Vijayapura Lok Sabha Election Results 2024: ವಿಜಯಪುರದ ಲೋಕಸಭಾ ಕ್ಷೇತ್ರದ ಸುಲ್ತಾನ್ ಆಗುವುದು ಇವರೇ?
ಇನ್ನೇನು ಕೆಲವೇ ಕ್ಷಣಗಳಲ್ಲಿ 18ನೇ ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರ ಬೀಳಲಿವೆ. ಈ ಚುನಾವಣೆಯಲ್ಲಿ ಗೆಲುವು ದಾಖಲಿಸಿ ದೆಹಲಿ ಫ್ಲೈಟ್ ಹತ್ತಬೇಕು ಎಂದು, ಅಭ್ಯರ್ಥಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿಜಯಾಪುರದ ಜನತೆ ಯಾರಿಗೆ ಕೈ ಹಿಡಿಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
ರಾಜಕೀಯ ಅನುಭವವನ್ನು ಸಾಕಷ್ಟು ಹೊಂದಿರುವ ರಮೇಶ್ ಜಿಗಜಿಣಗಿ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕೆ ಇಳಿದಿದ್ದು, ಕಾಂಗ್ರೆಸ್ ಸಹ ರಾಜು ಆಲಗೂರ ಅವರಿಗೆ ಟಿಕೆಟ್ ನೀಡಿದೆ. ಉಭಯ ಪಕ್ಷಗಳು ಜಾತೀಯ ಲೆಕ್ಕಾಚಾರವನ್ನೇ ಹಾಕಿ ಟಿಕೆಟ್ ನೀಡಿದ್ದು, ಮುಚ್ಚಡಿವು ಸಂಗತಿಯೇನಲ್ಲ.

ಹಾಲಿ ಸಂಸದ VS ಮಾಜಿ ಶಾಸಕ
ಮೂರು ಬಾರಿ ಲೋಕಸಭಾ ಸದಸ್ಯರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ರಮೇಶ್ ಜಿಗಜಿಣಗಿಗೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಇದೆ. ಅಲ್ಲದೆ ಸರಳ ಸಜ್ಜನ ಹಾಗೂ ಮತದಾರರ ಜೊತೆ ಸಂಪರ್ಕದಲ್ಲಿರುವ ರಾಜಕಾರಣಿ ಎಂಬ ಹಣೆ ಪಟ್ಟಿ ಇದೆ. ಕ್ಷೇತ್ರದ ಸಮಸ್ಯೆಯ ಬಗ್ಗೆ ಕಾಳಜಿ ಹೊಂದಿರುವ ರಾಜಕಾರಣಿ. ಇನ್ನು ಇವರಿಗೆ ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಅನುಭವ ಹೊಂದಿರುವ ರಾಜು ಅಲಗೂರ ಕಣಕ್ಕೆ ಇಳಿದಿದ್ದು, ಜಿದ್ದಾಜಿದ್ದು ಕಾಣಬಹುದು.
ವೈಮನಸ್ಸು ಶಮನ
ಕೆಲವು ದಿನಗಳ ವರೆಗೆ ಬಸವನಗೌಡ ಪಾಟಿಲ್ ಯತ್ನಾಳ್ ಹಾಗೂ ರಮೇಶ್ ಜಿಗಜಿಣಗಿ ನಡುವಿನ ವೈಮಸ್ಸು ಕರಗಿದೆ. ಅಲ್ಲದೆ ಯತ್ನಾಳ್ ಪವರ್ ಫುಲ್ ಭಾಷಣ್ ರಮೇಶ್ ಜಿಗಜಿಣಗಿ ಅವರ ಕೈ ಹಿಡಿದರೂ ಅಚ್ಚರಿಯೇನು ಇಲ್ಲ. ಆದರೆ ರಮೇಶ್ ಜಿಗಜಿಣಗಿ ಒಂದೇ ಒಂದು ಬಾರಿ ಧ್ವನಿ ಎತ್ತದೇ ಇರುವ ಆರೋಪ ಮಾತ್ರ ಇದೆ.
ಇನ್ನು ರಾಜು ಅಲಗೂರ ಅವರಿಗೆ ಪಕ್ಷದಲ್ಲಿ ಒಳ್ಳೆಯ ಒಡನಾಟ ಇದೆ. ಇದು ಅವರ ಗೆಲುವಿಗೆ ಪ್ಲಸ್ ಆಗಬಹುದು. ಅಲ್ಲದೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮಾಡಿದರೂ ಅಚ್ಚರಿ ಏನು ಇಲ್ಲ.

ಹ್ಯಾಟ್ರಿಕ್ ಗೆಲುವಿನ ಸರದಾರ
ಕಳೆದ ಲೋಕಸಭಾ ಚುನಾವಣೆಯಲ್ಲಿ ರಮೇಶ್ ಜಿಗಜಿಣಗಿ 6,35,867 ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಇವರಿಗೆ ಜೆಡಿಎಸ್‌ನ ಡಾ.ಸುನಿತಾ ದೇವಾನಂದ್ ಚೌಹಾಣ್ ಸ್ಪರ್ಧೆ ನಿಡಿದ್ದರು. ಇವರು ಕಳೆದ ಚುನಾವಣೆಯಲ್ಲಿ 377,829 ಮತ ಪಡೆದಿದ್ದರು. ಈ ಬಾರಿ ಹಾಲಿ ಸಂಸದ ಮತ್ತೊಮ್ಮೆ ಇಂತಹದ್ದೆ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ.
ಒಟ್ಟು 8 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ವಿಜಯಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ 6, ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನವನ್ನು ಗೆದ್ದಿವೆ. ಈ ಬಾರಿ ಮತದಾರ ಯಾವ ಪಕ್ಷಕ್ಕೆ ಮತ ಹಾಕಲಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications