ಹನುಮಾನ್ ಚಾಲೀಸ್ ಪಠಿಸಿದವನ ಮೇಲೆ ಬಿತ್ತು FIR : ಪ್ರಹ್ಲಾದ ಜೋಶಿ ಏನಂದ್ರು?
ಹುಬ್ಬಳ್ಳಿ, ಏಪ್ರಿಲ್ 08: ರಾಜ್ಯ ಸರ್ಕಾರ ಕೂಡಲೇ ಹನುಮಾನ್ ಚಾಲೀಸ್ ಪಠಿಸಿದವರ ಮೇಲೆ FIR ಹಾಕಿರುವುದನ್ನು ಕೈ ಬಿಡಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು. ಹನುಮಾನ್ ಚಾಲೀಸ್ ಪಠಣ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹನುಮಾನ್ ಚಾಲೀಸ್ ಪಠಿಸಿದವರ ಮೇಲೆ FIR ಹಾಕಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇವರೇನು ಕರ್ನಾಟಕವನ್ನು ಅಳುತ್ತಿದ್ದರೋ? ಅಥವಾ ಮೂಲಭೂತವಾದಿ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದರೋ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದಾಗಲೂ ಹೀಗೇ ಹಿಂದೂ ವಿರೋಧಿ ನಡೆ ತೋರಿದೆ ಎಂದು ಹರಿ ಹಾಯ್ದರು. ಕಾಂಗ್ರೆಸ್ ಪಕ್ಷ ಕಮ್ಯುನಿಟಿ ರಾಜಕಾರಣ ಮಾಡುತ್ತಿದೆ. ವೋಟ್ ಬ್ಯಾಂಕ್ ಗಾಗಿ ತುಷ್ಟಿಕರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಬೆಳ್ಳಂಬೆಳಗ್ಗೆ ನಮಾಜ್ ಮಾಡಬಹುದೇ? ಬೆಳಕು ಹರಿಯುವ ಮೊದಲೇ 6 ಗಂಟೆಗೂ ಮುನ್ನ ಆ ಕೋಮಿನವರು ನಮಾಜ್ ಮಾಡಬಹುದು. ಆದರೆ, ಹಿಂದೂಗಳು ಹನುಮಾನ್ ಚಾಲೀಸ್ ಹಾಕುವುದು ತಪ್ಪೇ? ಎಂದು ಜೋಶಿ ಪ್ರಶ್ನಿಸಿದರು. ಇನ್ನೂ ಕಾಂಗ್ರೆಸ್ ತುಷ್ಟಿಕರಣದ ಪರಕಾಷ್ಟೇ ತಲುಪಿದೆ. ರಾಜ್ಯದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾವ ರಾಜ್ಯದಲ್ಲಿ ಇದ್ದೀರಿ? ಕೂಡಲೇ ಹನುಮಾನ್ ಚಾಲೀಸ್ ಪಠಿಸಿದ ಅಂಗಡಿಯಾತನ ಮೇಲೆ ಹಾಕಿರುವ FIR ಕೈ ಬಿಟ್ಟು, ಆತನನ್ನು ಪ್ರಕಾರಣದಿಂದ ಮುಕ್ತಗೊಳಿಸಿ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅಗ್ರಹಿಸಿದರು.












Click it and Unblock the Notifications