ಜೆಡಿಎಸ್‌ ಅಭ್ಯರ್ಥಿಗೆ ನಿನ್ನ ಕೈಮುಗಿತೀನಿ ಎಂದ ವಿ ಸೋಮಣ್ಣ: ಹಿರಿಯ ನಾಯಕನಿಗೆ ಎಂಥ ಗತಿ

ಚಾಮರಾಜನಗರ, ಏಪ್ರಿಲ್‌ 26: ತನ್ನ ಸ್ವಂತ ಕ್ಷೇತ್ರ ಗೋವಿಂದರಾಜನಗರ ಬಿಟ್ಟು ವರುಣಾ ಹಾಗೂ ಚಾಮರಾಜನಗರದ ವಿಧಾನಸಭಾ ಕ್ಷೇತ್ರಗಳೆರಡಲ್ಲೂ ಬಿಜೆಪಿ ಹೈಕಮಾಂಡ್‌ ಸೂಚನೆ ಮೇರೆಗೆ ಸ್ಪರ್ಧೆ ಮಾಡುತ್ತಿರುವ ಸಚಿವ ವಿ ಸೋಮಣ್ಣ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲುವ ಆತಂಕ ಹೆಚ್ಚಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದ ಎರಡು ಹಳ್ಳಿಗಳಲ್ಲಿ ಮತಯಾಚನೆ ಮಾಡುವ ವೇಳೆ ಗ್ರಾಮಸ್ಥರಿಂದ ತರಾಟೆಗೆ ಒಳಗಾಗಿದ್ದ ಸೋಮಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್‌ ಆಗಿದೆ. ಇಲ್ಲಿ ಸಚಿವ ವಿ ಸೋಮಣ್ಣ ಅವರು ಚಾಮರಾಜನಗರ ಜೆಡಿಎಸ್‌ ಅಭ್ಯರ್ಥಿಗೆ ನಿನ್ನ ಕೈಮುಗಿತಿನಿ ನಾಮಪತ್ರ ವಾಪಸ್‌ ತಗೋ ಎಂದಿದ್ದಾರೆ. ಮಾತ್ರವಲ್ಲದೆ ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೂಟದ ಕಾರು ಕೊಡಿಸಿ ಪದವಿ ನೀಡುವ ಆಮಿಷವನ್ನು ಒಡಿದ್ದಾರೆ.

V Somanna Requesting JDS Candidate to Withdraw Nomination Audio Viral: What made BJP leaders to Beg?

ಬಿಜೆಪಿಯಲ್ಲಿ ಬಿಎಸ್‌ ಯಡಿಯೂರಪ್ಪ ಅವರ ನಂತರ ತನ್ನದೆ ಆದ ಇಮೇಜ್‌ ಹೊಂದಿರುವ ಲಿಂಗಾಯತ ಸಮುದಾಯದ ನಾಯಕನಿಗೆ ಇಷ್ಟವಿಲ್ಲದಿದ್ದರೂ ಬಿಜೆಪಿ ಹೈಕಮಾಂಡ್‌ ಸಿದ್ದರಾಮಯ್ಯಗೆ ಪ್ರಬಲ ಸ್ಪರ್ಧೆಯೊಡ್ಡುವ ಅಭ್ಯರ್ಥಿಯಾಗಿ ವಿ ಸೋಮಣ್ಣ ಅವರನ್ನು ನಿಲ್ಲಿಸಿದೆ. ಆದರೆ ಕ್ಷೇತ್ರದಲ್ಲಿ ಸೋಮಣ್ಣ ಅವರಿಗೆ ಇಲ್ಲಿ ಸೋಮಣ್ಣ ಅವರಿಗೆ ಅಷ್ಟೋಂದು ಹೋಲ್ಡ್‌ ಇಲ್ಲ ಎನ್ನವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ನಿನ್ನ ಕೈಮುಗಿತಿನಿ ಕಣಯ್ಯ

ಬಹಿರಂಗವಾಗಿರುವ ಆಡಿಯೋದಲ್ಲಿ ವಿ ಸೋಮಣ್ಣ ಅವರು ಜೆಡಿಎಸ್‌ ಅಭ್ಯರ್ಥಿಯಾದ ಮಲ್ಲಿಕಾರ್ಜುನ (ಆಲೂರು ಮಲ್ಲು) ಎಂಬುವವರ ಬಳಿ ನಿನ್ನ ಕೈಮುಗಿತಿನಿ ಕಣಯ್ಯ ನಾಮಪತ್ರ ವಾಪಸ್‌ ತಗೋ. ಜಿಟಿಜಿ ಅವರೊಂದಿಗೆ ನಾನು ಮಾತನಾಡುತ್ತೇನೆ. ನಾವಿಬ್ಬರು ಬಾಲ್ಯ ಸ್ನೇಹಿತರು ಎಂದು ಬೇಡಿಕೊಳ್ಳುವಂತೆ ಕಂಡು ಬರುತ್ತದೆ. ಅಧಿಕಾರವಿದ್ದಾಗ ವಿ ಸೋಮಣ್ಣ ಅವರು ತಮ್ಮದೇ ಬಿಜೆಪಿಯಲ್ಲಿ ಆಲೂರು ಮಲ್ಲು ತರಗಹದ ನಾಯಕರನ್ನು ತನ್ನ ಬಳಿ ಬೆಂಬಲಿಗರಾಗಿ ಹೊಂದಿದ್ದರು, ಆದರೆ ಈಗ ಅಂತಹವರ ಬಳಿ ಹಿರಿಯ ನಾಯಕ ವಿ ಸೋಮಣ್ಣ ಅವರು ಕೇಳಿಕೊಳ್ಳುವುದು ಹೈಕಮಾಂಡ್‌ ಹಿರಿಯನ್ನು ಯಾವ ಮಟ್ಟದಲ್ಲಿ ನೋಡುತ್ತದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

V Somanna Requesting JDS Candidate to Withdraw Nomination Audio Viral: What made BJP leaders to Beg?

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟರಂಗಶೆಟ್ಟಿ

ಸೋಮಣ್ಣ ಅವರಿಗೆ ವರುಣಾದಲ್ಲಿ ಈಗ ಕಣದಲ್ಲಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಪ್ರಬಲ ಅಭ್ಯರ್ಥಿ ಅವರನ್ನು ಮಣಿಸುವುದು ಕಷ್ಟಸಾಧ್ಯದ ಮಾತು. ಅದಂತೆ ಚಾಮರಾಜನಗರದಲ್ಲಿ ಸೋಮಣ್ಣ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುಟ್ಟರಂಗಶೆಟ್ಟಿ ಅವರು ನಿಂತಿದ್ದಾರೆ. ಒಂದು ವೇಳೆ ವರುಣಾ ಕೈತಪ್ಪಿದರೂ ಚಾಮರಾಜನಗರದಲ್ಲಿ ಸೋಮಣ್ಣ ಗೆಲ್ಲುವ ಅವಕಾಶವಿತ್ತು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನದೆ ಬಲವನ್ನು ಇಂದಿಗೂ ಹೊಂದಿದೆ.

ಸೋಮಣ್ಣ ಮಾತಿಗೆ ಸೊಪ್ಪು ಹಾಕಿಲ್ಲ

ಹೀಗಾಗಿ ಚಾಮರಾಜನಗರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ನಾಮಪತ್ರ ತೆಗೆಸಿದರೆ ತಾವು ಗೆಲ್ಲಬಹುದು ವಿಧಾನಸೌಧದಲ್ಲಿ ತಮ್ಮ ಸ್ಥಾನ ಭದ್ರಗೊಳಿಸಬಹುದು ಎಂದು ಸೋಮಣ್ಣ ಲೆಕ್ಕಾಚಾರವಾಗಿತ್ತು, ಆದರೆ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಸೋಮಣ್ಣ ಮಾತಿಗೆ ಸೊಪ್ಪು ಹಾಕಿದಂತಿಲ್ಲ. ಈ ಬಗ್ಗೆ ಮಾತನಾಡಿರುವ ಆಲೂಲು ಮಲ್ಲು ಆಡಿಯೋ ಸೋಮಣ್ಣ ಅವರದ್ದೇ. ಅವರು ನನಗೆ ಮಾತನಾಡಿದ್ದು, ಹೌದು ಆದರೆ ನಾನು ನಮ್ಮ ನಾಯಕರ ಅಣತಿಯಂತೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪಷ್ಟಣೆ ನೀಡಿದ್ದಾರೆ.

ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಬದಿಗೆ ಸರಿಸುವ ಪ್ರಯತ್ನವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಕೆಲವು ಕಾರಣಗಳನ್ನು ನೀಡಿ ಕೆಲವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಇಲ್ಲಿ ಪ್ರಮುಖವಾಗಿ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್‌ ಇವರಲ್ಲದೆ ಇನ್ನು ಕೆಲವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.

ಅರುಣ್‌ಗೆ ಟಿಕೆಟ್‌ ನೀಡುವಂತೆ ಮನವಿ

ಇಲ್ಲಿ ಜಗದೀಶ್ ಶೆಟ್ಟರ್‌ ಹಾಗೂ ಸವದಿ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಪಕ್ಷ ಅವರಿಗೆ ಟಿಕೆಟ್‌ ಕೂಡ ನೀಡಲಾಗಿದೆ. ಆದರೆ ಸೋಮಣ್ಣ ವಿಚಾರ ಹಾಗಗಲಿಲ್ಲ. ಸೋಮಣ್ಣ ಅವರು ಗೋವಿಂದರಾಜನಗರ ಕ್ಷೇತ್ರದಿಂದ ತಮ್ಮ ಪುತ್ರ ಅರುಣ್‌ಗೆ ಟಿಕೆಟ್‌ ನೀಡುವಂತೆ ಕೋರಿದ್ದರು ಎನ್ನಲಾಗಿತ್ತು. ಆದರೆ ಅಲ್ಲೂ ಸೋಮಣ್ಣ ಅವರಿಗೆ ನಿರಾಸೆ ಎದುರಾಗಿತ್ತು. ಸೋಮಣ್ಣ ಪುತ್ರ ಅರುಣ್‌ ಅವರಿಗೆ ಬದಲು ಉಮೇಶ್‌ ಶೆಟ್ಟಿಗೆ ಟಿಕೆಟ್‌ ನೀಡಲಾಯಿತು. ಇಲ್ಲಿ ಹಿರಿಯರಾದ ಸೋಮಣ್ಣ ಅವರನ್ನು ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಆರೋಪವೂ ಕೇಳಿ ಬಂದಿತು.

ಒಟ್ಟಾರೆ ಬಿಜೆಪಿಯಲ್ಲಿ ಹಿರಿಯರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪವನ್ನು ಸ್ವತಃ ಬಿಜೆಪಿಗರೆ ಒಪ್ಪಿಕೊಳ್ಳುತ್ತಾರೆ, ಆದರೆ ಬಂಡಾಯ ಎದ್ದ ಹಾಗೂ ಏಳುವ ಅಭ್ಯರ್ಥಿಗಳನ್ನು ಮಾತ್ರ ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ವರಿಷ್ಠರಾದ ಸೋಮಣ್ಣ ಅವರು ವರುಣಾ ಹಾಗೂ ಚಾಮರಾಜನಗರ ಎರಡಲ್ಲೂ ಗೆದ್ದರೆ ಅದು ಅವರ ಅದೃಷ್ಟವೇ ಸರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+