ ಲೇ ನಂಗ್‌ ಕುಂದ್ರೋಕ್ ಜಾಗ ಬಿಡ್ರಿ" ಅಂತ ಡ್ರೈವರ್‌ ಪ್ರಯಾಣಿಕರಿಗೆ ಹೇಳಿದ್ದಾರೆ. ಅಷ್ಟಕ್ಕೂ ಡ್ರೈವರ್‌ ಪ್ರಯಾಣಿಕರಲ್ಲಿ ಈ ರೀತಿ ಮನವಿ ಮಾಡಿದ್ದು ಏಕೆ, ಪ್ರಯಾಣಿಕರು ಮಾಡಿದ್ದೇನು ಎನ್ನುವ ವಿವರ ಇಲ್ಲಿದೆ.

ಉತ್ತರ ಕರ್ನಾಟಕದಲ್ಲಿ ನಡೆಯುವ ಕೆಲವು ಘಟನೆಗಳು ಮೊದಲು ನಗು ತರಿಸುತ್ತವೆ. ಆ ಮೇಲೆ ಅದ್ಯಾಕೆ ಎನ್ನುವ ವಿಚಾರ ಚಿಂತಿಸುವಂತೆ ಮಾಡುತ್ತವೆ. ಇದೀಗ ಕಲ್ಯಾಣ ಕರ್ನಾಟಕದ ಸರ್ಕಾರಿ ಬಸ್‌ ಡ್ರೈವರ್‌ವೊಬ್ಬರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಜನ ಮಸ್ತ್‌ ಕಮೆಂಟ್‌ ಮಾಡಿದ್ದಾರೆ. ಆದರೆ,ಡ್ರೈವರ್ ನಡುರಾತ್ರಿಯಲ್ಲಿ ಬಸ್‌ನಿಂದ ಇಳಿದು ನಿಂತಿರುವುದು ನೋಡಿದರೆ, ಅಯ್ಯೋ ಅನಿಸುತ್ತದೆ. ಮಾರಪ್ಪನಹಳ್ಳಿಗೆ ಹೋಗುವ ಬಸ್‌ ಎಂದು ಬೋರ್ಡ್‌ ಕಾಣಿಸುತ್ತದೆ. ಎಲ್ಲಿಂದ ಮಾರಪ್ಪನಹಳ್ಳಿಗೆ ಹೋಗುತ್ತಿತ್ತು ಎನ್ನುವುದು ಇಲ್ಲ.

Viral video driver requesting the passengers to leave the driver s seat

ವೈರಲ್‌ ವಿಡಿಯೋದಲ್ಲಿ ಏನಿದೆ ?

ವಿಡಿಯೋದಲ್ಲಿ ಸರ್ಕಾರಿ ಬಸ್‌ (ಕಲ್ಯಾಣ ಕರ್ನಾಟಕ ಸಾರಿಗೆ)ನ ಡ್ರೈವರ್‌ ಅಥವಾ ಕಂಡೆಕ್ಟರ್‌ ಬಸ್‌ನಿಂದ ಇಳಿದು ಬಂದು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸುತ್ತಿರುವಂತೆ ಇದೆ. ಬಸ್‌ನ ಮುಂಭಾಗದ ತುಂಬಾ ಯುವಕರು ಕುಳಿತಿರುವುದು ಇದೆ. ಆದರೆ, ಬಸ್ ಡ್ರೈವರ್‌ ಏನು ಹೇಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ರೆಕಾರ್ಡ್‌ ಆಗಿಲ್ಲ. ಆದರೆ, ಆ ರೀತಿ ನಿಂತರೆ ಆಗಲ್ಲ ಅಂತ ಬಸ್‌ ಡ್ರೈವರ್‌ ಹೇಳುವುದು ಕೇಳಿಸುತ್ತದೆ. ಈ ವಿಡಿಯೋವನ್ನು ರೆಕಾರ್ಡ್‌ ಮಾಡಿರುವವರು ನೋಡ್ರಿ ಎಂಥ ಪರಿಸ್ಥಿತಿ ಬಂದೈತಿ ಅಂದ್ರ. ಪಾಪ ಡ್ರೈವರ್‌ ಸೀಟ್‌ ಬಿಟ್ಟು ಕೊಟ್ಟಾನ. ಡ್ರೈವರ್‌ ಕುಂದ್ರಾಕ ಜಾಗ ಇಲ್ಲ. ಆ ಪರಿ ಮಂದಿ ಬಸ್‌ನಾಗ ಕುಂತಾರ, ಫುಲ್ಲು ಫ್ಯಾಕ್‌ ಆಗೈತಿ. ಡ್ರೈವರ್‌ ಇಳಿದು ಹೊರಗ ಬಂದಾನ ನೋಡ್ರಿ ಎಂದು ಹೇಳಿರುವುದು ಇದೆ.

ಫ್ರೀ ಬಸ್‌ ಎಫೆಕ್ಟ್‌ ಎಂದ ಜನ

ಈ ರೀತಿ ಬಸ್‌ ತುಂಬಾ ಜನ ಇರುವುದಕ್ಕೆ ಕೆಲವರು ವ್ಯಂಗ್ಯವಾಡಿದ್ದಾರೆ. ಇದೆಲ್ಲ ಫ್ರೀ ಬಸ್‌ನ ಎಫೆಕ್ಟ್‌, ಉಚಿತ ಬಸ್‌ನಿಂದ ಈ ರೀತಿ ಆಗಿದೆ. ಬಸ್‌ ತುಂಬಿ ತುಳುಕುತ್ತಿದೆ. ಕೊನೆಗೆ ಬಸ್‌ ಡ್ರೈವರ್‌ ಅನ್ನೇ ಹೊರಗೆ ದಬ್ಬಿದ್ದಾರೆ. ಈಗ ಬಸ್‌ನ ಯಾರು ಓಡಿಸ್ತಾರೆ, ಅದು ಹೆಂಗೆ ಮುಂದಕ್ಕೆ ಹೋಗುತ್ತೆ ಎಂದು ಹಾಸ್ಯ ಮಾಡಿದ್ದಾರೆ. ರವಿ - ಎಸ್‌ಆರ್‌ (ravi - sr) ಎನ್ನುವ ಖಾತೆಯಿಂದ ಈ ವಿಡಿಯೋ ಅಪ್ಲೋಡ್‌ ಆಗಿದ್ದು, ಭಾರೀ ವೈರಲ್‌ ಆಗಿದೆ.

ನಿಖರ ಮಾಹಿತಿ ವಿಡಿಯೋದಲ್ಲಿ ಇಲ್ಲ

ಇನ್ನು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆಯಾದರೂ, ಇದು ಯಾವಾಗ ಮತ್ತು ಎಲ್ಲಿ ನಡೆಯಿತು ಎನ್ನುವ ವಿವರ ಇಲ್ಲ. ಬಸ್‌ನ ಒಳಗಿಂದ ಯಾರೂ ಮಾತನಾಡಿಲ್ಲ. ರಸ್ತೆಯಲ್ಲಿ ಬೈಕ್‌ನ ಮೂಲಕ ಹೋಗುವವರು ಈ ವಿಡಿಯೋವನ್ನು ಚಿತ್ರೀಕರಿಸುಂತಿದೆ. ಈ ವಿಡಿಯೋವನ್ನು 28 ಸಾವಿರ ಜನ ಲೈಕ್‌ ಮಾಡಿದ್ದು, ಸಾವಿರಕ್ಕೂ ಹೆಚ್ಚು ಶೇರ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+