Deepak Thimmayya: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ
ಬೆಂಗಳೂರು ಏಪ್ರಿಲ್ 11: ಮಾದ್ಯಮದ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರಾಗಿರುವ ದೀಪಕ್ ತಿಮ್ಮಯ್ಯ ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿದರು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ದೀಪಕ್ ತಿಮ್ಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಡಿಸಿಎಂ ಡಿಕೆ ಶಿವಕುಮಾರ್ ಅವರು ದೀಪಕ್ ತಿಮ್ಮಯ್ಯ ಅವರನ್ನು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾಧ್ಯಮ ಸಲಹೆಗಾರರಾಗಿ ನೇಮಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿರುವ ಸದಾಶಿವನಗರ ನಿವಾಸದಲ್ಲಿ ಗುರುವಾರ ದೀಪಕ್ ತಿಮ್ಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ಬಗ್ಗೆ ಡಿಕೆ ಶಿವಕುಮಾರ್ ಎಕ್ಸ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 'ಹಿರಿಯ ಪತ್ರಕರ್ತರಾದ ಶ್ರೀ ದೀಪಕ್ ತಿಮ್ಮಯ್ಯ ಅವರು ಇಂದು ಗೃಹಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು, ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದೆ' ಎಂದು ಡಿಕೆ ಶಿವಕುಮಾರ್ ಬರೆದಿದ್ದಾರೆ.

ದೀಪಕ್ ತಿಮ್ಮಯ್ಯ ಅವರು ಹಿರಿಯ ಪತ್ರಕರ್ತರಾಗಿದ್ದು 'ಜೇಡರ ಬಲೆ' ಕಾರ್ಯಕ್ರಮದ ಮೂಲಕ ಹೆಸರುವಾಸಿಯಾಗಿದ್ದಾರೆ. ಇವರು ಕಾರ್ಯಕ್ರಮ ನಿರೂಪಣೆ, ಹಲವಾರು ಸಂದರ್ಶನಗಳು ಹಾಗೂ ಸಿನಿಮಾ ಕೂಡ ಮಾಡಿದ್ದಾರೆ.
ಹಿರಿಯ ಪತ್ರಕರ್ತರಾದ ಶ್ರೀ ದೀಪಕ್ ತಿಮ್ಮಯ್ಯ ಅವರು ಇಂದು ಗೃಹಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು, ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದೆ. pic.twitter.com/iIkCv0jY0A
— DK Shivakumar (@DKShivakumar) April 11, 2024
'ನೀನೇ ಬರಿ ನೀನೇ' ಕನ್ನಡ ಸಿನಿಮಾದಲ್ಲಿ ನೀಶ್ ತೇಜೇಶ್ವರ್, ದೀಪಿಕಾ ಕಾಮಯ್ಯ ಮತ್ತು ಸಂಯುಕ್ತ ಹೊರ್ನಾಡ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ದೀಪಕ್ ತಿಮಯ್ಯ ನಿರ್ದೇಶಿಸಿದ್ದಾರೆ ಮತ್ತು ಕಥೆಯನ್ನು ವಿನಾಯಕ್ ಭಟ್ ಸಹ ಬರೆದಿದ್ದಾರೆ. 2009 ರ ಆಲ್ಬಂನ ಎಲ್ಲಾ ಹಾಡುಗಳನ್ನು ಚಿತ್ರದಲ್ಲಿ ಉಳಿಸಿಕೊಳ್ಳಲಾಗಿದೆ. ಸಕಲೇಶಪುರ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಇದೇ ವೇಳೆ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದರು. ಅಂದು ಯಾಕೆ ಯಡಿಯೂರಪ್ಪನವರು ಕಣ್ಣೀರು ಹಾಕುವ ಪರಿಸ್ಥಿತಿ ಬಂತು? ಅದಕ್ಕೆ ಉತ್ತರಿಸಲಿ. ನಮಗೆ ರಾಹುಲ್ ಗಾಂಧಿ ಹೆಸರು ಹೇಳುವ ಧೈರ್ಯ ಇಲ್ಲ ಎನ್ನುತ್ತಾರಲ್ಲ, ಹಾಗಾದರೆ ಶಿವಮೊಗ್ಗಕ್ಕೆ ಬಂದಾಗ ಪ್ರಧಾನಿ ಮೋದಿ ಯಾಕೆ ಅಭ್ಯರ್ಥಿಗಳ ಹೆಸರು ಹೇಳಿ ಮತ ಯಾಚಿಸಿದರು? ಅವರಿಗೇ ಧೈರ್ಯವಿಲ್ಲ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಓಟು ನೀಡುವುದು ಭಯೋತ್ಪಾದನೆಗೆ ಬೆಂಬಲ ನೀಡಿದಂತೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅದನ್ನು ಚುನಾವಣಾ ಆಯೋಗ ನೋಡಿಕೊಳ್ಳಲಿದೆ. ಮಾದರಿ ನೀತಿ ಸಮಯದ ಜಾರಿಯಲ್ಲಿ ಇರುವುದರಿಂದ ಅವರ ಹೇಳಿಕೆ ಬಗ್ಗೆ ಆಯೋಗ ಗಮನ ಹರಿಸಲಿದೆ ಎಂದರು.












Click it and Unblock the Notifications