Breaking; ಕಾಂಗ್ರೆಸ್‌ ಟಿಕೆಟ್‌ಗೆ ಉಮಾಪತಿ ಗೌಡ ಅರ್ಜಿ, ಕ್ಷೇತ್ರ?

ಬೆಂಗಳೂರು, ನವೆಂಬರ್ 14; ಕರ್ನಾಟಕ ಕಾಂಗ್ರೆಸ್‌ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಕರೆ ನೀಡಿತ್ತು. ಕನ್ನಡ ಚಿತ್ರ ನಿರ್ಮಾಪಕ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಶ್ರೀನಿವಾಸ ಗೌಡ ಅರ್ಜಿ ಸಲ್ಲಿಸಿದರು.

ಮುಂದಿನ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿರುವ ಉಮಾಪತಿ ಶ್ರೀನಿವಾಸ ಗೌಡ 2 ಲಕ್ಷ ರೂ. ಡಿಡಿ ಸಲ್ಲಿಕೆ ಮಾಡಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಲು ನವೆಂಬರ್ 15 ಕೊನೆಯ ದಿನವಾಗಿದೆ.

ಉಮಾಪತಿ ಶ್ರೀನಿವಾಸ ಗೌಡ ಎಐಸಿಸಿಯ ಕಾರ್ಯದರ್ಶಿ ಅಭಿಷೇಕ್ ದತ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದರು. ಈ ಮೂಲಕ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Umapathy Srinivasa Gowda Seeks Congress Ticket From Bommanahalli

ಬೊಮ್ಮನಹಳ್ಳಿ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸತೀಶ್ ರೆಡ್ಡಿ. ಮುಂದಿನ ಚುನಾವಣೆಯಲ್ಲಿ ಸತೀಶ್‌ ರೆಡ್ಡಿ ವಿರುದ್ಧ ಸ್ಪರ್ಧಿಸಲು ಉಮಾಪತಿ ಶ್ರೀನಿವಾಸ ಗೌಡ ಟಿಕೆಟ್​ ಬಯಸಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಸಂದರ್ಭದಲ್ಲಿಯೇ ರಾಮನಗರದಲ್ಲಿ ಪ್ರಚಾರ ಮಾಡುವಾಗ ಉಮಾಪತಿ ಶ್ರೀನಿವಾಸ ಗೌಡ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದರು. ಕೆಲವು ದಿನಗಳ ಹಿಂದೆ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ದರು. ಇದರಿಂದಾಗಿ ಬಿಜೆಪಿ ಸೇರಲಿದ್ದಾರೆಯೇ? ಎಂಬ ಪ್ರಶ್ನೆ ಎದ್ದಿತ್ತು.

ರಾಮನಗರದಲ್ಲಿ ಮಾತನಾಡಿದ್ದ ಉಮಾಪತಿ ಶ್ರೀನಿವಾಸ ಗೌಡ, "ಚುನಾವಣೆ ಅಂದರೆ ಕಲ್ಲು ಹೊಡೆಯುತ್ತಾರೆ, ಗುಂಡು ಹಾರಿಸುತ್ತಾರೆ. ಆದರೆ ಅದನ್ನೆಲ್ಲ ಭೇದಿಸುವ ಶಕ್ತಿ ನಮಗೆ ಇರಬೇಕು. ಮುಂದೆ ರಾಜಕೀಯ ಕ್ಷೇತ್ರಕ್ಕೂ ಹೋಗುತ್ತೇನೆ. ನನಗೆ ನಾನೇ ಬೇಲಿ ಹಾಕಿಕೊಳ್ಳುವುದಿಲ್ಲ‌" ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+