ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ ಕೆ ರವಿ ಸಾವಿನ ಸುದ್ದಿ ಕೇಳಿ ಸಿಹಿ ಹಂಚಿದ ಶಾಸಕರಾರು?

|
Google Oneindia Kannada News

ಐಎಎಸ್ ಅಧಿಕಾರಿ ಡಿ ಕೆ ರವಿ ಅಸಹಜ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ಕೋಲಾರದ ಇಬ್ಬರು ಶಾಸಕರು ಸಿಹಿ ಹಂಚಿಕೊಂಡು ಸಂಭ್ರಮಿಸಿದರು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಟೈಮ್ಸ್ ವಾಹಿನಿಯಲ್ಲಿನ News Hour ಕಾರ್ಯಕ್ರಮದ ಪ್ಯಾನಲ್ ಚರ್ಚೆಯಲ್ಲಿ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯ ವಕ್ತಾರ ಸಂಬೀತ್ ಪಾತ್ರ, ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ, ಅಧಿಕಾರಿ ಅಶೋಕ್ ಖೆಮ್ಕಾ, ಆರ್ ಕೆ ಮಿಶ್ರಾ, ಗ್ರೀಷ್ಮ ನಾಯಕ್ ಮುಂತಾದವರು ಭಾಗವಹಿಸಿದ್ದರು. (ಡಿಕೆ ರವಿಯ ಖಾಸಗಿ ವಿಷಯಗಳು ಬಹಿರಂಗ)

ಬಿಜೆಪಿ ವಕ್ತಾರ ಸಂಬೀತ್ ಕಾರ್ಯಕ್ರಮದಲ್ಲಿ ದಿನೇಶ್ ಅವರ ಮೇಲೆ ಪ್ರಶ್ನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಬಿಜೆಪಿ ಮುಖಂಡರ ಪ್ರಶ್ನೆಗೆ ಟೈಮ್ಸ್ ವಾಹಿನಿಯ ಅರ್ನಬ್ ಗೋಸ್ವಾಮಿ ಕೂಡಾ ಧ್ವನಿಗೂಡಿಸಿದಾಗ ದಿನೇಶ್ ಗುಂಡೂರಾವ್ ಸ್ವಲ್ಪ ಹೊತ್ತು ನಿರುತ್ತರಾಗಬೇಕಾಯಿತು.

ಐಎಎಸ್ ಅಧಿಕಾರಿಯು ಸಾವನ್ನಪ್ಪಿದಾಗ ಕಾಂಗ್ರೆಸ್ಸಿನ ಶಾಸಕರೊಬ್ಬರು ಮತ್ತು ಕಾಂಗ್ರೆಸ್ ಬೆಂಬಲಿಸುವ ಪಕ್ಷೇತರ ಶಾಸಕರೊಬ್ಬರು ಸಿಹಿಹಂಚಿ ಸಂಭ್ರಮಿಸಿದರು ಎಂದು ಬಿಜೆಪಿ ಮುಖಂಡ ವಾಹಿನಿಯಲ್ಲಿನ ಚರ್ಚೆಯಲ್ಲಿ ಕಾಂಗ್ರೆಸ್ ಮೇಲೆ ಗುರುತರ ಆರೋಪ ಹೊರಿಸಿದ್ದಾರೆ. (ಡಿಕೆ ರವಿ ಸಾವಿನ ತನಿಖೆ ಸಿಬಿಐಗೆ)

ಯಾರು ಆ ಇಬ್ಬರು ಶಾಸಕರು? ಮತ್ತು ಬಿಜೆಪಿ ವಕ್ತಾರ ದಿನೇಶ್ ಗುಂಡೂರಾವ್ ಅವರಿಗೆ ಕೇಳಿದ ಪ್ರಶ್ನೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ನಿಮ್ಮಿಂದ ಪಾಠ ಕಲಿಯಬೇಕಾಗಿಲ್ಲ

ನಿಮ್ಮಿಂದ ಪಾಠ ಕಲಿಯಬೇಕಾಗಿಲ್ಲ

ಅರ್ನಬ್ ಮತ್ತು ಇತರರು ಕೇಳಿದ ಪ್ರಶ್ನೆಗೆ ದಿನೇಶ್ ಗುಂಡೂರಾವ್ ಉತ್ತರಿಸುತ್ತಿದ್ದಾಗ ಮದ್ಯೆ ಮದ್ಯೆ ಮರುಪ್ರಶ್ನೆ ಕೇಳಿ ಬರುತ್ತಿತ್ತು, ಹಾಗಾಗಿ ದಿನೇಶ್ ಗುಂಡೂರಾವ್ ಗೆ ಉತ್ತರ ಮುಗಿಸಲು ಅವಕಾಶವೇ ಸಿಗುತ್ತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ದಿನೇಶ್, ಅರ್ನಬ್ ನೀವು ದೇಶಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದ್ದರು. ಆಗ ಪತ್ರಿಕೋದ್ಯಮದ ವಿಚಾರದಲ್ಲಿ ನನಗೆ ಪಾಠ ಹೇಳಲು ಬರಬೇಡಿ ಎಂದು ಅರ್ನಬ್, ದಿನೇಶ್ ಗೆ ತಿರುಗೇಟು ನೀಡಿದರು.

ಇಬ್ಬರು ಶಾಸಕರಾರು?

ಇಬ್ಬರು ಶಾಸಕರಾರು?

ಬಂಗಾರಪೇಟೆ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ಮತ್ತು ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ಡಿ ಕೆ ರವಿ ಸಾವಿನ ಸುದ್ದಿ ಹೊರಬಿದ್ದಾಗ ಸಿಹಿಹಂಚಿ ಸಂಭ್ರಮಿಸಿದ್ದಾರೆ ಎನ್ನುವುದು ಬಿಜೆಪಿ ವಕ್ತಾರರ ಆರೋಪ. ವಾಹಿನಿಯ ಈ news hour ಕಾರ್ಯಕ್ರಮದಲ್ಲಿ ಈ ಸಂಬಂಧ ಅಸ್ಪಷ್ಟ ವಿಡಿಯೋ ತುಣುಕು ಪ್ರಸಾರವಾಗುತ್ತಿತ್ತು.

ಆತ್ಮಸಾಕ್ಷಿಯಾಗಿ ವಿರೋಧವಾಗಿ ನಡೆದುಕೊಳ್ಳಬೇಡಿ

ಆತ್ಮಸಾಕ್ಷಿಯಾಗಿ ವಿರೋಧವಾಗಿ ನಡೆದುಕೊಳ್ಳಬೇಡಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಮಾತನಾಡುತ್ತಾ, ಈ ರೀತಿಯ ಘಟನೆ ನಡೆದಿಲ್ಲ, ಇದು ಸುಳ್ಳೆಂದು ಹೇಳಿ ನಿಮ್ಮ ಆತ್ಮಸಾಕ್ಷಿಗೆ ವಿರೋಧವಾಗಿ ನಡೆದುಕೊಳ್ಳಬೇಡಿ ಎಂದರು. ಇದಕ್ಕೆ ಯಾಗಿ ವಿರೋಧಿಸುತ್ತೀರಾ ಎಂದು ಬಿಜೆಪಿ ವಕ್ತಾರ ದಿನೇಶ್ ಗುಂಡೂರಾವ್ ಅವರನ್ನು ವಾಹಿನಿಯ ಚರ್ಚೆಯ ವೇಳೆ ಪ್ರಶ್ನಿಸಿದ್ದಾರೆ. ದಿನೇಶ್ ಅವರಿಗೆ ಈ ಪ್ರಶ್ನೆಗೆ ಉತ್ತರಿಸಲೂ ಸರಿಯಾದ ಅವಕಾಶ ಸಿಗಲಿಲ್ಲ. (In pic: Sambit Patra)

ಜನರಿಗೆ ನಿಮ್ಮ ಮೇಲೆ ನಂಬಿಕೆಯಿಲ್ಲ

ಜನರಿಗೆ ನಿಮ್ಮ ಮೇಲೆ ನಂಬಿಕೆಯಿಲ್ಲ

ಕಾಂಗ್ರೆಸ್ ಸರಕಾರ ಡಿ ಕೆ ರವಿ ಕೇಸಿನಲ್ಲಿ ನಡೆದುಕೊಂಡ ರೀತಿಯಿಂದಾಗಿ ಜನರಿಗೆ ನಿಮ್ಮ ಪಕ್ಷದ ಮೇಲೆ ನಿಮಗೆ ನಂಬಿಕೆಯಿಲ್ಲ ಎಂದು ಅರ್ನಬ್ ಹೇಳಿದಾಗ. ನಾವು ಕೇಸಿನ ವಿಚಾರದಲ್ಲಿ ಯಾವುದನ್ನೂ ಮುಚ್ಚಿಟ್ಟಿಲ್ಲ, ಸಾಕ್ಷ್ಯಾಧಾರ ನಾಶ ಪಡಿಸುವ ಸುದ್ದಿಯೆಲ್ಲಾ ಕಟ್ಟುಕಥೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರು ಕಮೀಷನರ್

ಬೆಂಗಳೂರು ಕಮೀಷನರ್

ಡಿ ಕೆ ರವಿ ಸಾವು ವರದಿಯಾದ ಆರು ಗಂಟೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ರೆಡ್ಡಿಯವರು ಇದೊಂದು ಸುಸೈಡ್ ಎಂದು ಹೇಳಿಕೆ ನೀಡುತ್ತಾರೆ. ಆಟೋಸ್ಪೈ ಮತ್ತು ಪೋಸ್ಟ್ ಮಾರ್ಟಂ ವರದಿ ಬರುವ ಮುನ್ನ ನಿಮ್ಮ ಕಮಿಷನರ್ ಅವರಿಗೆ ಇದು ಸುಸೈಡ್ ಎಂದು ಹೇಗೆ ಗೊತ್ತಾಯಿತು ಎಂದು ಬಿಜೆಪಿ ವಕ್ತಾರರು ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಹೋಗಿದ್ದೇಕೆ?

ಸಿದ್ದರಾಮಯ್ಯ ಹೋಗಿದ್ದೇಕೆ?

ಡಿ ಕೆ ರವಿ ಅವರ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಯು ಟಿ ಖಾದರ್ ಹೋಗಿದ್ದೇಕೆ. ಸರಕಾರೀ ವೈದ್ಯರಿಗೆ ಒತ್ತಡ ಹೇರಲಾ ಎಂದು ಬಿಜೆಪಿ ವಕ್ತಾರರು ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನಿಸಿದ್ದಾರೆ.

English summary
Two of MLAs of Kolar district, distributed sweets when IAS Officer D K Ravi death news published.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X