ಮೋದಿ ಐದು ಸಾವಿರ ಕೋಡ್ತಾರಂತೆ: ಹುಬ್ಬಳ್ಳಿಯಲ್ಲಿ ಎದ್ದುಬಿದ್ದು ಓಡಿದ ಮಹಿಳೆಯರ ದಂಡು

ಹುಬ್ಬಳ್ಳಿ,ಡಿಸೆಂಬರ್‌ 23: ಪ್ರಧಾನಿ ನರೇಂದ್ರ ಮೋದಿ ಐದು ಸಾವಿರ ಕೋಡ್ತಾರಂತೆ ಅಂತೆ ಸುಳ್ಳು ವದಂತಿ ಹಬ್ಬಿದ್ದು ಹುಬ್ಬಳ್ಳಿ ಸಮೀಪದ ಕಲಘಟಗಿಯ ಗ್ಯಾಸ್ ಕಚೇರಿವೊಂದರ ಮುಂದೆ ಎದ್ದುಬಿದ್ದು ಎಂದು ಮಹಿಳೆಯರ ದಂಡು ಸೇರಿದೆ.

ಹೌದು, ಕೇಂದ್ರ ಪೆಟ್ರೋಲಿಯಂ ಇಲಾಖೆಯಿಂದ ಎಲ್ಲ ಗ್ರಾಹಕರ ಇ ಕೆವೈಸಿ ಮಾಡಿಸಿ ಎಂದು ಆದೇಶ ಬಂದಿದೆ. ಅದರಂತೆ ಎಲ್ಲರ ಇ ಕೆವೈಸಿ ಪಡೆದುಕೊಳ್ಳಿ ಎಂದು ಗ್ಯಾಸ್‌ ಸಿಲಿಂಡರ್‌ ವಿತರಕ ಕಂಪನಿಯ ಅಧಿಕಾರಿಗಳು ಕಳೆದ ಒಂದೆರಡು ವಾರದ ಹಿಂದೆ ತಮ್ಮ ವಿತರಕರಿಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಮೋದಿಯವರು ಐದು ಸಾವಿರ ನೀಡುತ್ತಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದು ಇಂದು ಕಲಘಟಗಿ ಪಟ್ಟಣದ ಲೋಕಪೂಜ್ಯ ಗ್ಯಾಸ್ ಕಚೇರಿ ಮುಂದೆ ನೂರಾರು ಮಹಿಳೆಯರು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತಿದ್ದಾರೆ.

Village Women Head to Govt Offices Due to Fake News of PM Modi Offering 5000 Rs

ನಿನ್ನೆಯವರಗೂ(ಶುಕ್ರವಾರದವರೆಗೂ) ಇ ಕೆವೈಸಿಗೆ ಅಲ್ಪ ಪ್ರಮಾಣದ ಜನರು ಆಗಮಿಸುತ್ತಿದ್ದರು ಇಂದು ಏಕಾಏಕಿ ಗ್ರಾಮೀಣ ಭಾಗದಿಂದ ನೂರಾರು ಜನರು ಆಗಮಿಸಿದ್ದು, ಈ ಕೆವೈಸಿ ಮಾಡಲು ತೊಂದರೆ ಆಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ಮಹಿಳೆಯರು ಯಾಕಿಷ್ಟು ಪ್ರಮಾಣದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಕೇಳಿದಾಗ ಪ್ರಧಾನಿ ನರೇಂದ್ರ ಮೋದಿಯವರು ಐದು ಸಾವಿರ ಹಣ ನೀಡುತ್ತಿದ್ದಾರೆ ಎನ್ನುವ ಸುಳ್ಳು ವದಂತಿಗೆ ಮಹಿಳೆಯರು ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಮಾಹಿತಿ ಸುಳ್ಳು ಎಂದು ಮಹಿಳೆಯರಿಗೆ ತಿಳಿಸಿದರು ಸರದಿಯಿಂದ ಹಿಂದೆ ಸರಿಯದೆ ಇರುವುದು ಆಶ್ಚರ್ಯವಾಗಿದೆ. ಈ ಒಂದು ಗ್ಯಾಸ್ ಇ ಕೆವೈಸಿ ಮಾಡಿಸಲು ಇನ್ನು ಯಾವುದೆ ರೀತಿಯ ಕೋನೆಯ ದಿನಾಂಕ ನಿಗದಿ ಪಡಿಸಿಲ್ಲ ಜನರು ನಿಧಾನವಾಗಿ ಮಾಡಿಸಬಹುದು ಎನ್ನಲಾಗಿದೆ.

ಕಲಬುರ್ಗಿಯಲ್ಲಿ ಮೋದಿ 500 ರೂ. ಸಿಲಿಂಡರ್‌ ನೀಡ್ತಾರೆ ಎಂಬ ವದಂತಿ

ಹೌದು, ನರೇಂದ್ರ ಮೋದಿ ಮೂರು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಾಜಸ್ತಾನದಲ್ಲಿ 500 ರೂ. ಸಿಲಿಂಡರ್‌ ನೀಡುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಸಿಲಿಂಡರ್‌ ದರ 500 ರೂ. ಮಾಡುತ್ತಾರೆ. ಆಗ ಇ ಕೆವೈಸಿ ಬೇಕೆ ಬೇಕು, ಆದ್ದರಿಂದ ಮಾಡಿಸಿ ಎಂದು ನೆರೆಯವರು ಹೇಳಿದ್ದರಿಂದ ಕಲಬುರ್ಗಿ ಜಿಲ್ಲೆಯಲ್ಲಿ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಗ್ಯಾಸ್‌ ಸಿಲಿಂಡರ್‌ನ ಇ-ಕೆವೈಸಿ ಬೇಗ ಮಾಡಿಸಿ ಇಲ್ಲದಿದ್ದರೆ ಜನೆವರಿಯಿಂದ ನಿಮಗೆ ಸಿಲಿಂಡರ್‌ ದೊರಕುವುದಿಲ್ಲ ಎಂದು ಪಕ್ಕದ ಮನೆಯವರು ಹೇಳಿದ್ದಾರೆ. ಆದ್ದರಿಂದ ಬೆಳಗಿನಿಂದ ಸರದಿಯಲ್ಲಿನಿಂತಿದ್ದೇನೆ ಎಂದು ಹೇಳುತ್ತಾರೆ ಎನ್ನಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+