ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗ ಭೂಮಿಯ 'ಪ್ರಭಾತ' ನಮ್ಮ ಸಿಮ್ಮ

By Mahesh
|
Google Oneindia Kannada News

ರಂಗ ಭೂಮಿಯ ಬಗ್ಗೆ ಸಮರ್ಥವಾಗಿ ಜ್ಞಾನ ಹೊಂದಿದ್ದ, ಯಾವುದೇ ಪಾತ್ರಕ್ಕಾದರೂ ಜೀವ ತುಂಬಬಲ್ಲ ನಟನಾಗಿ ಕರ್ನಾಟಕ ಮನರಂಜನಾ ಕ್ಷೇತ್ರದ ಅವಿಸ್ಮರಣೀಯ ಆಸ್ತಿಯಾಗಿದ್ದ ಸಿ.ಆರ್ ಸಿಂಹ ಅವರ ನಿಧನ ನಿಜಕ್ಕೂ ತುಂಬಲಾರದ ನಷ್ಟ. ಸಿಂಹ ಅವರ ಬಗ್ಗೆ ಯಾರೇ ಮಾತನಾಡಿದರೂ ಮೊದಲಿಗೆ ಗುರುತಿಸುವುದು ಅವರ ಎಂದೂ ಮಾಸದ ನಗು ಹಾಗೂ ಲವಲವಿಕೆ, ಸ್ನೇಹಪರತೆ.

ರಂಗಭೂಮಿ, ಟಿ.ವಿ., ಸಿನಿಮಾ, ಮೂರು ಕ್ಷೇತ್ರದಲ್ಲೂ ಯಶಸ್ವಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ ಸಿಂಹ ಅವರು ಚನ್ನಪಟ್ಟಣ ಮೂಲದವರು. ರಾಮಸ್ವಾಮಿ ಶಾಸ್ತ್ರಿ, ತಾಯಿ ಲಲಿತಮ್ಮ ದಂಪತಿಯ ಪುತ್ರನಾದ ಸಿಂಹ ಅವರು ಓದಿದ್ದು ವಿಜ್ಞಾನ ವಿಷಯವಾದರೂ ಕೈ ಬೀಸಿ ಕರೆದಿದ್ದು ರಂಗ ಭೂಮಿ. ವಾರ್ತಾ ಇಲಾಖೆ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದು ರಂಗ ಮಂಚ ಏರಲು ಸಹಕಾರಿಯಾಗಿತ್ತು ಬೆಂಗಳೂರಿನ ಪ್ರಭಾತ್ ಕಲಾವಿದರು ಮೂಲಕ ರಂಗ ಲೋಕಕ್ಕೆ ಹೊಸ ಸಿಮ್ಮ ಹೊಸ 'ಪ್ರಭಾತ' ರೆನಿಸಿದರು.

ಬಸವನಗುಡಿ ನ್ಯಾಷನಲ್ ಕಾಲೇಜಿನ ಮೇಷ್ಟ್ರು ಎಚ್. ನರಸಿಂಹಯ್ಯನ ಶಿಷ್ಯಂದಿರಾದ ಶ್ರೀನಾಥ್ ಹಾಗೂ ಸಿಂಹ ಅವರು ನ್ಯಾಷನಲ್ ಹಿಸ್ಟ್ರಿಯಾನಿಕ್ ಕ್ಲಬ್ ಸದಸ್ಯರಾಗಿದ್ದ ಇಬ್ಬರು ಸಕ್ರಿಯವಾಗಿ ರಂಗ ಚಟುವಟಿಕೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದರು. ಸಿಂಹ ಸ್ವಲ್ಪ ಗಂಭೀರ ವದನರಾಗಿ ಕಾಣುತ್ತಿದ್ದರೂ ಸ್ನೇಹ ಸಿಕ್ಕ ಮೇಲೆ ಅವರ ಸ್ನೇಹ ತೊರೆಯಲು ಯಾರೂ ಬಯಸುವಂತಿರಲಿಲ್ಲ. ಬಹದ್ದೂರ್ ಗಂಡ, ಮನವೆಂಬ ಮರ್ಕಟ ನಾಟಕ ಚಿಕ್ಕಂದಿನಲ್ಲಿ ಅಭಿನಯಿಸಿದ ಮುಖ್ಯ ನಾಟಕಗಳು. ರಂಗಭೂಮಿಯ 'ಪ್ರಭಾತ' ನಮ್ಮ ಸಿಮ್ಮ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ..

ಇಂಗ್ಲೀಷ್ ಕೃತಿಗಳು ರಂಗಮಂಚಕ್ಕೆ

ಇಂಗ್ಲೀಷ್ ಕೃತಿಗಳು ರಂಗಮಂಚಕ್ಕೆ

ಬರ್ನಾಡ್ ಶಾ, ಎಡ್ವರ್ಡ್ ಅಲ್ಬಿ, ವಿಲಿಯಂ ಷೇಕ್ಸ್ ಪಿಯರ್, ನೀಲ್ ಸಿಮನ್, ಮೊಲಿಯಾರ್ ಕೃತಿಗಳು, ಅದರಲ್ಲೂ ಷೇಕ್ಸ್ ಪಿಯರ್ ಅವರ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಒಥೆಲ್ಲೋ ನಾಟಕಗಳನ್ನು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾಗೂ ತೆಗೆದುಕೊಂಡು ಹೋದರು. ಉತ್ಪಲ್ ದತ್ ಅವರ ಸೂರ್ಯ ಶಿಕಾರ್, ಗಿರೀಶ್ ಕಾರ್ನಾಡ್ ತುಘಲಕ್ ಇನ್ನಿತರ ಪ್ರಯೋಗಗಳಲ್ಲಿ ಕಾಣಿಸಿಕೊಂಡರು.

ನಮ್ಮ ಸಿಮ್ಮ ರಂಗ ಸಂಘಟಕ

ನಮ್ಮ ಸಿಮ್ಮ ರಂಗ ಸಂಘಟಕ

ಬಿ. ಚಂದ್ರಶೇಖರ್, ವಿಮಲಾ ರಂಗಾಚಾರ್‌ ನಾಣಿ ಮುಂತಾದವರು ಸ್ಥಾಪಿಸಿದ Bangalore Little Theatre(ಬಿ.ಎಲ್.ಟಿ)ಯ. ಸಕ್ರಿಯ ಪಾತ್ರಧಾರಿ. ದಿ ಜೂ ಸ್ಟೋರಿ, ಸಿರಾನೋಡಿ ಬರ್ಗರ್ಯಾಂಕ್, ಸೂರ್ಯ ಶಿಕಾರಿ, ದಿ ಆಡ್ ಕಪಲ್, ಮ್ಯಾನ್ ಆಫ್ ಡೆಸ್ಟಿನಿ, ತುಘಲಕ್ (ಇಂಗ್ಲಿಷ್) ನಾಟಕಗಳಲ್ಲಿ ಪ್ರಮುಖ ಪಾತ್ರ. ಲೋಕೇಶ್, ಕಪ್ಪಣ್ಣ ಮುಂತಾದವರೊಡನೆ 1972ರಲ್ಲಿ 'ನಟರಂಗ' ಸ್ಥಾಪನೆ. ಬಿ.ಸಿ.ಯವರ ನಿರ್ದೇಶನದಲ್ಲಿ ತುಘಲಕ್ ನಾಟಕದಲ್ಲಿ ತುಘಲಕ್ ಪಾತ್ರ. ಸಂಕ್ರಾಂತಿ ನಾಟಕದಲ್ಲೂ ಪ್ರಮುಖಪಾತ್ರ. ಕಾಕನಕೋಟೆ ನಿರ್ದೇಶಿಸಿದ ನಾಟಕ (ನಂತರ ಚಲನಚಿತ್ರವಾಯಿತು)

'ವೇದಿಕೆ' ರಂಗ ಸಂಸ್ಥೆ ವಿಶಿಷ್ಟ ಪ್ರಯೋಗಗಳು

'ವೇದಿಕೆ' ರಂಗ ಸಂಸ್ಥೆ ವಿಶಿಷ್ಟ ಪ್ರಯೋಗಗಳು

1983ರಲ್ಲಿ 'ವೇದಿಕೆ' ರಂಗ ಸಂಸ್ಥೆ ಪ್ರಾರಂಭ. 2 ವರ್ಷ 'ರಂಗ ಮಾಲಿಕೆ' ಕಾರ್ಯಕ್ರಮದಡಿ ಪ್ರತಿ ಶನಿವಾರ ನಾಟಕ ಪ್ರದರ್ಶಿಸಿ ರಂಗ ಚಟುವಟಿಕೆಗಳತ್ತ ಜನರನ್ನು ಆಕರ್ಷಿಸಿದರು.

ವೇದಿಕೆ ಅಡಿಯಲ್ಲಿ ಬಂದ ಟಿಪಿಕಲ್ ಕೈಲಾಸಂ ಹೊಸ ಇತಿಹಾಸ ಸೃಷ್ಟಿಸಿತು. ಅಮೆರಿಕ, ಕೆನಡಾ, ಇಂಗ್ಲೆಂಡ್ ನಲ್ಲೂ ಪ್ರದರ್ಶನ ಕಂಡಿತು. ಶಿವರಾಮ ಕಾರಂತರ ನೆನಪಿಗೆ ಮೃಚ್ಛಕಟಿಕವನ್ನು ಯಕ್ಷಗಾನ, ಬಯಲಾಟ, ಕಂಪನಿ ನಾಟಕ ಮಾದರಿ ಪ್ರದರ್ಶಿಸಿದರು. ಸಾಹಿತಿ/ನಾಟಕಕಾರರ ಸಾಹಿತ್ಯ ಜೀವನವನ್ನಾಧರಿಸಿದ ಪ್ರದರ್ಶನಗಳಲ್ಲಿ ಟಿಪಿಕಲ್ ಕೈಲಾಸಂ, ರಸ ಋಷಿ, ಗೊರೂರು ಮುಖ್ಯ ಪಾತ್ರಧಾರಿಯಾದರು.

ಮೀಸೆ ಬಂದೊರೋ, ಭೈರವಿ, ಕರ್ಮ, ಅಗ್ನಿ ಮತ್ತು ಮಳೆ, ರಸ ಋಷಿ ಕುವೆಂಪು (ಚಲನಚಿತ್ರವಾಯಿತು ಪುತ್ರ ಋತ್ವಿಕ್ ಸಿಂಹ ನಿರ್ದೇಶನ), ಮ್ಯಾಕ್ ಬೆಥ್, ಮದುವೆ ಮದುವೆ, ಹಾವು ಏಣಿ, ಕೋರ್ಟ್ ‌ಮಾರ್ಷಲ್, 8/15 ಇನ್ನಿತರ ಪ್ರಮುಖ ರಂಗ ಪ್ರಯೋಗಗಳಾಗಿವೆ.

ಸಿನಿಮಾ ರಂಗದಲ್ಲಿ ಸಿ.ಆರ್ ಸಿಂಹ

ಸಿನಿಮಾ ರಂಗದಲ್ಲಿ ಸಿ.ಆರ್ ಸಿಂಹ

ಹೊಸ ಅಲೆಯ ಚಲನಚಿತ್ರಗಳಾದ ಸಂಸ್ಕಾರ, ಸಂಕಲ್ಪ, ಚಿತೆಗೂ ಚಿಂತೆ, ಅನುರೂಪ, ಬರ, ಮುಂತಾದುವುಗಳಲ್ಲಿ ಅಭಿನಯ. ಕಾಕನಕೋಟೆ, ಶಿಕಾರಿ, ಅಶ್ವಮೇಧ, ಅಂಗೈಯಲ್ಲಿ ಅಪ್ಸರೆ ಮುಂತಾದುವುಗಳ ನಿರ್ದೇಶನ.

ಕಿರುತೆರೆಯಲ್ಲಿ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ನಲ್ಲಿ ಪಾತ್ರವಹಿಸಿದ್ದರು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಮೆರಿಕದಲ್ಲಿ ಗೊರೂರು ಕೃತಿ ಆಧಾರಿಸಿ ಅಮೆರಿಕದ ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ನಯಾಗಾರ ಫಾಲ್ಸ್, ಡಿಸ್ನಿಲ್ಯಾಂಡ್ ಮುಂತಾದ ಕಡೆ ತೆರಳಿ ನೈಜವಾಗಿ ಚಿತ್ರೀಕರಣ ಮಾಡಿ ಧಾರಾವಾಹಿ ರೂಪದಲ್ಲಿ ತೆರೆಗೆ ತಂದರು.

ನಮ್ಮ ಸಿಂಹಗೆ ಸಂದ ಪ್ರಶಸ್ತಿ ಗೌರವಗಳು

ನಮ್ಮ ಸಿಂಹಗೆ ಸಂದ ಪ್ರಶಸ್ತಿ ಗೌರವಗಳು

ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕಾಕನ ಕೋಟೆ ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಶಂಕರ ಗೌಡ ರಂಗಭೂಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಖ್ಯವಾದುವುಗಳು.

ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರತಿ ಶುಕ್ರವಾರ ಬರುತ್ತಿದ್ದ ನಿಮ್ಮ ಸಿಮ್ಮ ಅಂಕಣದಲ್ಲಿ ಸಿನಿಮಾ, ನಾಟಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರದ ಬಗ್ಗೆ ಬೆಳಕು ಚೆಲ್ಲುವ ಉತ್ತಮ ಲೇಖನಗಳನ್ನು ನೀಡುತ್ತಾ ಅಂಕಣಗಾರರಾಗಿ ಮೂರು ಸಂಚಿಕೆಯ ಕೃತಿಯನ್ನು ಹೊರ ತಂದಿದ್ದು ಕೂಡಾ ಸಾಧನೆ.

English summary
Tribute to thespian CR Simha : Indian actor, director, dramatist and a playwright C. R. Simha passed away today in Bangalore. He is best known for his work in Kannada films and for his work in stage shows
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X