ಆರ್ಡರ್ ಕೊಡಲು ಡೈರೆಕ್ಟ್ ಮನೆಯೊಳಗೇ ವ್ಯಕ್ತಿ ಎಂಟ್ರಿ! ಮಹಿಳೆಯರಿಗೆ ಸುರಕ್ಷತೆ ಇದೆಯೇ?, ವಿಡಿಯೋ ವರಲ್
ಬೆಂಗಳೂರು: ಬೆಂಗಳೂರಿನಲ್ಲಿ ಪದೇ ಪದೇ ಡೆಲಿವರಿ ಬಾಯ್‌ಗಳಿಂದ ಅಸುರಕ್ಷತೆ ಭಾವನೆಯನ್ನು ಮಹಿಳೆಯರು ಎದುರಿಸುವಂತಾಗಿದೆ. ಈ ಕುರಿತು ಮಹಿಳೆಯೊಬ್ಬರು ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಕಳವಳ ವ್ಯಕ್ತಪಡಿಸಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದೀಗ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. ಜೊತೆಗೆ ಡೆಲಿವರಿ ಬಾಯ್‌ಗಳ ಮಿತಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಹಿಂದೆ ಬೆಂಗಳೂರಿನಲ್ಲಿ ಮಹಿಳೆ ಒಬ್ಬರೇ ಇದ್ದ ಮನೆಯೊಳಗೆ ಬಲವಂತವಾಗಿ ನುಗ್ಗಿದ ಡೆಲಿವರಿ ಸಿಬ್ಬಂದಿಯೊಬ್ಬ ಟಾಯ್ಲೆಟ್ ಬಳಸುವ ನೆಪದಲ್ಲಿ ಖಾಸಗಿ ಅಂಗ ಪ್ರದರ್ಶಿಸಿದ್ದ.
ಇದೀಗ ಇಲ್ಲೊಬ್ಬ ಝೊಮ್ಯಾಟೊ (Zomato) ಡೆಲಿವರಿ ಸಿಬ್ಬಂದಿಯೊಬ್ಬ ಆರ್ಡರ್ ನೀಡಲು ಮಹಿಳೆಯ ಮನೆಯ ಪ್ರವೇಶ ದ್ವಾರದಲ್ಲಿ ನಿಂತಿಲ್ಲ. ಬದಲಾಗಿ ಅದೇ ಮನೆಯವನು ಎಂಬಂತೆ ಸಲೀಸಾಗಿ ನೇರವಾಗಿ ಅವರ ಮನೆಯೊಳಗೆ ಪ್ರವೇಶಿಸಿದ್ದಾರೆ ಎಂದು ವಿಡಿಯೋ ಹಂಚಿಕೊಂಡ ಮಹಿಳೆ ಆರೋಪಿಸಿದ್ದಾನೆ. ಆ ವಿಡಿಯೋದಲ್ಲೂ ಸಹ ಡೆಲಿವರಿ ಬಾಯ್ ಮನೆ ಒಳಗೇ ನೇರವಾಗಿ ಪ್ರವೇಶಿಸಿದ್ದು ಕಾಣಿಸುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಮಹಿಳೆಯರ ಸುರಕ್ಷತೆ ಕುರಿತು ಕಳವಳ ಉಂಟಾಗುವಂತೆ ಮಾಡಿದೆ.

ಬಾಗಿಲ ಬಳಿ ನಿಂತಿಲ್ಲ: ವಿಡಿಯೋ ವೈರಲ್
ವೈರಲ್ ಆದ ವಿಡಿಯೋ ಪ್ರಕಾರ, ಮನೆಯಲ್ಲಿ ಕುಟುಂಬ ಸದಸ್ಯರು ಇದ್ದಾರೆ. ಇದೇ ವೇಳೆ ಮಟ್ಟಿಲುಗಳನ್ನು ಏರುತ್ತಾ ಬಂದ ಡೆಲಿವರಿ ಸಿಬ್ಬಂದಿ ಮನೆಯೊಳಗೆ ಸಲೀಸಾಗಿ ಪ್ರವೇಶಿಸುತ್ತಾರೆ. ಬಾಗಿಲ ಬಳಿ ನಿಂತು ಕೇಳವು, ಕೂಗುವ ವ್ಯವಧಾನ ಸಹ ಆತನಿಗೆ ಇರಲಿಲ್ಲ ಎನ್ನಲಾಗಿದೆ. ಈ ಘಟನೆಯು ಆನ್‌ಲೈನ್‌ನಲ್ಲಿ ಡೆಲಿವರಿ ಬಾಯ್ ಸೇರಿದಂತೆ ಅಪರಿಚಿತರ 'ವೈಯಕ್ತಿಕ ಗಡಿ/ಮಿತಿಗಳ' ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.
ಡೆಲಿವರಿ ಬಾಯ್ ಆದವರು ಫುಡ್ ಆನ್ಲೈನ್ ಆರ್ಡರ್ ಅನ್ನು ನಿಗದಿತ ವಿಳಾಸಕ್ಕೆ ತಲುಪಿಸುವಾಗ ಮನೆಯ ಮುಖ್ಯದ್ವಾರದಲ್ಲಿಯೇ ನಿಲ್ಲಬೇಕು. ಆ ಮನೆಯವನ್ನು ಸಂಪರ್ಕಿಸಬೇಕು. ಮನೆ ಮಾಲೀಕರು ಅನುಮತಿ ನೀಡಿದರೆ ಮಾತ್ರವೇ ಅವರ ಖಾಸಗಿ ಸ್ಥಳಗಳನ್ನು ಪ್ರವೇಶಿಸಬಹುದು ಇಲ್ಲವಾದರೆ ಗೇಟಿನಿಂದ ಇಲ್ಲವೇ ಬಾಗಿಲಿನಿಂದ ಹೊರಗೇ ನಿಂತು ಡೆಲಿವರಿ ಕೊಡಬೇಕು. ಇದೆಲ್ಲ ಮೀರಿ ಏಕಾಎಕಿ ಮನೆ ಒಳಗೆ ನುಗ್ಗಿದ್ದು ಎಷ್ಟು ಸರಿ?
ಅದೃಷ್ಟವಶಾತ್ ಮನೆಯಲ್ಲಿ ಕುಟುಂಬಸ್ಥರಿದ್ದರು!
ಬೆಂಗಳೂರಿನ ಯುವತಿಯೊಬ್ಬರು ಝೊಮ್ಯಾಟೊ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದರು. ಆರ್ಡರ್ ಕೊಡಲು ಬಂದ ಡೆಲಿವರಿ ಸಿಬ್ಬಂದಿ ಮೆಟ್ಟಿಲುಗಳನ್ನು ಹತ್ತಿ ಬರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಒಂದು ಕ್ಷಣವು ನಿಲ್ಲದೇ ನೇರವಾಗಿ ಮನೆಯೊಳಗೆ ಪ್ರವೇಶಿಸಿದ್ದನ್ನು ಕಾಣಬಹುದಾಗಿದೆ. ಅದೃಷ್ಟವಶಾತ್ ಕುಟುಂಬಸ್ಥರು ಮನೆಯಲ್ಲಿದ್ದ ಕಾರಣ, ಮನೆಯ ಪುರುಷ ಸದಸ್ಯರೊಬ್ಬರು ಹೇಗೆ ಒಳಗೆ ಬಂದೆ ಎಂದು ಪ್ರಶ್ನಿಸುತ್ತಲೇ ಹೊರಕ್ಕೆ ಬಂದಿದ್ದಾರೆ. ಬಳಿಕ ಮನೆಯವರೆಲ್ಲ ಡೆಲಿವರಿ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಕಾಮನ್ ಸೆನ್ಸ್ ಇಲ್ಲವೇ ನಿನಗೆ ಎಂದು ಅವರು ಬೈದು, ಆರ್ಡರ್ ಪಡೆದು ಕಳುಹಿಸಿದ್ದಾರೆ. ಈ ವೇಳೆ ಆತ ಬಾಗಿಲ ಮುಂದೆ ಮೊಬೈಲ್ ನೋಡುತ್ತ ನಿಂತವನಂತೆ ನಿಂತು ಬಳಿಕ ಕಟ್ಟಡದಿಂದ ಹೊರ ನಡೆದಿದ್ದಾನೆ.
ಆಕಸ್ಮಾತ್ ಮನೆಯಲ್ಲಿ ಮಹಿಳೆಯೊಬ್ಬರೆ ಇದ್ದಿದ್ದರೆ ಏನು ಗತಿ!. ಈ ಕುರಿತು ಮಹಿಳೆ ತಮ್ಮ ಮನೆಯಲ್ಲಿಯೂ ತಮಗೆ ಸುರಕ್ಷತೆ ಇಲ್ಲವಾ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಡೆಲಿವರಿ ಬಾಯ್ ಇತಿ ಮಿತಿ, ಮನೆ ಪ್ರವೇಶ, ಮಹಿಳಾ ಸುರಕ್ಷತೆ ಕುರಿತು ಚರ್ಚೆ ನಡೆಸಿದ್ದಾರೆ.


Click it and Unblock the Notifications
