Government Employee: ಏಕೀಕೃತ ಪಿಂಚಣಿ ಯೋಜನೆ ವಿರುದ್ಧ ಹೋರಾಟಕ್ಕೆ ಕರೆ

ಬೆಂಗಳೂರು, ಆಗಸ್ಟ್ 27: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ಜಾರಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ಸರ್ಕಾರ ಏಪ್ರಿಲ್ 1, 2025ರಿಂದ ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದೆ. ಆದರೆ ಸರ್ಕಾರಿ ನೌಕರರು ಈ ಯೋಜನೆ ವಿರುದ್ಧ ಪರ ಮತ್ತು ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೌಕರರು ವಿವಿಧ ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ಘೋಷಣೆ ಮಾಡಿದೆ. ಇದು ಸರ್ಕಾರಿ ನೌಕರರ ಸಂಘಗಳ ಆಕ್ರೋಶಕ್ಕೆ ಕಾರಣವಾಗಿದೆ.

Unified Pension Scheme Government Employees Called For Protest

ಎನ್‌ಪಿಎಸ್, ಒಪಿಎಸ್ ಮತ್ತು ಯುಪಿಎಸ್ ನಡುವೆ ಯಾವ-ಯಾವ ವ್ಯತ್ಯಾಸಗಳಿವೆ ಎಂದು ಸರ್ಕಾರಿ ನೌಕರರಿಗೆ ಮಾಹಿತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರಿ ನೌರರು ಎನ್‌ಪಿಎಸ್‌ನಲ್ಲಿಯೇ ಉಳಿಯಬಹುದು ಅಥವ ಯುಪಿಎಸ್ ಆಯ್ಕೆ ಮಾಡಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಆದರೆ ಸರ್ಕಾರಿ ನೌಕರರು ಯುಪಿಎಸ್ ವಿರುದ್ಧ ದೇಶಾದ್ಯಂತ ಹೋರಾಟ ಮಾಡಲು ಕರೆ ನೀಡಿದ್ದಾರೆ.

ಸೆಪ್ಟೆಂಬರ್ 26ರಂದು ಪ್ರತಿಭಟನೆ: ಅಖಿಲ ಭಾರತ ಸರ್ಕಾರಿ ನೌಕರರ ಒಕ್ಕೂಟ ಸೆಪ್ಟೆಂಬರ್ 26ರಂದು ದೇಶಾದ್ಯಂತ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ವಿರುದ್ಧ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಯುಪಿಎಸ್ ಈಗಾಗಲೇ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯ ಮಾರ್ಪಡಿಸಿದ ರೂಪವಾಗಿದೆ ಎಂದು ಒಕ್ಕೂಟ ಹೇಳಿದೆ.

ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಎಚ್. ಎಸ್. ಜೈಕುಮಾರ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶೋಭಾ ಲೋಕನಾಗಣ್ಣ ಯುಪಿಎಸ್ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 26ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಬೆಂಬಲಿತ ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್) ಸಹ ಯುಪಿಎಸ್‌ನಲ್ಲಿ ಕೆಲವೊಂದು ಕೊರತೆಗಳಿವೆ. ಕಾರ್ಮಿಕರು ಹೊಸ ಪಿಂಚಣಿ ಯೋಜನೆ ಮಾತ್ರವಲ್ಲ, ಯುಪಿಎಸ್ ಸಹ ವಿರೋಧಿಸುತ್ತಿದ್ದಾರೆ ಎಂದು ಹೇಳಿದೆ.

ಎಐಟಿಯುಸಿ ಯುಪಿಎಸ್‌ನಲ್ಲಿಯೂ ನೌಕರರ ಶೇ 10ರ ಸಂಬಳವನ್ನು ಎನ್‌ಪಿಎಸ್ ರೀತಿಯೇ ಕಡಿತ ಮಾಡಲಾಗುತ್ತದೆ. ಹೀಗಾಗಿ ಯಾವುದೇ ವೇತನ ಕಡಿತವಿಲ್ಲದ ಹಳೆ ಪಿಂಚಣಿ ಯೋಜನೆಯೇ ಉತ್ತಮವಾಗಿದೆ ಎಂದು ಯುಪಿಎಸ್‌ ಜಾರಿ ವಿರುದ್ಧ ಹೇಳಿಕೆ ಕೊಟ್ಟಿದೆ.

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್‌) ಜಾರಿಗೆ ಅನುಮೋದನೆ ಕೊಡಲಾಗಿದೆ. ಯುಪಿಎಸ್‌ನ ಪ್ರಮುಖ ಅಂಶಗಳನ್ನು ಸಹ ಸರ್ಕಾರ ಬಿಡುಗಡೆ ಮಾಡಿದೆ. ಈ ಯೋಜನೆ ನೌಕರರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ ಎಂದು ತಿಳಿಸಿದೆ.

* 25 ವರ್ಷಗಳ ಕನಿಷ್ಠ ಅರ್ಹತಾ ಸೇವೆಗಾಗಿ ನಿವೃತ್ತಿಗೆ ಮುಂಚಿತವಾಗಿ ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇ 50. ಈ ವೇತನವು ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಅನುಪಾತದಲ್ಲಿರಬೇಕು.

* ಅವಳ/ ಅವನ ಮರಣದ ಮೊದಲು ನೌಕರನ ಪಿಂಚಣಿಯ ಶೇ 60.
* ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ಮೇಲೆ ತಿಂಗಳಿಗೆ 10,000.
* ಸೇವಾ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಕೈಗಾರಿಕಾ ಕಾರ್ಮಿಕರಿಗೆ (AICPI-IW) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಆತ್ಮೀಯ ಪರಿಹಾರ
* ಗ್ರ್ಯಾಚ್ಯುಟಿ ಜೊತೆಗೆ ಸೂಪರ್‌ಅನ್ಯುಯೇಶನ್‌ನಲ್ಲಿ ದೊಡ್ಡ ಮೊತ್ತದ ಪಾವತಿ. ಪ್ರತಿ ಪೂರ್ಣಗೊಂಡ ಆರು ತಿಂಗಳ ಸೇವೆಗೆ ನಿವೃತ್ತಿಯ ದಿನಾಂಕದಂದು ಮಾಸಿಕ ವೇತನದ 1/10 ನೇ (ಪಾವತಿ + ಡಿಎ). ಈ ಪಾವತಿಯು ಖಚಿತವಾದ ಪಿಂಚಣಿ ಪ್ರಮಾಣವನ್ನು ಕಡಿಮೆ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+