Tungabhadra Dam ಹಿನ್ನೀರಿನಲ್ಲಿ 300HP ಮೋಟಾರ್‌ಗಳಿಂದ ನೀರು ಕಳ್ಳತನ! ಪಂಪ್‌ಸೆಟ್ ಕಿತ್ತು, ವಿದ್ಯುತ್ ಕಟ್ ಮಾಡಿದ ರೈತರು

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಅಟ್ಟಹಾಸ ಮುಂದುವರಿದಿದೆ. ಇತ್ತೀಚೆಗೆ ಕೈಗಾರಿಕೆಗಳ ವಿಷಕಾರಿ ನೀರು ಭೀಮಾ ನದಿಗೆ ಹರಿಸಿ ಅನಾರೋಗ್ಯ ಭೀತಿ ಉಂಟು ಮಾಡಲಾಗಿತ್ತು. ಇದೀಗ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಅಕ್ರಮವಾಗಿ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಸರ್ಕಾರ, ಸ್ಥಳೀಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.

ಈ ವಿಚಾರವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರ ಸಂಘಟನೆಗಳ ಸದಸ್ಯರ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ವಿಧಿ ಇಲ್ಲದೇ ತಾವೇ ಕೈಗಾರಿಕೆಗಳಿಗೆ ಅನಧಿಕೃತವಾಗಿ ಸರಬರಾಜು ಆಗುತ್ತಿದ್ದ ಪಂಪ್‌ಸೆಟ್‌ಗಳ ಪೈಪ್ ಗಳನ್ನು ಕಿತ್ತು ಹಾಕಿ, ವಿದ್ಯುತ್ ಸಪ್ಲೈ ಕಡಿತಗೊಳಿಸಿದ್ದಾರೆ. ಅಕ್ರಮ ನೀರು ಸರಬರಾಜಿನ ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿವೆ.

Tungabhadra Dam Backwaters

300HP ಕೆಪಾಸಿಟಿಯ 4 ಮೋಟಾರ್ ಅಳವಡಿಕೆ!

ನದಿ ತೀರದಲ್ಲಿ ಸುಮಾರು 300HP ಸಾಮರ್ಥ್ಯದ ದೊಡ್ಡ ದೊಡ್ಡ ಮೋಟಾರುಗಳನ್ನಿಟ್ಟು ನೀರು ಎಳೆಯುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ಹಾಡು ಹಗಲೇ ರಾಜಾರೋಷವಾಗಿ ಮುನಿರಾಬಾದ್ ಸಮೀಪದ ಒಂದರೆಡು ಕೈಗಾರಿಕೆಗಳು ಪಕ್ಕದ ತುಂಗಭದ್ರಾ ಹಿನ್ನೀರಿನಲ್ಲಿ ದೊಡ್ಡ ದೊಡ್ಡ ನೀರೆತ್ತುವ ಮೋಟಾರ್ ಗಳನ್ನು ನದಿಯಲ್ಲಿ ಅಳವಡಿಸಿದ್ದಾರೆ. ಬೃಹತ್ ಪೈಪ್‌ಗಳ ಮೂಲಕ ದಿನವಿಡೀ ನೀರನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಇಷ್ಟು ಧೈರ್ಯವಾಗಿ ನೀರೆತ್ತುತ್ತಿದ್ದರು ಅಧಿಕಾರಿಗಳು ಸುಮ್ಮನಿರುವುದೇಕೆ? ಇದರ ಹಿಂದೆ ಯಾರಿದ್ದಾರೆ?, ವಿದ್ಯುತ್ ಪೂರೈಕೆ ಆಗುತ್ತಿರುವುದಾದರೂ ಹೇಗೆ? ಎಂದು ರೈತರು ಪ್ರಶ್ನಿಸಿದ್ದಾರೆ.

ಕಾನೂನು ಬಾಹಿವಾಗಿ ನದಿಯಿಂದ ನೀರೆತ್ತಲು ಇವರಿಗೆ ಅನುಮತಿ ನೀಡಿದವರು ಯಾರು?. ಕೂಡಲೇ ನೀರಾವರಿ ಇಲಾಖೆ, ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಸಂಸ್ಥೆಗಳು ಈ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳಕ್ಕೆ ಬಾರದ ಅಧಿಕಾರಿಗಳು

ಅಕ್ರಮ ನೀರು ಪೂರೈಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈತರು, ರೈತ ಮಹಿಳೆಯರು ಹೋರಾಟ ಆರಂಭಿಸಿದ್ದರು. ಅಧಿಕಾರಿಗಳು ಸ್ಪಂದಿಸಿಲ್ಲ. ಜೊತೆಗೆ ನೀರೆತ್ತುವ ಸ್ಥಳಕ್ಕೆ ಯಾರೊಬ್ಬ ಅಧಿಕಾರಿಗಳು ಬರದೇ ನಿರ್ಲಕ್ಷ್ಯ ವಹಿಸಿವೆ. ಕೊನೆಗೆ ವಿದ್ಯುತ್ ಕಡಿತಗೊಳಿಸಿ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಸಹಕರಿಸಿದ ಪೊಲೀಸ್ ಮತ್ತು ಮಾಧ್ಯಮದವರಿಗೆ ವಂದನೆ ತಿಳಿಸಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಘೋಷಿಸಿದ್ದಾರೆ.

ಬರಗಾಲ ಅನುಭವಿಸಿದ ಈ ಭಾಗದ ರೈತರು ಕೃಷಿಗೆ ಹಿಂಗಾರು ಮಳೆ, ನದಿಯ ನೀರನ್ನೆ ನೆಚ್ಚಿಕೊಂಡಿದ್ದಾರೆ. ಕೈಗಾರಿಕೆಗಳಿಗೆ ಅಕ್ರಮ ನೀರು ಸರಬರಾಜು ಆದರೆ ರೈತರ ಗತಿ ಏನು? ಮುಂದಿನ ವರ್ಷ ಜೂನ್ ವರೆಗೆ ಇದೇ ನೀರೇ ಆಧಾರವಾಗಿದೆ. ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಈ ಘಟನೆಯಿಂದ ಗಂಭೀರವಾಗಿ ಪರಿಗಣಿಸಿ ಕೈಗಾರಿಕೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ರಾಯಚೂರು ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಗಳಲ್ಲಿ ನಿತ್ಯ ಸೃಷ್ಟಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ಭೀಮಾ ನದಿಗೆ ಬಿಡಲಾಗುತ್ತಿತ್ತು. ಇದರಿಂದ ಜಲ ಮಾಲಿನ್ಯ ಉಂಟಾಗುವ ಜೊತೆಗೆ ಜಾನುವಾರು, ಪ್ರಾಣಿ-ಪಕ್ಷಿಗಳಿಗೆ, ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಭೀರುವ ಆತಂಕ ಎದುರಾಗಿತ್ತು. ಎಚ್ಚೆತ್ತ ಸಚಿವ ರಾಮಲಿಂಗಾ ರೆಡ್ಡಿ ಅವರು ನೆನ್ನೆ ಸೋಮವಾರ ಕೈಗಾರಿಕಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+