ಉಡುಪಿ ಕೃಷ್ಣ ಮಠದ ಸೇವೆ ಬುಕ್ ಮಾಡಲು ವೆಬ್‌ಸೈಟ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಜುಲೈ 14 : ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಿವಿಧ ಪೂಜೆಗಳಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗಿದೆ. ಏಕ್ಸಿಸ್ ಬ್ಯಾಂಕ್‌ನವರ ತಾಂತ್ರಿಕ ಸಹಕಾರದಿಂದ ಇದನ್ನು ಸಿದ್ಧಪಡಿಸಲಾಗಿದೆ.

'ಇ ಸೇವಾ' ಎಂಬ ಆನ್‌ಲೈನ್ ಸೇವಾ ಸೌಲಭ್ಯ ಮತ್ತು 'ಸೇವಾ' ಎಂಬ ಮೊಬೈಲ್ ಅಪ್ಲಿಕೇಷನ್‌ ಅನ್ನು ಬುಧವಾರ ಶ್ರೀ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿದರು, ವೆಬ್‌ಸೈಟ್‌ ರೂಪಿಸಿದ ತಂಡವನ್ನು ಹರಸಿದರು. [ಉಡುಪಿ ಮಠದಿಂದ ದುಶ್ಚಟ ನಿವಾರಣಾ ಹುಂಡಿ ಸ್ಥಾಪನೆ]

Use application or website to book sevas at Udupi Krishna Mutt

udupisrikrishnamatha.org ಇದರ ಮೂಲಕ ಭಕ್ತರು ತಮಗೆ ಬೇಕಾದ ಸೇವೆಗಳನ್ನು ಸಲ್ಲಿಸಬಹುದು. ಯಾವುದೇ ಬ್ಯಾಂಕ್‌ನ ಡೆಬಿಟ್/ ಕ್ರೆಡಿಟ್ ಕಾರ್ಡ್ ಮೂಲಕ ಸೇವೆಗಳನ್ನು ಬುಕ್ ಮಾಡಬಹುದು, ದೇಣಿಗೆಗಳನ್ನು ಸಲ್ಲಿಸಬಹುದು. ಮಠಕ್ಕೆ ಆಗಮಿಸುವವರು ವಸತಿ ವ್ಯವಸ್ಥೆ ಪಡೆಯಲು ವೆಬ್‌ಸೈಟ್‌ ಮೂಲಕ ಬುಕ್ ಮಾಡುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಆಳವಡಿಸಲಾಗುತ್ತದೆ. [ಉಡುಪಿ ಪರ್ಯಾಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹತ್ವದ ಬದಲಾವಣೆ]

'ಸೇವಾ ಎಂಬ ಆಪ್ ರೂಪಿಸಿದವರು ಉಡುಪಿಯ ಸಂದೀಪ್ ಸದಾನಂದ ಭಕ್ತ ಅವರ ತಂಡ. ಸೇವೆಗಳಿಗಾಗಿ ಆಪ್ ಹೊಂದಿದ ಮೊದಲ ಧಾರ್ಮಿಕ ಸಂಸ್ಥೆ ಶ್ರೀ ಕೃಷ್ಣ ಮಠ. ಇದರಲ್ಲಿಯೇ ರಶೀದಿ ಕೊಡುವ ವ್ಯವಸ್ಥೆಯನ್ನು ಅಳವಡಿಸಿದ್ದೇವೆ. ಆಪ್ ಉಚಿತವಾಗಿ ದೊರಕುತ್ತದೆ. ಇತರ ದೇವಸ್ಥಾನದವರು ಬಯಸಿದರೆ ಉಚಿತವಾಗಿ ನೋಂದಣಿ ಮಾಡಲಾಗುವುದು' ಎಂದು ಸಂದೀಪ್ ಭಕ್ತ ತಿಳಿಸಿದರು. [ಪೇಜಾವರ ಶ್ರೀಗಳಿಗೆ ಕೃಷ್ಣನ ಜೊತೆ ಒಲಿದ ಆಧುನಿಕ ಕುಬೇರ!]

ಎಕ್ಸಿಸ್ ಬ್ಯಾಂಕ್ ಮಂಗಳೂರು ವಲಯದ ಮುಖ್ಯಸ್ಥ ಸುರೇಶ್, ಉಡುಪಿ ಶಾಖಾ ಮುಖ್ಯಸ್ಥ ನರಸಿಂಹ ಕಾಮತ್, ದೀಪಕ್, ಆನ್‌ಲೈನ್ ಮೊದಲ ಸೇವಾಕರ್ತ ಸಿಸ್ಕಾಂ ವಾದಿರಾಜ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Udupi Pejawar mutt Vishwesha Tirtha Swamiji launched the website www.udupisrikrishnamatha.org and a mobile app on Wednesday. Both the website and the app will help the devotees to book sevas and offer donations to the mutt.
Please Wait while comments are loading...