ಜನ ನೋಡ್ತಾರೆ ಅಂತ ಸರ್ಕಾರವೇ ಸರ್ವರ್‌ ಡೌನ್‌ ಮಾಡಿದೆ ಎಂದ ಕೇಂದ್ರ ಸಚಿವ!

Wakf property dispute in Karnataka: ನಾನು ಕೇಳಿದ ಯಾವ ಪ್ರಶ್ನೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದು,ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಜನರಿಗೆ ಮಾಹಿತಿ ಸಿಗಬಾರದು ಎನ್ನುವ ಕಾರಣಕ್ಕೆ ಸರ್ಕಾರವೇ ಸರ್ವರ್ ಡೌನ್ ಮಾಡಿದೆ ಎನ್ನುವ ಗಂಭೀರ ಆರೋಪವನ್ನು ಜೋಶಿ ಅವರು ಮಾಡಿದ್ದಾರೆ.

ನಾನು ವಿಜಯಪುರಕ್ಕೆ ಹೋಗಿದ್ದೆ. ಆದರೆ, ಹೋಗುವುದಕ್ಕೆ ಮುಂಚೆಯೇ ಅಲ್ಲಿನ ಸ್ಥಳೀಯ (ಬಸನಗೌಡ ಪಾಟೀಲ ಯತ್ನಾಳ) ಶಾಸಕರು ಹೋರಾಟ ಆರಂಭ ಮಾಡಿದ್ದರು. ಅಲ್ಲಿ ಮೊದಲು ನೋಟಿಸ್ ಹಿಂಪಡೆಯೋದಾಗಿ ಹೇಳಿದ್ದರು. ಇದಕ್ಕೆ ಮೊದಲು ಆರ್‌ಟಿಸಿಯಲ್ಲಿ ಎಂಟ್ರಿಯಾಗಿರುವುದು ವಿಥ್ ಡ್ರಾ ಮಾಡಬೇಕು. ಅದನ್ನು ರೈತರು ಪಹಣಿ ಚೆಕ್ ಮಾಡ್ತಾರೆ. ಆದರೆ, ರೈತರು ಚೆಕ್‌ ಮಾಡ್ತಾರೆ ಅಂತ ಸರ್ಕಾರದಿಂದಲೇ ಭೂಮಿ ಸಾಫ್ಟವೇರ್ ಸರ್ವರ್ ಡೌನ್ ಮಾಡಿದ್ದಾರೆ.

Union Minister said that the government has downed the server as people can see

ನಾವೇ ಚೆಕ್ ಮಾಡಿದ್ದೇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಜನರಿಗೆ ಮಾಹಿತಿ ಸಿಗಬಾರದು ಎನ್ನುವ ಕಾರಣಕ್ಕೆ ಸರ್ವರ್ ಡೌನ್ ಮಾಡಲಾಗಿದೆ. ರೈತರಿಗೆ ಪಹಣಿ ಮಾಹಿತಿ ಸಿಗುಬಾರದು ಎಂದ ಸರ್ವರ್ ಡೌನ್ ಮಾಡಿದ್ದಾರೆ. ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ನಾವು ಈ ಸಂಬಂಧ ಅಧಿಕಾರಿಗಳ ಜೊತೆ ಮಾತಾಡಿದ್ದೇವೆ. ಕಾಲಂ 11ರಲ್ಲಿ ಎಂಟ್ರಿ ಮಾಡಬಹುದು ಎಂದು ಹೇಳಿದ್ದರು. ಆದರೆ, ಇದನ್ನು ಯಾರು ಹೇಳಿದ್ದಾರೆ ಎಂದು ಕೇಳಿದರೆ ತಪ್ಪಾಗಿದೆ ಎನ್ನುತ್ತಾರೆ.

ಮುಂದುವರಿದು ಪ್ರಶ್ನೆ ಮಾಡಿದರೆ, ಮುಖ್ಯಮಂತ್ರಿ ಒತ್ತಡ ಹಾಕಿದ್ರು, ಮುಖ್ಯಮಂತ್ರಿ ಹೇಳಿದ್ದಾರೆ ಮಾಡಿ ಎಂದಿದ್ದಾರೆ. ಇನ್ನು ನಾನು ಕೇಳಿದ ಯಾವುದೇ ಪ್ರಶ್ನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿಲ್ಲ. ಸಚಿವ ಜಮೀರ್ ಅಹಮ್ಮದ್ ಅವರು ಮುಖ್ಯಮಂತ್ರಿ ಹೆಸರು ಹೇಳಿದ್ದಾರೆ.

ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಕೇಳಿದ್ದೇನೆ. ಇದುವರೆಗೂ ಉತ್ತರ ಕೊಟ್ಟಿಲ್ಲ ಕರ್ನಾಟಕದಲ್ಲಿ ವಕ್ಫ ಅದಾಲತ್ ಬಂದ್ ಆಗಬೇಕು. ಈಗಾಗಲೇ ಯಾವುದು ಎಂಟ್ರಿಯಾಗಿದೆ ಅದನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಯಾವ ರೀತಿ ತುಷ್ಟೀಕರಣ ನಡೆಯುತ್ತಿದೆ ಎಂದರೆ, ವಿಜಯಪುರ ಎಸ್‌ಪಿ ಆಫೀಸ್‌ ವಕ್ಫ್‌ ಸಿವಿಲ್ ಆಸ್ಪತ್ರೆ ವಕ್ಫ ಅಂತೆ. ಇವಾಗೇನೋ ತಗೆಸಿದಾರೆ ಅಂತಿದಾರೆ ಮುಂದೇನು. ಯರಗಲ್‌ನ ಮಠದ 13 ಎಕರೆ ಜಮೀನು ವಕ್ಫ ಮಾಡಿದ್ದಾರೆ ಎಂದಿದ್ದಾರೆ.

ಗಲಾಟೆ ನಡೆದ ಬಳಿಕ ತಿಪ್ಪೆ ಸಾರಿಸೋ ಕೆಲಸ ನಡೆದಿದೆ. ನಾನು ಹಿಂದೂ ಮುಸ್ಲಿಂ ಮಾತಾಡ್ತಿದ್ದೀನಿ ಅಂತಾರೆ. ಹಿಂದೂ ಮುಸ್ಲಿಂ ಮಾಡಿದ್ದು, ನೀವಾ ನಾವಾ. ನೀವು ಕಳ್ಳರು,ಖದೀಮರು ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿದಾರೆ ಅಂತಾರೆ. ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿರೋದು ಗಮನಕ್ಕೆ ಬಂದಿಲ್ಲ ಎಂದರು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನಲ್ಲಿ 652 ಎಕರೆ ವಕ್ಫ್‌ಗೆ ಸೇರಿದೆ ಎಂದಾಗಿದೆ. ಬಿಜೆಪಿ ಸರ್ಕಾರದಲ್ಲಿ ನೋಟಿಸ್ ಕೊಟ್ಟಿರಬೇಕು. ಅಕಸ್ಮಾತ್ ನಮ್ಮ ಗಮನಕ್ಕೆ ಅವಾಗ ಬಂದಿದ್ದರೆ, ನಾನು ಸೂಪರ್ ಸೀಡ್ ಮಾಡಿ ಒದ್ದು ಒಳಗೆ ಹಾಕತಿದ್ವಿ. ಆದರೆ ಇವಾಗ ಸೂಪರ್ ಮಾರ್ಕೆಟ್ ಮಾಡಿದ್ದಾರೆ. ಇದು ಆತಂಕಕಾರಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+