Viajayapura Lok Sabha Ticket: 'ಕೈ' ಅಭ್ಯರ್ಥಿ ಫೈನಲ್, ಬಿಜೆಪಿ ಆಕಾಂಕ್ಷಿಗಳು ಯಾರು? ಟಿಕೆಟ್‌ಗಾಗಿ ಜೆ.ಪಿ ನಡ್ಡಾಗೆ ಪತ್ರ

ಬೆಂಗಳೂರು, ಮಾರ್ಚ್ 09: ಉತ್ತರ ಕರ್ನಾಟಕ ಭಾಗದ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯ ಹಿಡಿತವಿದೆ. ಈ ಪೈಕಿ ವಿಜಯಪುರ (Vijayapura Lok Sabha) ಲೋಕಸಭಾ ಕ್ಷೇತ್ರವು ಒಂದು. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಣೆ ಆಗಿದೆ. ಹಾಗಾದರೆ ಬಿಜೆಪಿಯ ಕಥೆ ಏನು? ಯಾರನ್ನು ಕಣಕ್ಕಿಳಿಸಲಿದೆ? ಇಲ್ಲಿ ಯಾರೆಲ್ಲ ಅಭ್ಯರ್ಥಿಗಳು ಇದ್ದಾರೆ, ಗೆಲವು-ಸೋಲಿನ ಲೆಕ್ಕಾಚಾರ ಏನು? ಎಂಬ ವಿಶ್ಲೇಷಣೆ ಇಲ್ಲಿದೆ.

ವಿಜಯಪುರ ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿಯ ಭದ್ರಕೋಟೆಯಾಗಿದೆ. ಇದರನ್ನು ಒಡೆಯಲೆಂದೆ ಕಾಂಗ್ರೆಸ್ ನಿರ್ಧರಿಸಿದ್ದು, ಇಲ್ಲಿ ರಾಜು ಅಲಗೂರು (Raju Alaguru) ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ ಟಿಕೆಟ್ ಪಡೆಯಲು ಹಲವರು ರೇಸಿನಲ್ಲಿದ್ದರು ಸಹಿತ ಅವರೆಲ್ಲರನ್ನು ಮೀರಿ ಮೊದಲ ಪಟ್ಟಿಯಲ್ಲಿ 'ಕೈ' ಅಭ್ಯರ್ಥಿ ರಾಜು ಅಲಗೂರು ಅವರು 39 ಜನರ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Vijayapura Lok Sabha BJP Ticket For Ramesh Jigajinagi or Govind Karjol Who Wrote a Letter to JP Nadda

ಇನ್ನೂ ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳ ಹೆಸರು ಕೇಳಿ ಬಂದಿದೆ. ಈ ಪೈಕಿ ಪಕ್ಷದ ನಾಯಕರೊಬ್ಬರು ಕೇಂದ್ರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಪಿ ನಡ್ಡಾಗೆ ಪತ್ರ ಬರೆದು 'ಟಿಕೆಟ್' ಕುರಿತು ಮನವಿ ಮಾಡಿದ್ದಾರೆ.

ಹ್ಯಾಟ್ರಿಕ್ ಭಾರಿಸಿದ ಜಿಗಜಿಣಗಿಗೆ ಟಿಕೆಟ್ ಸಿಗುತ್ತಾ?

ಬಿಜೆಪಿಯ ಹಿರಿಯ ನಾಯಕ ರಮೇಶ್ ಜಿಗಜಿಣಗಿ ಅವರು 2009ರಿಂದ ಸಂಸತ್ತಿಗೆ ಆಯ್ಕೆ ಆಗುತ್ತಾ ಬಂದಿದ್ದಾರೆ. ಈ ಮೂಲಕ ವಿಜಯಪುರದಲ್ಲಿ ಜಿಗಜಿಣಗಿ ಅವರು ಹ್ಯಾಟ್ರಿಕ್ ಭಾರಿಸಿದ್ದಾರೆ. ಸದ್ಯ ಅವರೀಗೆ ವಯಸ್ಸಾಗಿದೆ. ಅವರಿಗೆ ವಿಶ್ರಾಂತಿ ನೀಡಲು ಬಿಜೆಪಿ ಬಯಸಿದೆ. ಈ ಕಾರಣಕ್ಕೆ ಬಿಜೆಪಿಯು ಹಾಲಿ ಸಂಸದರಿಗೆ ಕೊಕ್ ನೀಡುವ ಪಟ್ಟಿಯಲ್ಲಿ ಜಿಗಜಿಣಗಿ ಅವರ ಹೆಸರಿದೆ ಎನ್ನಲಾಗುತ್ತಿದೆ.

ಅದಲ್ಲೇ ಕ್ಷೇತ್ರದಲ್ಲಿ ಹೊಸಬರಿಗೆ ಲೋಕಸಭಾ ಟಿಕೆಟ್ ನೀಡಲು ಬಿಜೆಪಿ ಪಾಳದಲ್ಲಿ ಚರ್ಚೆಗಳು ನಡೆಯುತ್ತಿದೆ. ಇತ್ತ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಹೀಗಾಗಿ ಅಭ್ಯರ್ಥಿಗಳಿಗೆ ಕೊರತೆಯೇನು ಇಲ್ಲದಾಗಿದೆ.

Vijayapura Lok Sabha BJP Ticket For Ramesh Jigajinagi or Govind Karjol Who Wrote a Letter to JP Nadda

ಗೋವಿಂದ ಕಾರಜೋಳ ಹೆಸರು ಮುನ್ನೆಲೆಗೆ

ನಿರಂತರ ಗೆಲುವು ಸಾಧಿಸಿದ ರಮೇಶ್ ಜಿಗಜಿಣಗಿ ಅವರ ಹೊರತಾಗಿ ಪ್ರಭಾವಿ ನಾಯಕರು ಯಾರಿದ್ದಾರೆಂದು ನೋಡಿದರೆ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹೆಸರು ಮುನ್ನೆಲೆಗೆ ಬಂದಿದೆ. ಈ ಎರಡು ನಾಯಕರು ಪರಿಸ್ಪರ ಸ್ನೇಹಿತರಾಗಿದ್ದಾರೆ. ಈ ಬಾರಿ ಕಾರಜೋಳ ಅವರಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲಿ ಒಲವು ಇದೆ. ಈ ಬಗ್ಗೆ ಚರ್ಚೆಗಳು ನಡೆದಿದ್ದು, ಶೀಘ್ರವೇ ಬಿಜೆಪಿಯಿಂದ ಬಿಡುಗಡೆ ಆಗಲಿರುವ ಪಟ್ಟಿಯಲ್ಲಿ ವಿಜಯಪುರಕ್ಕೆ ಯಾರೆಂದು ಅಧಿಕೃತಗೊಳ್ಳುವ ಸಾಧ್ಯತೆ ಇದೆ.

ಕ್ಷೇತ್ರದಲ್ಲಿ ಸ್ಥಳೀಯ ನಾಯಕರು ತಾವು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಗೆಲುವಿನ ಮುಖಗಳು ಎನ್ನಲಾಗುವ ಜಿಗಜಿಣಗಿ ಮತ್ತು ಕಾರಜೋಳ ಅವರು ಹೆಸರು ಚಾಲ್ತಿಯಲ್ಲಿದೆ.

ಟಿಕೆಟ್‌ಗಾಗಿ ಜೆಪಿ ನಡ್ಡಾಗೆ ಕಾರಜೋಳ ಪತ್ರ..!

ಈ ಬಾರಿ ಜಿಗಜಿಣಗಿ ಅವರಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ ಎಂದು ಪಕ್ಷದ ಒಳಗೆ ಕೇಳಿ ಬಂದ ಕೂಡಲೇ ಗೋವಿಂದ್ ಜಾರಜೋಳ ಅವರು ಕೇಂದ್ರ ವರಿಷ್ಠ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ ಪತ್ರೆ ಬರೆದು ಟಿಕೆಟ್ ಗೆ ಮನವಿ ಮಾಡಿದ್ದಾರೆ.

ಸ್ನೇಹಿತ ರಮೇಶ್ ಜಿಗಜಿಣಗಿ ಅವರು ನಾವು ಬಾಲ್ಯದ ಸ್ನೇಹಿತರು. ನಾವು ಒಟ್ಟಿಗೆ ಬೆಳೆದಿದ್ದೇವೆ. ರಾಜಕೀಯದಲ್ಲಿ ಕೂಡಿ ಬಂದಿದ್ದೇವೆ. ಅವರು ಶಾಸಕರಾಗಿ, ಸಚಿವರಾಗಿ, ಚಿಕ್ಕೋಡಿ ಹಾಗೂ ವಿಜಯಪುರ ಕ್ಷೇತ್ರದಿಂದ ಕೆಲವು ಭಾರಿ ಸಂಸದರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗೆ ಇದೆ. ಅಲ್ಲದೇ ಅವರು ಕೇಂದ್ರ ಸಚಿವರಾಗಿಯೂ ಅನುಭವ ಪಡೆದವರಾಗಿದ್ದಾರೆ.

ಆದ್ದರಿಂದ ಹಿರಿತನ ಆಧಾರದಲ್ಲಿ ಸ್ನೇಹಿತ ರಮೇಶ್ ಜಿಗಜಿಣಗಿ ಅವರಿಗೆ ಈ ಬಾರಿಯು ವಿಜಯಪುರ ಕ್ಷೇತ್ರ ಟಿಕೆಟ್ ನೀಡುವಂತೆ ಗೋವಿಂದ್ ಕಾರಜೋಳ ಅವರು ಮನವಿ ಮಾಡಿದ್ದಾರೆ.

1999ರಿಂದಲೂ ವಿಜಯಪುರ ಬಿಜೆಪಿ ತೆಕ್ಕೆಗೆ

1999 ರಿಂದಲೂ ಬಿಜೆಪಿ ತೆಕ್ಕೆಯಲ್ಲಿಯೇ ಇದೆ. 1999 ಮತ್ತು 2004ರ ಲೋಕಸಭಾ ಚುನಾವನೆಯಲ್ಲಿ ಇಂದಿನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎರಡು ಭಾರಿ ಗೆಲುವು ಸಾಧಿಸಿದ್ದರು. ನಂತರ 2009ರಿಂದ ರಮೇಶ್ ಜಿಗಜಿಣಗಿ ಅವರೇ ಹ್ಯಾಟ್ರಿಕ್ ಬಾರಿಸುತ್ತಾರೆ ಬಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಹಿಡಿತ ಕಳೆದುಕೊಳ್ಳದಿರಲು ತೀರ್ಮಾನಿಸಿದೆ.

ಇತ್ತ ಕಾಂಗ್ರೆಸ್ ಹಲವು ಆಕಾಂಕ್ಷಿಗಳು ಇದ್ದರು ಸಹಿತ ರಾಜು ಅಲಗೂರು ಅವರಿಗೆ ಟೀಕಟ್ ನೀಡುವ ಮೂಲಕ ತಂತ್ರಗಾರಿಕೆ ಹೆಣೆದಿದೆ. ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಗೆಲುವಿಗೆ ಹಪಾಹಪಿಸುತ್ತಿದ್ದು, ವರ್ಚಸ್ಸಿನ ಆಧಾರದಲ್ಲಿ ರಾಜು ಅವರಿಗೆ ಟಿಕೆಟ್ ನೀಡಿ ಬಿಜೆಪಿಗೆ ತೀವ್ರ ಪೈಪೋಟಿ ಒಡ್ಡಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+