Viral video: ಹಾಡಿನ ಮೂಲಕ ದಿವಾಳಿ & ದೀಪಾವಳಿ ನಡುವಿನ ವ್ಯತ್ಯಾಸ ತಿಳಿಸಿದ ವಿಕ್ಕಿಪೀಡಿಯಾ- ವಿಡಿಯೋ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ವಿಡಿಯೋ ಮೂಲಕ ಹೆಸರು ಮಾಡಿದ ವಿಕ್ಕಿಪೀಡಿಯಾ ವಿಕಾಸ್ ದೀಪಾವಳಿ ಹಬ್ಬಕ್ಕೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 'ಜಾನಿ ಮೇರಾ ನಾಮ್' ಸಿನಿಮಾದ 'ಊರಿಗೊಬ್ಲೆ ಪದ್ಮಾವತಿ' ಹಾಡಿನ ರಿಲೀಕ್ಸ್‌ಗೆ ವಿಕ್ಕಿಪೀಡಿಯಾ ವಿಕಾಸ್ ದೀಪಾವಳಿ ಉಚ್ಚಾರಣೆ ಬಗ್ಗೆ ಹೇಳಿದ್ದಾರೆ.
ಹೌದು.... 'ನಾನು ನಂದಿನಿ ಬೆಂಗಳೂರಿಗೆ ಬಂದಿನಿ' ಹಾಡಿನ ಮೂಲಕ ಸಕ್ಕತ್ ವೈರಲ್ ಆಗಿದ್ದ ವಿಕಾಸ್, ಆಗಾಗ ಹೊಸ ಹೊಸ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಜಲಾವೃತಗೊಂಡ ಪ್ರದೇಶಗಳ ವಿಡಿಯೋಗಳನ್ನು ಜೋಡಿಸಿ ಹಾಡು ಕ್ರಿಯೇಟ್ ಮಾಡಿದ್ದರು. ಇದಾದ ಬಳಿಕ ದೀಪಾವಳಿಗಾಗಿನೇ ಮತ್ತೊಂದನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಈ ಹಾಡು ಯಾವುದು ಹೇಗಿದೆ ಅನ್ನೋದನ್ನು ನೋಡೋಣ.

ದುನಿಯಾ ವಿಜಯ್ ಹಾಗೂ ರಮ್ಯಾ ಅಭಿನಯದ 'ಜಾನಿ ಮೇರಾ ನಾಮ್' ಸಿನಿಮಾದ 'ಊರಿಗೊಬ್ಳೆ ಪದ್ಮಾವತಿ' ಹಾಡು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಈ ಹಾಡಿನ ರಿಲೀಕ್ಸ್‌ನಿಂದ ವಿಕ್ಕಿಪೀಡಿಯಾ ವಿಕಾಸ್ ದೀಪಾವಳಿ ಪದದ ಉಚ್ಛಾರಣೆ ಬಗ್ಗೆ ತಿಳಿಸಿದ್ದಾರೆ. ಅಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿ ಕಾಮಿಡಿ ಕೂಡ ಇದೆ.
ಸಾಮಾನ್ಯವಾಗಿ ನೀವು ಸಂದೇಶಗಳಲ್ಲಿ, ಎಲ್ಲದರೂ ಓದುವಾಗ 'Deepawali, Diwali' ಈ ಎರಡು ಪದಗಳನ್ನು ನೋಡಿರುತ್ತೀರಿ. ಈ ಎರಡು ಪದಗಳನ್ನು ಬೇರೆ ಬೇರೆಯಾಗಿ ಉಚ್ಛರಿಸಲಾಗುತ್ತದೆ. ಕೆಲವರು ದೀಪಾವಳಿ ಎನ್ನುತ್ತಾರೆ ಇನ್ನೂ ಕೆಲವರು ದಿವಾಳಿ ಎನ್ನುತ್ತಾರೆ.

ಹೀಗೆ Deepawali, Diwali ಈ ಎರಡರ ಪದಗಳ ಉಚ್ಛಾರಣೆ ಬೇರೆ ಬೇರೆ ಆಗಿದೆ.
Deepawali ಇಂಗ್ಲೀಷ್ ಪದವನ್ನು ಕನ್ನಡದಲ್ಲಿ 'ದೀಪಾವಳಿ' ಎಂದರೆ, Diwali ಇಂಗ್ಲೀಷ್ ಪದವನ್ನು 'ದಿವಾಳಿ' ಎನ್ನುತ್ತಾರೆ ಜನ. 'ದಿವಾಳಿ' ಅಂದರೆ ಕನ್ನಡದಲ್ಲಿ ಹಾಳಾಗುವುದು ಎಂದಾಗುತ್ತದೆ. ಹೀಗಾಗಿ ವಿಕ್ಕಿಪೀಡಿಯಾ ವಿಕಾಸ್ 'ದಿವಾಳಿ' ಅಲ್ಲ ಇದು ' ದೀಪಾವಳಿ' ಎನ್ನುವುದನ್ನು 'ಊರಿಗೊಬ್ಲೆ ಪದ್ಮಾವತಿ' ಹಾಡಿನ ರಿಲೀಕ್ಸ್ ಮೂಲಕ ತಿಳಿಸಿದ್ದಾರೆ. ಹಾಗಾದರೆ ಹಾಡು ಹೇಗೆ ಆರಂಭವಾಗುತ್ತದೆ.
ವಿಕ್ಕಿಪೀಡಿಯಾ ವಿಕಾಸ್ ಹೊಸ ವಿಡಿಯೋ ರಿಲೀಕ್ಸ್
Aunty...ಏನಮ್ಮಾ... Diwa..... Diwa.... Happy Diwali...Diwa..... Diwa.... Happy Diwali.. Dont you know... Dont you know... It's ದೀಪಾವಳಿ... Dont you know... Dont you know... It's ದೀಪಾವಳಿ... Diwali ಅಂದರೆ Fullu Bankrupt ಆಗೋದು....ಅಪಾರ್ಥ ಆಗತ್ತೆ... ದಯವಿಟ್ಟು ನೋಡ್ಕೊಂಡ್ ಹೇಳು.. ನಮ್ ಕಡೆ ನಾವು Diwali ಅಂತೀವಿ.. ಇಲ್ಲೂ ಕೂಡ ಹಂಗೆ ಅಂತರ್ ಅನ್ಕೊಂಡ್ವಿ.. ಕನ್ನಡದಲ್ಲಿ ದೀಪಾವಳಿ... ನಿಮ್ ಕಡೆ ಅದು Diwali... ಕನ್ನಡದಲ್ಲಿ ದೀಪಾವಳಿ... ನಿಮ್ ಕಡೆ ಅದು Diwali... ಹೇಳಿ ಹೇಳಿ ಸಾಕಾಯ್ತ್ ಕಣ್ರೀ... ರೀ.. ಇವಾಗ explanain ಮಾಡಿದೀವಲ್ವಾ.. ಅವಳು correctag ಹೇಳ್ತಾಳೆ.. ಇವಾಗ ಹೇಳಮ್ಮ... Happy Diwali.... ಅಯ್ಯೋ....
ಈ ಹಾಡಿನಲ್ಲಿ ಆಂಟಿ ಅಂಕಲ್ ಗೆ ಒಂದು ಹುಡುಗಿ ದೀಪಾವಳಿಯ ಶುಭಾಶಯ ತಿಳಿಸುತ್ತಾಳೆ. ಆದರೆ ಆಕೆ ದೀಪಾವಳಿ ಅನ್ನೋ ಬದಲಿಗೆ ದಿವಾಲಿ ಎನ್ನುತ್ತಾಳೆ. ಆಗ ಆಂಟಿ ಅದು ದಿವಾಲಿ ಅಲ್ಲ ದೀಪಾವಳಿ ಎಂದು ತಿದ್ದುತ್ತಾಳೆ. ಅಂಕಲ್ ಕೂಡ ಅದನ್ನು ತಿದ್ದಿ ಹೇಳುತ್ತಾರೆ. ಆದರೆ ಹುಡುಗಿ ಕೊನೆಯಲ್ಲೂ ಹ್ಯಾಪಿ ದಿವಾಲಿ ಅಂತಲೇ ಹೇಳುತ್ತಾಳೆ. ಇದರಲ್ಲಿ ಆಂಟಿ ವೇಷ ಹಾಗೂ ಹುಡುಗಿ ವೇಷವನ್ನು ವಿಕಾಸ್ ಹಾಕಿರುತ್ತಾರೆ. ತಮ್ಮದೇ ಆದ ಶೈಲಿಯಲ್ಲಿ ಹಾಡು ಹಾಡುತ್ತಾರೆ.
ಈ ವಿಡಿಯೋವನ್ನು ವಿಕ್ಕಿಪೀಡಿಯಾ ವಿಕಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಹಲವಾರು ಜನ ಮೆಚ್ಚುಗೆ ವ್ಯಕ್ತಪಡಿಸಿ, ಹಂಚಿಕೊಂಡಿದ್ದಾರೆ. ಈ ದೀಪವಾಳಿಗೆ ಈ ವಿಡಿಯೋ ವಿಶೇಷವಾಗಿದೆ. ಹೀಗಾಗಿ ಜನ ಲೈಕ್ಸ್ ಮಾಡಿ ಶೇರ್ ಮಾಡಿದ್ದಾರೆ. ಸಾಕಷ್ಟು ಜನ ಇದಕ್ಕೆ ಕಮೆಂಟ್ ಕೂಡ ಮಾಡಿದ್ದಾರೆ.












Click it and Unblock the Notifications