ಭ್ರೂಣ ಹತ್ಯೆಯ ಜಾಲ ಪತ್ತೆ ಹಚ್ಚಲು ಸಿಐಡಿಗೆ ವಹಿಸಿದ ಸರ್ಕಾರ; ಇಬ್ಬರು ವೈದ್ಯರು ಅಮಾನತು

ಬೆಂಗಳೂರು, ಡಿಸೆಂಬರ್‌ 01: ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಕೆಲ ಅಧಿಕಾರಿಗಳ ಲೋಪದೋಷ ಕೂಡ ಎದ್ದು ಕಾಣುತ್ತಿದ್ದು, ಮೈಸೂರು ತಾಲೂಕು ವೈದ್ಯಾಧಿಕಾರಿ ರಾಜೇಶ್ವರಿ ಹಾಗೂ ಮೈಸೂರು DHO ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ರವಿ ಅವರನ್ನ ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಸಮಾಜ ಕೂಡ ಬದಲಾಗಬೇಕು. ಭ್ರೂಣ ಹತ್ಯೆ ಒಂದು ಸಮಾಜಿಕ ಪಿಡುಗು. ಭ್ರೂಣ ಹತ್ಯೆಯ ಜಾಲ ಪತ್ತೆ ಹಚ್ಚಲು ಒಂದು ಸೂಕ್ತ ತನಿಖೆ ಅಗತ್ಯ. ಈ ಕುರಿತಂತೆ ಗೃಹ ಸಚಿವರು, ಹಾಗೂ ಸಿಎಂ ಜೊತೆ ಮಾತನಾಡಿದ್ದೇನೆ. ಯಾವ ರೀತಿಯ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

Two Doctors Have Been Suspended After A Loophole Was Found In The Case Of Feticide

ಭ್ರೂಣ ಹತ್ಯೆಯ ಜಾಲವನ್ನ ಬುಡಸಮೇತ ಕಿತ್ತುಹಾಕಬೇಕಿದೆ. ಮಂಡ್ಯದ ಆಲೆಮನೆ ಹಾಗೂ ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಇಂದು ಮಂಡ್ಯದ ಆಲೆಮನೆ ಸ್ಥಳಕ್ಕೆ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಕ್ಯಾನಿಂಗ್ ಸೆಂಟರ್ ಗಳಿಗೂ ಕೂಡ ಭೇಟಿ ನೀಡಿದ್ದು, ಇವುಗಳ ಮೇಲೆ ಹೆಚ್ಚು ನಿಗಾ ಇಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೈಸೂರಿನ ಮಾತಾ ಆಸ್ಪತ್ರೆಯ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಅಲ್ಲಿಯ ಸ್ಥಳೀಯರೊಂದಿಗೆ ಆಸ್ಪತ್ರೆ ನಡೆಸುತ್ತಿದ್ದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿ ಕಂಡುಬಂದಿದ್ದು, ಅಧಿಕಾರಿಗಳು ತಪ್ಪು ಮಾಹಿತಿ ನೀಡಿರವುದನ್ನ ಸಚಿವರು ಗಮನಿಸಿದರು.

ಭ್ರೂಣ ಹತ್ಯೆ ಪ್ರಕರಣ ಕುರಿತು ಚರ್ಚೆ ನಡೆಸಿದರು. ಸಭೆ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭ್ರೂಣ ಹತ್ಯೆ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವ ಕುರಿತು ಚರ್ಚಿಸಿದರು.

Two Doctors Have Been Suspended After A Loophole Was Found In The Case Of Feticide

ಸಭೆ ಬಳಿಕ ಮೈಸೂರು ಹಿಂದಿನ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ. ರವಿ ಹಾಗೂ ಮೈಸೂರು ತಾಲೂಕು ವೈದ್ಯಾಧಿಕಾರಿ ರಾಜೇಶ್ವರಿ ಅವರನ್ನ ತಕ್ಷಣ ಅಮಾನತ್ತು ಮಾಡುವಂತೆ ಆರೋಗ್ಯ ಇಲಾಖೆ ಆಯುಕ್ತರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಳದಲ್ಲೇ ಸೂಚಿಸಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಯಾರೇ ಅಧಿಕಾರಿಗಳ ಕೈವಾಡ ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣವನ್ನ 'ಸಿಐಡಿ' ತನಿಖೆಗೆ ವಹಿಸಲಾಗಿದ್ದು, ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಭ್ರೂಣ ಹತ್ಯೆ ಒಂದು ಸಾಮಾಜಿ ಪಿಡುಗು. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಎಷ್ಟು ಮಟ್ಟ ಹಾಕಲು ಸಾಧ್ಯ ಆರೋಗ್ಯ ಇಲಾಖೆ, ಸರ್ಕಾರ ಸಂಪೂರ್ಣವಾಗಿ ಪ್ರಮಾಣಿಕ ಪ್ರಯತ್ನ ನಡೆಸಲಿದೆ.‌ ಈಗಿರುವ ಕಾನೂನು ಗಳನ್ನ ಇನ್ನಷ್ಟು ಬಿಗಿಗೊಳಿಸುತ್ತೇವೆ. ಆದರೆ ನಮ್ಮ ಸಮಾಜ ಕೂಡ ಬದಲಾಗಬೇಕು. ಹೆಣ್ಣು ಎಂಬ ಒಂದೇ ಕಾರಣಕ್ಕೆ ಭ್ರೂಣ ಹತ್ಯೆ ಮಾಡಿಸುವುದು ಸರಿಯಲ್ಲ. ಭ್ರೂಣ ಹತ್ಯೆ ಮಾಡಿಸುವವರ ವಿರುದ್ಧವು ಕ್ರಮಗಳಾಗಬೇಕು. ನಮ್ಮ ಸಮಾಜ ಕೂಡ ಜಾಗೃತರಾಗಿ ಭ್ರೂಣ ಹತ್ಯೆ ಪಿಡುಗನ್ನ ತೊಡಗಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+