ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪರಿಚಯ

ವಿಜಯಪುರ, ಜುಲೈ 05 : ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಪುನಾರಚನೆ ಮಾಡಿದ್ದಾರೆ. ಕರ್ನಾಟಕ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರು ಸಂಪುಟ ಸೇರಿದ್ದಾರೆ. ಐದು ಬಾರಿ ಸಂಸದರಾಗಿ ಆಯ್ಕೆಯಾದ ರಮೇಶ್ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ.

ರಮೇಶ್ ಚಂದ್ರಪ್ಪ ಜಿಗಜಿಣಗಿ ಅವರು 1952ರ ಜೂನ್ 28 ರಂದು ವಿಜಯಪುರದ ಅಥರ್ಗಾದಲ್ಲಿ ಜನಿಸಿದರು. ಚಂದ್ರಪ್ಪ ಮತ್ತು ಬೌರಮ್ಮ ದಂಪತಿಯ ಪುತ್ರರಾದ ಇವರು ಬಿಎ ಪದವೀಧರರು. [ಮೋದಿ ಸಂಪುಟ ಸೇರಿದ ಸಚಿವರ ಪಟ್ಟಿ]

ramesh jigajinagi

ರಮೇಶ್ ಜಿಗಜಿಣಗಿ ಅವರು 1998, 1999 ಮತ್ತು 2004ರಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2009 ಮತ್ತು 2014ರ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ರಮೇಶ್ ಜಿಗಜಿಣಗಿ ಅವರ ಪರಿಚಯ ಇಲ್ಲಿದೆ...[ಗ್ಯಾಲರಿ : ಮೋದಿ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ]

* 1978 ರಲ್ಲಿ ಇಂಡಿ ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಆಯ್ಕೆ
* 1980 ರಲ್ಲಿ ಇಂಡಿ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಆಯ್ಕೆ
* 1983 ರಿಂದ 98ರ ತನಕ ಬಳ್ಳೊಳ್ಳಿ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆ
* 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಣೆ
* 1984-85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಣೆ
* 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ
* 1998, 1999 ಮತ್ತು 2004ರಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆ ಪ್ರವೇಶ
* 2009 ಮತ್ತು 2014ರಲ್ಲಿ ವಿಜಯಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ
* 2014ರ ಚುನಾವಣೆಯಲ್ಲಿ 4,71,757 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ [ಮಾಹಿತಿ : ಇಂಡಿಯಾ ವೋಟ್ಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+