ತಲೆದಂಡ ತಪ್ಪಿಸಿಕೊಂಡ್ರೂ ಸಿದ್ದೇಶ್ವರರಿಂದ ರಾಜೀನಾಮೆ ನಿರ್ಧಾರ

Posted By:
Subscribe to Oneindia Kannada

ದಾವಣಗೆರೆ, ಜುಲೈ 06: ಮೋದಿ ಅವರ ಸಂಪುಟಕ್ಕೆ ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಅವರ ಸೇರ್ಪಡೆ ಸಿಹಿ ಸುದ್ದಿ ಜತೆಗೆ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಅವರ ತಲೆದಂಡದ ಕಹಿ ಸುದ್ದಿಯೂ ಬಂದಿತ್ತು.

ಆದರೆ, ಮೋದಿ ಸಂಪುಟ ವಿಸ್ತಣೆ, ಪುನರ್ ರಚನೆ, ಖಾತೆ ಹಂಚಿಕೆ ಪ್ರಕ್ರಿಯೆ ಮುಗಿದರೂ ಸಿದ್ದೇಶ್ವರ ಅವರ ಸ್ಥಾನಮಾನದ ಸ್ಥಿತಿ ಗತಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಆದರೆ, ಈಗ ಸ್ವತಃ ಸಿದ್ದೇಶ್ವರ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. [ಜಿಎಂ ಸಿದ್ದೇಶ್ ಪರಿಚಯ]

ಮೋದಿ ಅವರ ಸಂಪುಟದಿಂದ ಕೈಬಿಡುವವರ ಪಟ್ಟಿಯಲ್ಲಿ ಮೊದಲಿಗೆ ಸಿದ್ದೇಶ್ವರ ಅವರ ಹೆಸರಿರಲಿಲ್ಲ. ಡಿವಿ ಸದಾನಂದ ಗೌಡರ ಹೆಸರಿತ್ತು ಎನ್ನಲಾಗಿದೆ. ಆದರೆ, ಡಿವಿಎಸ್ ಅವರ ಖಾತೆ ಬದಲಾವಣೆ ಮಾಡಲಾಯಿತು. ರೈಲ್ವೆ, ಕಾನೂನು ನಂತರ ಈಗ ಸಾಂಖಿಕ ಮತ್ತು ಯೋಜನಾ ಅನುಷ್ಠಾನ ಖಾತೆ ನೀಡಲಾಗಿದೆ. [ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?]

ಪಕ್ಷ ಸಂಘಟನೆಯ ಹೊಣೆ: ದಾವಣಗೆರೆ ಲೋಕಸಭಾ ಸದಸ್ಯರೂ ಆಗಿರುವ ಸಿದ್ದೇಶ್ವರ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸುವ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಜೂನ್ 30ರಂದು ಎಲ್ಲಾ ಸಚಿವರುಗಳ ಮಾರ್ಕ್ಸ್ ಕಾರ್ಡ್ ನೋಡಿ ಒಬ್ಬೊಬ್ಬರನ್ನೇ ಕರೆಸಿಕೊಂಡು ಚರ್ಚೆ ನಡೆಸಲಾಗಿದೆ. [ಮೋದಿ ಸಂಪುಟ ಸೇರಿದ 19 ಸಚಿವರ ಸಂಕ್ಷಿಪ್ತ ಪರಿಚಯ]

Union Miniter GM Siddeshwar likely to resign soon

ಈಗ ಮಧ್ಯ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಖಾತೆ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ ಅವರಿಗೆ ಶಾ ಅವರು ಸೂಚಿಸಿದ್ದಾರೆ. [ಖಾತೆ ಹಂಚಿಕೆಯಲ್ಲಿ ಭಾರೀ ಬದಲಾವಣೆ, ಸ್ಮೃತಿಗೆ ಶಾಕ್!]

ಪ್ರಧಾನಿ ನರೇಂದ್ರ ಮೋದಿ ಅಥವಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರೇನೂ ರಾಜೀನಾಮೆ ನೀಡುವಂತೆ ಯಾವುದೇ ಸೂಚನೆ ಕೊಟ್ಟಿಲ್ಲ. ಆದರೆ, ರಾಜ್ಯ ಮತ್ತು ಜಿಲ್ಲಾ ನಾಯಕರ ಜೊತೆ ಚರ್ಚಿಸಿ ವಾರದೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ
ಎಂದು ಸಿದ್ದೇಶ್ವರ ಅವರು ಸ್ಪಷ್ಟಪಡಿಸಿದರು.

Union Minister GM Siddeshwara likely to resign soon

ದೂರು ನೀಡಿದ್ದು ಬೇಸರ ತರಿಸಿದೆ: 'ನನ್ನ ವಿರುದ್ಧ ಕೆಲವರು ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ದೆಹಲಿಗೆ ಹೋಗಿ ದೂರುಗಳನ್ನು ನೀಡಿದರು. ಇದು ಮನಸ್ಸಿಗೆ ವ್ಯಥೆಯನ್ನುಂಟು ಮಾಡಿದೆ. ಜೊತೆಗೆ ಸಂಪುಟ ಪುನರ್‌ರಚನೆ ವೇಳೆ ನನಗೆ ಕೊಕ್‌ ನೀಡಲಾಗುತ್ತಿದೆ. ಸಂಪುಟದಿಂದ ಕೈಬಿಡಲಾಗುತ್ತಿದೆ ಎಂದೆಲ್ಲ ಮಾಧ್ಯಮಗಳೂ ಬರೆದಿದ್ದು ನೋವುಂಟು ಮಾಡಿತು. ಈ ರೀತಿಯ ಭವಿಷ್ಯ ನುಡಿಯಲು ಅವರಿಗೇನು ಅಧಿಕಾರ' ಎಂದು ನೊಂದು ನುಡಿದರು.

'ಬಿಜೆಪಿ- ಕೆಜೆಪಿ ಜೊತೆಗಿದ್ದ ಸಂದರ್ಭದಲ್ಲೇ ನಾವು ಕಳೆದ ಲೋಕ ಸಭಾ ಚುನಾವಣೆ, ಇತ್ತೀಚಿನ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆವು ಎಂಬುದನ್ನು ಮರೆಯಬಾರದು' ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Union Minister of State for Major Industries and Public Enterprises G M Siddeshwar, MP from Davangere, Karnataka said that he would resign from his post within a week .
Please Wait while comments are loading...