ತಾಲಿಬಾನ್ ಅಲ್ಲ, ಕರ್ನಾಟಕ ಎನ್ನುವುದನ್ನ ಮರೆಯಬಾರದು: ಎಂಬಿಪಿ!
ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮಾತನಾಡಿದ್ದ ಕಾರಣಕ್ಕೆ ಎಂ.ಬಿ. ಪಾಟೀಲ್ ವಿರುದ್ಧ ಬಿಜೆಪಿ ನಾಯಕರು ಹೊಸ ಅಸ್ತ್ರ ಹೂಡಿದ್ದಾರೆ. ಆದರೆ ಅದೇ ಅಸ್ತ್ರವನ್ನ ಈಗ ಎಂ.ಬಿ. ಪಾಟೀಲ್ ಪ್ರತ್ಯಸ್ತ್ರ ಮಾಡಿಕೊಂಡು ವಾಪಸ್ ಕಮಲ ಪಾಳಯದ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ಯತ್ನಾಳ್ ವಿಚಾರದಲ್ಲೂ ಇದೇ ರೀತಿ ಎಂಬಿಪಿ ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಬಗ್ಗೆ ಎಂ.ಬಿ.ಪಾಟೀಲ್ ನೀಡಿದ್ದ ಹೇಳಿಕೆಗೆ ಎಚ್ಚರಿಕೆ ಕೊಡುವ ರೀತಿ BJP ತಿರುಗಿಬಿದ್ದಿದೆ. ಅದ್ರಲ್ಲೂ ಯತ್ನಾಳ್, ಎಂಬಿಪಿ ವಿರುದ್ಧ ತೀಕ್ಷ್ಣವಾಗಿ ಟ್ವೀಟ್ ಮಾಡಿದ್ರು. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆಯೂ ಉಲ್ಲೇಖ ಮಾಡಿದ್ರು. ಈಗ ಅದೇ ಟ್ವೀಟ್‌ಗೆ ತಕ್ಕ ತಿರುಗೇಟು ನೀಡಿರುವ ಎಂ.ಬಿ. ಪಾಟೀಲ್, ಕಳೆದ 4 ವರ್ಷ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಎಂದು ಪ್ರಶ್ನೆ ಹಾಕಿ ಶಾಸಕ ಯತ್ನಾಳ್‌ಗೆ ಸವಾಲು ಎಸೆದಿದ್ದಾರೆ. ಇಬ್ಬರ ಟ್ವೀಟ್ ವಾರ್ ನಡುವೆ ತಾಲಿಬಾನ್ ಕೂಡ ಎಂಟ್ರಿಯಾಗಿದೆ!

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದು ನಡೆಯಲ್ಲ!
ಮೊದಲಿಗೆ ಎಂ.ಬಿ.ಪಾಟೀಲ್ ವಿರುದ್ಧ ಟ್ವೀಟ್ ಮಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, 'ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು @MBPatil ಅವರು ಮರೆಯಬಾರದು. Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ ಮಂತ್ರಿಗಳು intolerant ಆಗಬಾರದು!' ಎಂದಿದ್ದರು. ಈಗ ಅದೇ ಟ್ವೀಟ್‌ಗೆ ಎಂಬಿಪಿ ತಿರುಗೇಟು ನೀಡಿದ್ದಾರೆ.
()ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು @MBPatil ಅವರು ಮರೆಯಬಾರದು.
— Basanagouda R Patil (Yatnal) (@BasanagoudaBJP) June 6, 2023
Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ?
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ…
ತಾಲಿಬಾನ್ ಆಡಳಿತ ಅಲ್ಲ ಕರ್ನಾಟಕ!
ತಮ್ಮ ಹೇಳಿಕೆಗೆ ವಿರುದ್ಧವಾಗಿ ತೀಕ್ಷ್ಣವಾಗಿ ಮಾತನಾಡಿದ್ದ ಯತ್ನಾಳ್ ಅವರಿಗೆ ಎಂಬಿಪಿ ಇದೀಗ ಹೊಸ ಸವಾಲು ಎಸೆದಿದ್ದಾರೆ. 'ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು... ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ... ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು... ಎಂದಿರುವ @BasanagoudaBJP ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಸತತವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮಿಂದ ಪಾಠ ಕಲಿಯಬೇಕಿಲ್ಲ.' ಎಂದಿದ್ದಾರೆ.
()ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು...
— M B Patil (@MBPatil) June 6, 2023
ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು...
ಎಂದಿರುವ @BasanagoudaBJP ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು… https://t.co/pWSm3H9yuK

ಪ್ರಜಾಪ್ರಭುತ್ವದ ಹೇಳಿಕೆಗೆ ಎಂಬಿಪಿ ಉತ್ತರ!
ಹೀಗೆ ತಮ್ಮ ಹೇಳಿಕೆ ಬಗ್ಗೆ ಟ್ವೀಟ್ ಮಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶದ ಎನ್‌ಕೌಂಟರ್, ಯುಪಿ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್ ಎಲ್ಲವನ್ನೂ ಪ್ರಸ್ತಾಪ ಮಾಡಿ ಪ್ರಜಾಪ್ರಭುತ್ವದ ಪಾಠವನ್ನು ಮಾಡಿದ್ದಾರೆ. ಆದ್ರೆ ಬಿಜೆಪಿ ನಾಯಕರು ಈಗ ಇಷ್ಟಕ್ಕೆ ಸುಮ್ಮನಾಗುತ್ತಾರಾ? ಅಥವಾ ಇದೇ ವಿಚಾರ ಹಿಡಿದುಕೊಂಡು ಟ್ವೀಟ್ ಫೈಟ್ ಮುಂದುವರಿಯುತ್ತಾ ಗೊತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ಚರ್ಚೆ ಬಗ್ಗೆ ಪರ ವಿರೋಧದ ಮಾತುಗಳು ಜೋರಾಗಿವೆ.

ಒಟ್ನಲ್ಲಿ ಗ್ಯಾರಂಟಿ ವಿಚಾರದಲ್ಲಿ ಹೊಸ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ನಾಯಕರು ಈಗ ಶತಪ್ರಯತ್ನ ಪಡುತ್ತಿದ್ದಾರೆ. ಇದರ ಜೊತೆಗೆ ಎಂ.ಬಿ. ಪಾಟೀಲ್ ಹೇಳಿಕೆ ಕೂಡ ವರ ಆಗುತ್ತದೆ ಅನ್ನೋ ನಿರೀಕ್ಷೆ ಇತ್ತು. ಆದರೆ ಈಗ ಅದೆಲ್ಲಾ ಉಲ್ಟಾ ಹೊಡೆಯುತ್ತಿರುವ ಲಕ್ಷಣ ಗೋಚರ ಆಗುತ್ತಿದೆ. ಹೀಗಾಗಿಯೇ ಫುಲ್ ಅಲರ್ಟ್ ಆಗಿರುವ ಕಾಂಗ್ರೆಸ್ ನಾಯಕರು ಕೂಡ, ಈ ವಿಚಾರ ಬಂದಾಗ ಸೈಲೆಂಟ್ ಆಗುತ್ತಿದ್ದಾರೆ. ಅಥವಾ ಬಿಜೆಪಿ ನಾಯಕರು ನೀಡುವ ಹೇಳಿಕೆಗೆ ಮಾತ್ರ ರಿಯಾಕ್ಷನ್ ಕೊಡುತ್ತಿದ್ದಾರೆ. ಆ ಮೂಲಕ ಕೈ ಪಡೆ ಜಾಣ ನಡೆಯ ಮೊರೆ ಹೋಗಿದೆ. ಹೀಗಾಗಿ ಕಮಲ ಪಡೆ ಇನ್ಯಾಯ ತಂತ್ರ ಹುಡುಕೊತ್ತೋ ಕಾದು ನೋಡಬೇಕು.












Click it and Unblock the Notifications