ರಾಯಚೂರಿನಲ್ಲಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ

Posted By:
Subscribe to Oneindia Kannada

ರಾಯಚೂರು, ಜನವರಿ 21: ನಗರದ ಚಂದ್ರಮೌಳೇಶ್ವರ ವೃತ್ತದ ಬಳಿಯಿರುವ ಭ್ರಮಾರಾಂಭ ಪತ್ತಿನ ಸಹಕಾರ ಬ್ಯಾಂಕ್ ನ ದರೋಡೆಗೆ ಇಬ್ಬರು ಯುವಕರು ವಿಫಲ ಯತ್ನ ನಡೆಸಿ, ಅಲ್ಲಿಂದ ಪರಾರಿಯಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ ಬ್ಯಾಂಕ್ ವ್ಯವಹಾರಗಳು ಆರಂಭಗೊಂಡ ನಂತರ, ಬ್ಯಾಂಕಿನೊಳಕ್ಕೆ ನುಗ್ಗಿದ ಇಬ್ಬರು ಯುವಕರು ಕೈಯ್ಯಲ್ಲಿ ಚಾಕುವನ್ನು ಹಿಡಿದು ನೆರೆದಿದ್ದವರನ್ನು ಹೆದರಿಸಲು ಆರಂಭಿಸಿದ್ದಾರೆ.

Unsuccessfull atempt of bank robbery in Raichur

ಆದರೆ, ಬ್ಯಾಂಕಿನಲ್ಲಿ ಭಾರೀ ಜನಸಂದಣಿ ಇದ್ದು, ಜನರು ಒಂದಿಬ್ಬರು ಇವರ ವಿರುದ್ಧ ಹರಿಹಾಯ್ದಾಗ ಬೆದರಿದ ಯುವಕರು ಅಲ್ಲಿಂದ ಓಟ ಕಿತ್ತಿದ್ದಾರೆ.

ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸದರ್ ಬಜಾರ್ ಪೊಲೀಸರು ಬ್ಯಾಂಕಿಗೆ ಆಗಮಿಸಿ ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two men who tried to rob the bank flew off the site on seeing the huge crowd inside the bank in Raichur.
Please Wait while comments are loading...