ನಟ ಫೈಜಲ್‌ ನನಗಿಷ್ಟ : ಉಡುಪಿಯ ಇಶಿಕಾ ಪತ್ರ

ಉಡುಪಿ, ನ.21 : ಕು೦ಜಿಬೆಟ್ಟುವಿನ ಶಾರದಾ ಇ೦ಗ್ಲೀಷ್ ಮೀಡಿಯ೦ ವಸತಿ ನಿಲಯ ಶಾಲೆಯಿ೦ದ ನಾಪತ್ತೆಯಾಗಿರುವ 8ನೇ ತರಗತಿ ವಿದ್ಯಾರ್ಥಿನಿ ಐದು ದಿನಗಳ ನಂತರವೂ ಪತ್ತೆಯಾಗಿಲ್ಲ. "ನನಗೆ ಹೆತ್ತವರ ಪ್ರೀತಿ ಸರಿಯಾಗಿ ಸಿಗುತ್ತಿಲ್ಲ ಎಂದು ಆಕೆ ಬರೆದಿಟ್ಟ ಪತ್ರ ಪೊಲೀಸರಿಗೆ ಸಿಕ್ಕಿದೆ, ನನ್ನ ನೆಚ್ಚಿನ ನಟನನ್ನು ನೋಡಲಾಗದಿದ್ದರೆ ಸಾಯುತ್ತೇನೆ" ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 15ರಂದು ಇಶಿಕಾ ಎಸ್.ಶೆಟ್ಟಿ ಶಾಲೆಯ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದಾಳೆ. ಶಾಲೆಯಲ್ಲಿ ಅಂದು ಕ್ರೀಡಾಕೂಟವಿತ್ತು, ಅದರಲ್ಲಿ ಪಾಲ್ಗೊಂಡಿದ್ದ ಆಕೆ ಸಂಜೆಯ ನಂತರ ತಲೆ ನೋಯುತ್ತಿದೆ ಎಂದು ಹಾಸ್ಟೆಲ್‌ಗೆ ಬೇಗ ತೆರಳಿದ್ದಳು. ಅಲ್ಲಿಂದ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Udupi

ಶಾಲೆಯ ಆವರಣ ಗೋಡೆಯ ಬಳಿ ಆಕೆ ಅಂದು ಧರಿಸಿದ್ದ ಬಟ್ಟೆಗಳು ಲಭಿಸಿದ್ದು, ಗೋಡೆ ಹಾರಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಯಾರಿಗೋ ಕರೆ ಮಾಡಿರುವ ಆಕೆ, ವಾಹನದಲ್ಲಿ ಅವರರೊಂದಿಗೆ ತೆರಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. [8ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ]

ನಟ ಫೈಜಲ್‌ ಖಾನ್‌ ನನಗಿಷ್ಟ : ಇಶಿಕಾ ಶೆಟ್ಟಿ ತನ್ನ ರೂಮ್‌ನಲ್ಲಿ ಬರೆದಿಟ್ಟಿರುವ ಪತ್ರದಲ್ಲಿ "ನನಗೆ ಹೆತ್ತವರ ಪ್ರೀತಿ ಸರಿಯಾಗಿ ಸಿಗುತ್ತಿಲ್ಲ. ನಾನು ಏಕಾಂಗಿಯಾಗಿರುವೆ. ಮಹಾರಾಣಾ ಪ್ರತಾಪ್‌ ಎನ್ನುವ ಹಿಂದಿ ಧಾರಾವಾಹಿಯ ನಟ ಫೈಜಲ್‌ ಖಾನ್‌ನನ್ನು ತುಂಬಾ ಮೆಚ್ಚಿಕೊಂಡಿದ್ದೇನೆ" ಎಂದು ಬರೆದಿದ್ದಾಳೆ.

maharana pratap

'ನನಗೆ ಡಾನ್ಸರ್‌ ಆಗುವ ಆಸೆ ಇದೆ. ಫೈಜಲ್ ಖಾನ್‌ ಜೊತೆ ಡಾನ್ಸ್‌ ಮಾಡುವ ಆಸೆ ಇದೆ. ನಾನು ಅವನನ್ನು ನೋಡಲು ಹೋಗುತ್ತಿದ್ದೇನೆ. ಅವನು ಸಿಗದಿದ್ದರೆ ನಾನು ಸಾಯುತ್ತೇನೆ, ನಾನು ಸತ್ತರೆ ಫೈಜಲ್‌ಗೆ ವಿಷಯ ತಿಳಿಸಿ ಎಂದು ಇಶಿಕಾ ಬರೆದಿಟ್ಟಿದ್ದಾಳೆ. ಉಡುಪಿ ನಗರ ಪೊಲೀಸರು ಇಶಿಕಾ ರೂಂನಲ್ಲಿ ಸಿಕ್ಕ ಪತ್ರ, ಆಕೆಯ ಡೈರಿ, ಮೊಬೈಲ್ ಪೋನ್‌ಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+