'ವಾಲ್ಮೀಕಿ ನಿಗಮದ ಇಡೀ ಹಗರಣ ಮುಚ್ಚಿ ಹಾಕುವ ಸಂಚು'

ಬೆಂಗಳೂರು, ಸೆಪ್ಟೆಂಬರ್‌ 10: ಎಸ್‍ಐಟಿಯು ನಾಗೇಂದ್ರರ ಹೆಸರನ್ನು ಉಲ್ಲೇಖಿಸದೆ ಇರುವುದು, ನಾಗೇಂದ್ರರನ್ನು ತನಿಖೆಗೆ ಒಳಪಡಿಸದೆ ಇರುವುದು ಗಮನಿಸಿದಾಗ ವಾಲ್ಮೀಕಿ ನಿಗಮದ ಇಡೀ ಹಗರಣವನ್ನು ಮುಚ್ಚಿ ಹಾಕುವ ಸಂಚನ್ನು ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಮಾಡಿದಂತಿದೆ. ಇಲ್ಲವಾದರೆ ಎಸ್‍ಐಟಿ ಮತ್ತು ಇ.ಡಿ. ಚಾರ್ಜ್‍ಶೀಟಿಗೆ ಹೀಗೆ ಅಜಗಜಾಂತರ ಇರಲು ಹೇಗೆ ಸಾಧ್ಯ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.

ಈ ಕುರಿತು ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಗೇಂದ್ರರ ಮೌಖಿಕ ಸೂಚನೆಯ ಕುರಿತು ತಿಳಿಸಿದ್ದೆವು. ಚುನಾವಣೆಗೆ ಹಣ ಬಳಕೆ, ಬಾರ್‍ಗಳಿಗೆ ಹಣ ಹೋಗಿರುವುದರ ಕುರಿತು ಆರೋಪಿಸಿದ್ದೆವು. ನೆಕ್ಕುಂಟಿ ನಾಗರಾಜ್ ಮತ್ತು ಸಿದ್ದರಾಮಯ್ಯನವರಿಗೆ ಇರುವ ಸಂಬಂಧ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಗೇಂದ್ರ- ನೆಕ್ಕುಂಟಿ ಸಂಬಂಧ ಬಗ್ಗೆಯೂ ಕೂಡ ಫೋಟೊ ಸಹಿತ ಬೆಳಕು ಚೆಲ್ಲಿದ್ದೆವು. ಎಸ್‍ಐಟಿ ಚಾರ್ಜ್‍ಶೀಟಿನಲ್ಲಿ ನಾಗೇಂದ್ರ- ಬಸನಗೌಡ ದದ್ದಲ್ ಹೆಸರೇ ಇಲ್ಲ ಎಂದು ಆಕ್ಷೇಪಿಸಿದರು.

Valmiki is plotting to cover up the corporation scam Says CT Ravi

ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರ ಆರೋಪ ಮುಕ್ತವಾಗಲು ಮತ್ತು ಕ್ಲೀನ್ ಚಿಟ್ ಪಡೆಯಲು ಎಸಿಬಿಯನ್ನು ಬಳಸಿಕೊಂಡಿತ್ತು. ಅದೇ ಥರ ಎಸ್‍ಐಟಿಯನ್ನು ಬಳಸಿಕೊಂಡದ್ದು ವ್ಯಕ್ತವಾಗುತ್ತಿದೆ. ಇ.ಡಿ. ಚಾರ್ಜ್‍ಶೀಟಿನಲ್ಲಿ ಹಣದ ಬಳಕೆ, ಮಾಸ್ಟರ್‍ಮೈಂಡ್ ಯಾರೆಂಬ ಕುರಿತು ಉಲ್ಲೇಖಿಸಿದ್ದಾರೆ. ನಾಗೇಂದ್ರ, ಸತ್ಯನಾರಾಯಣವರ್ಮ ಎಲ್ಲರೂ ಸೇರಿ ಸಂಚು ನಡೆಸಿದ್ದಾಗಿ ಹೇಳಿದ್ದಾರೆ ಎಂದರು. ಇದರ ನೈತಿಕ ಹೊಣೆಯನ್ನು ಮುಖ್ಯಮಂತ್ರಿಗಳೇ ಹೊರಬೇಕೆಂದು ತಿಳಿಸಿದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕುರಿತು ಎನ್‍ಐಎ ತನ್ನ ಚಾರ್ಜ್‍ಶೀಟಿನಲ್ಲಿ ಅವರ ಹುನ್ನಾರ, ವಿಧ್ವಂಸಕ ಕೃತ್ಯ ನಡೆಸಲು ಮಾಡಿದ್ದ ಸಂಚು, ಐಸಿಸ್ ಜೊತೆಗಿನ ಸಂಬಂಧ, ಬಿಜೆಪಿ ರಾಜ್ಯ ಕಚೇರಿ ಗುರಿಯಾಗಿ ಇಟ್ಟುಕೊಂಡು ಬಾಂಬ್ ಸ್ಫೋಟ ಮಾಡಲು ನಡೆಸಿದ ಯೋಜನೆ ಕುರಿತು ವಿವರವಾಗಿ ತಿಳಿಸಿದ್ದಾರೆ. ಇಷ್ಟಾದ ಮೇಲೆಯೂ ಕೆಲವರಿಗೆ ಅವರು ಶಾಂತಿದೂತರು ಅನಿಸಿದರೆ, ಶಾಂತಿಗಾಗಿಯೇ ಇಸ್ಲಾಂ ಇರುವುದು ಎಂದು ಅನಿಸಿದರೆ, ಭಯೋತ್ಪಾದನೆ ಮತ್ತು ಇಸ್ಲಾಂಗೆ ಇರುವ ಸಂಬಂಧ ಅರ್ಥವಾಗದೆ ಇದ್ದರೆ ನಮ್ಮ ದೇಶ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+