ಹೆಲಿಕಾಪ್ಟರ್ ಘಟಕಕ್ಕೆ ಶಿಲಾನ್ಯಾಸ: ಕನ್ನಡದಲ್ಲಿ ಮೋದಿ ಮಾತು
ತುಮಕೂರು, ಜನವರಿ, 03: ಮೈಸೂರಿನಲ್ಲಿ ವಿಜ್ಞಾನ ಸಮಾವೇಶ ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸಿದರು. ಗುಬ್ಬಿ ತಾಲೂಕಿನ ಬಿದಿರೆಹಳ್ಳಿ ಕಾವಲ್ ನಲ್ಲಿ ನಿರ್ಮಾಣವಾಗಲಿರುವ ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಭಾನುವಾರ ಮಧ್ಯಾಹ್ನ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿ ನಿರ್ಮಾಣವಾಗುತ್ತಿರುವ ಘಟಕ ವಿಶ್ವದ ಗಮನಸೆಳೆಯಲಿದೆ. ಇಂದು ಆಹಾರಧಾನ್ಯಗಳ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನಪಿಕೊಳ್ಳಬೇಕು. ಶಸ್ತ್ರಾಸ್ತ್ರಗಳ ವಿಷಯದಲ್ಲೂ ನಾವು ಸ್ವಾವಲಂಬಿಗಳಾಗಲಿದ್ದೇವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.[ನರೇಂದ್ರ ಮೋದಿ ಭಾಷಣ, ಸಿಎಂ ಸಿದ್ದುಗೆ ನಿದ್ದೆಯೇ ಭೂಷಣ!]

ಭಾರತದ ಸೇನೆಯ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳುವುದು ಇಂದಿ ಅನಿವಾರ್ಯ. ಘಟಕ ಕರ್ನಾಟಕದ ಜನರಿಗೆ ನೀಡುತ್ತಿರುವ ಕೊಡುಗೆ. ಸುಮಾರು ನಾಲ್ಕು ಸಾವಿರ ಜನರಿಗೆ ಇಲ್ಲಿ ಕೆಲಸ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
2016 ರ ಶುಭಾರಂಭ ರಕ್ಷಣಾ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ, ಹೆಲಿಕಾಫ್ಟರ್ ತಯಾರಿಕಾ ಘಟಕ ಯೋಜನೆಗೆ 5000 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದ್ದು, 2018 ಕ್ಕೆ ಇಲ್ಲಿಂದ ತಯಾರಾದ ಹೆಲಿಕಾಫ್ಟರ್ ಗಳು ಹಾರಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ, ಗೃಹ ಸಚಿವ ಪರಮೇಶ್ವರ್, ಸಚಿವರಾದ ದೇಶಪಾಂಡೆ, ಜಯಚಂದ್ರ ಉಪಸ್ಥಿತರಿದ್ದರು.[ವಿಜ್ಞಾನ, ತಂತ್ರಜ್ಞಾನ ಬಡತನ ತೊಲಗಿಸಬೇಕು: ಮೋದಿ]
ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ:
ಮೋದಿ ಕನ್ನಡದಲ್ಲಿ ಭಾಷಣ ಆರಂಭ ಮಾಡಿದ್ದು ವಿಶೇಷ, 'ಬಂಧುಗಳೆ ನಮಸ್ಕಾರ' ಎಂದು ಹೇಳಿ ಭಾಷಣ ಆರಂಭಿಸಿದ ಮೋದಿ ನೂರಾರು ವಿಚಾರಗಳನ್ನು, ಸೈನ್ಯದ ಶಕ್ತಿ ವೃದ್ಧಿ ಅನಿವಾರ್ಯತೆಯನ್ನು, ಎಚ್ ಎ ಎಲ್ ನ ಮಹತ್ವವನ್ನು ವಿವರಿಸಿದರು.












Click it and Unblock the Notifications