ಬೆಂಗಳೂರು-ತಿರುಪತಿ ನಡುವೆ ವಂದೇ ಭಾರತ್ ಸಂಚಾರ: ರೈಲು ಹೊರಡುವ ಸಮಯ, ವೇಳಾಪಟ್ಟಿ ವಿವರ

ವಿಜಯವಾಡ-ಬೆಂಗಳೂರು ನಡುವೆ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ಈ ರೈಲು ಕೆಲವು ತಿಂಗಳ ಹಿಂದೆ ಅನುಮೋದನೆ ಪಡೆದಿದ್ದರೂ ಅದು ವಿಳಂಬವಾಗಿತ್ತು. ಈಗ ಇದಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ವಿಜಯವಾಡ ಮತ್ತು ಬೆಂಗಳೂರು ನಡುವೆ ಈ ಹೊಸ ರೈಲು ಸೇವೆ ಸಿಗಲಿದ್ದು, ತಿರುಪತಿ ಮಾರ್ಗವಾಗಿ ಈ ರೈಲು ಬೆಂಗಳೂರಿಗೆ ಹೋಗಲು ಮಾರ್ಗವನ್ನು ಅಂತಿಮಗೊಳಿಸಲಾಗಿದೆ. ಈ ರೈಲು ವಿಜಯವಾಡದಿಂದ ಬೆಂಗಳೂರಿಗೆ ಕೇವಲ ಒಂಬತ್ತು ಗಂಟೆಗಳಲ್ಲಿ ಹಾಗೂ ತಿರುಪತಿಗೆ ಕೇವಲ ನಾಲ್ಕೂವರೆ ಗಂಟೆಗಳಲ್ಲಿ ತಲುಪುವಂತೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ವಂದೇ ಭಾರತ್ ರೈಲು ಪ್ರಸ್ತುತ ವಿಜಯವಾಡ-ಚೆನ್ನೈ ನಡುವೆ ಚಲಿಸುತ್ತಿದೆ. ಇದನ್ನು ಬೆಂಗಳೂರಿಗೆ ಹಂಚಿಕೆ ಮಾಡಬೇಕು ಕೋರಿಕೆಯ ಮೇರೆಗೆ ರೈಲ್ವೆ ಅಧಿಕಾರಿಗಳು ಮೇ ತಿಂಗಳಲ್ಲಿಯೇ ಈ ನಿರ್ಧಾರವನ್ನು ತೆಗೆದುಕೊಂಡರು. ಆದರೆ ಬೋಗಿಗಳ ಸಮಸ್ಯೆಯಿಂದಾಗಿ ರೈಲು ವಿಳಂಬವಾಗಿದೆ. ಈಗ ಅಧಿಕಾರಿಗಳು ಈ ರೈಲನ್ನು ಹಳಿ ಮೇಲೆ ಬಿಡಲು ಸಿದ್ಧರಾಗಿದ್ದಾರೆ. ಈ ರೈಲು ಲಭ್ಯವಾದರೆ ಬೆಂಗಳೂರಿಗೆ ಪ್ರಯಾಣವು ಇತರ ರೈಲುಗಳಿಗೆ ಹೋಲಿಸಿದರೆ 3 ಗಂಟೆಗಳ ಪ್ರಯಾಣದ ಸಮಯ ಕಡಿಮೆ ಮಾಡಲಿದೆ. ಈ ವಂದೇ ಭಾರತ್ ರೈಲು ಬೆಂಗಳೂರಿಗೆ ಹೋಗುವವರಿಗೆ ಹಾಗೂ ತಿರುಪತಿಗೆ ಹೋಗುವ ಭಕ್ತರಿಗೆ ಉಪಯುಕ್ತವಾಗಿರುತ್ತದೆ.

Vijayawada To Bengaluru Vande Bharat Via Tirupati 9 Hour Fast Travel Confirmed

ಈ ರೈಲು ವಿಜಯವಾಡದಿಂದ ಬೆಳಗ್ಗೆ 5:15ಕ್ಕೆ ಹೊರಟು, ತೇನಾಳಿ, ಒಂಗೋಲು, ನೆಲ್ಲೂರು, ತಿರುಪತಿ, ಚಿತ್ತೂರು, ಕಾಟ್ಪಾಡಿ, ಕೃಷ್ಣರಾಜಪುರಂ ಮೂಲಕ ಮಧ್ಯಾಹ್ನ 2:15ಕ್ಕೆ ಎಸ್‌ಎಂವಿಟಿ ಬೆಂಗಳೂರು ರೈಲು ನಿಲ್ದಾಣಕ್ಕೆ ತಲುಪಲಿದೆ. ಈ ಮಾರ್ಗದಲ್ಲಿ ತಿರುಪತಿ ತಲುಪುವ ಸಮಯ ಸುಮಾರು 4 ಗಂಟೆ 30 ನಿಮಿಷಗಳಷ್ಟಾಗಿದ್ದು, ವಿಜಯವಾಡದಿಂದ ಬೆಂಗಳೂರು ಪ್ರಯಾಣ 9 ಗಂಟೆಗಳಲ್ಲಿ ಮುಗಿಯಲಿದೆ. ಒಟ್ಟು 8 ಬೋಗಿಗಳಲ್ಲಿ 7 ಎಸಿ ಚೇರ್‌ಕಾರ್‌ಗಳು ಮತ್ತು ಒಂದು ಕಾರ್ಯನಿರ್ವಾಹಕ ಚೇರ್‌ಕಾರ್ ಇರುತ್ತದೆ. ಈ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನಗಳೂ ಚಲಿಸುತ್ತದೆ.

ರೈಲು ಹೊರಡುವ ಸಮಯ?

ಈ ರೈಲಿನ ಮಾರ್ಗ ಮತ್ತು ವೇಳಾಪಟ್ಟಿಯನ್ನು ಮತ್ತು ಅದರ ಸಂಖ್ಯೆಯನ್ನು ಕೂಡ ಅಂತಿಮಗೊಳಿಸಲಾಗಿದೆ. ಈ ರೈಲು (20711) ವಿಜಯವಾಡದಿಂದ ಬೆಳಿಗ್ಗೆ 5.15 ಕ್ಕೆ ಹೊರಟು ಬೆಳಿಗ್ಗೆ 5.39ಕ್ಕೆ ತೆನಾಲಿ, ಬೆಳಿಗ್ಗೆ 6.28ಕ್ಕೆ ಓಂಗೋಲ್, ಬೆಳಿಗ್ಗೆ 7.43ಕ್ಕೆ ನೆಲ್ಲೂರು, ಬೆಳಿಗ್ಗೆ 9.45ಕ್ಕೆ ತಿರುಪತಿ, ಬೆಳಿಗ್ಗೆ 10.27ಕ್ಕೆ ಚಿತ್ತೂರು, ಬೆಳಿಗ್ಗೆ 11.13ಕ್ಕೆ ಕಟ್ಪಾಡಿ, ಮಧ್ಯಾಹ್ನ 1.38ಕ್ಕೆ ಕೃಷ್ಣರಾಜಪುರಂ ಮತ್ತು ಮಧ್ಯಾಹ್ನ 2.15ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಅದೇ ರೀತಿ ಹಿಂದಿರುಗುವ ಪ್ರಯಾಣದಲ್ಲಿ ಈ ರೈಲು (20712) ಅದೇ ದಿನ ಮಧ್ಯಾಹ್ನ 2.45ಕ್ಕೆ ಬೆಂಗಳೂರಿನಿಂದ ಹೊರಟು 2.58ಕ್ಕೆ ಕೃಷ್ಣರಾಜಪುರಂ, ಸಂಜೆ 5.23ಕ್ಕೆ ಕಟ್ಪಾಡಿ, ಸಂಜೆ 5.49ಕ್ಕೆ ಚಿತ್ತೂರು, ಸಂಜೆ 6.55ಕ್ಕೆ ತಿರುಪತಿ, ರಾತ್ರಿ 8.18ಕ್ಕೆ ನೆಲ್ಲೂರು, ರಾತ್ರಿ 9.29ಕ್ಕೆ ಒಂಗೋಲ್, ರಾತ್ರಿ 10.42ಕ್ಕೆ ತೆನಾಲಿ ಮತ್ತು ರಾತ್ರಿ 11.45ಕ್ಕೆ ವಿಜಯವಾಡ ತಲುಪಲಿದೆ. ಈ ರೈಲು ತಿರುಪತಿಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ.

ಈ ಹೊಸ ವಂದೇಭಾರತ ರೈಲು ಸೇವೆಯಿಂದ ಬೆಂಗಳೂರು ಮತ್ತು ತಿರುಪತಿ ನಡುವೆ ಪ್ರಯಾಣಿಸುವವರಿಗೆ ವಿಶೇಷ ಸೌಕರ್ಯ ಮತ್ತು ಸಮಯದ ಉಳಿತಾಯ ದೊರೆಯಲಿದೆ. ಇತ್ತೀಚೆಗೆ ಮಾತ್ರ ಮಚಿಲಿಪಟ್ನಂ-ಯಶವಂತಪುರ ಕೊಂಡವೀಡು ಎಕ್ಸ್‌ಪ್ರೆಸ್ ಮಾತ್ರ ವಿಜಯವಾಡ-ಬೆಂಗಳೂರು ನೇರ ಸಂಪರ್ಕ ನೀಡುತ್ತಿದ್ದರೆ, ಈ ಹೊಸ ರೈಲು ಸೇವೆಯಿಂದ ಪ್ರಯಾಣಿಕರಿಗೆ ವೇಗವಾಗಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸುವ ಅವಕಾಶ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+