ಗುರುವಾರದ ಸಾರಿಗೆ ಮುಷ್ಕರದ ಮುಖ್ಯಾಂಶಗಳು

ಬೆಂಗಳೂರು, ಏ. 30 : 'ರಸ್ತೆ ಸಾರಿಗೆ ಮತ್ತು ಸುರಕ್ಷತೆ ವಿಧೇಯಕ' ವಿರೋಧಿಸಿ ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ದೇಶಾದ್ಯಂತ 54ಕ್ಕೂ ಹೆಚ್ಚು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಕರ್ನಾಟಕದಲ್ಲಿ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಮುಷ್ಕರಕ್ಕೆ ಕೈಜೋಡಿಸಿವೆ. ಬೆಳಗ್ಗೆ 6 ರಿಂದ ಸಂಜೆ 6ರ ತನಕ ಮುಷ್ಕರ ನಡೆಯಲಿದೆ.

ಒಂದು ದಿನದ ಸಾರಿಗೆ ಮುಷ್ಕರಕ್ಕೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಸ್ ಸಂಚಾರ ರದ್ದಾಗಿದೆ. ಆಟೋ, ಟ್ಯಾಕ್ಸಿ, ಲಾರಿಗಳು ಎಂದಿನಂತೆ ರಸ್ತೆಗಿಳಿದಿವೆ. ಹಾಲು, ಔಷಧಿ, ಆಸ್ಪತ್ರೆ, ಹೋಟೆಲ್ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳ ಸೇವೆಗೆ ತೊಂದರೆಯಾಗಿಲ್ಲ. [ಇಂದಿನ ಮುಷ್ಕರ ಏಕೆ?]

strike

ಬೆಂಗಳೂರಿನಲ್ಲಿ ಬೆಳಗ್ಗೆ ಬಿಎಂಟಿಸಿ ಬಸ್ ಸಂಚಾರ ವಿರಳವಾಗಿದೆ. ವಿವಿಧ ಜಿಲ್ಲೆಗಳಲ್ಲಿ ತೆರಳಬೇಕಾಗಿದ್ದ ಕೆಎಸ್ಆರ್‌ಟಿಸಿ ಬಸ್ಸುಗಳು ಮಾತ್ರ ಸಂಚಾರ ನಡೆಸುತ್ತಿಲ್ಲ. ಬನಶಂಕರಿ, ಕಾಮಾಕ್ಯ, ವಿಜಯನಗರ, ಜಯನಗರ 4ನೇ ಬ್ಲಾಕ್ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಿಗೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. [ಮಂಗಳೂರಿನಲ್ಲಿ ಖಾಸಗಿ ಬಸ್ ಇಲ್ಲ]

ಸಮಯ 12.15 : ಸಾರಿಗೆ ಮುಷ್ಕರದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಒಟ್ಟು 31 ಬಸ್ಸುಗಳಿಗೆ ಕಲ್ಲು ತೂರಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸುಗಳಿಗೂ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಸಮಯ 11.40 : ರಾಯಚೂರಿನಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಆಟೋ ಮತ್ತು ಖಾಸಗಿ ಬಸ್ಸುಗಳು ಸಂಚಾರ ನಡೆಸುತ್ತಿವೆ. ಬಸ್ ನಿಲ್ದಾಣದಿಂದ ಹೊರಟ ಎರಡು ಬಸ್ಸುಗಳಿಗೆ ಕೆಲವರು ಕಲ್ಲು ತೂರಿದ್ದಾರೆ.

ಸಮಯ 10.40 : ಬೆಂಗಳೂರಿನ ಕಲಾಸಿಪಾಳ್ಯದಿಂದ ಖಾಸಗಿ ಬಸ್‍ಗಳು ಸಂಚಾರ ನಡೆಸುತ್ತಿವೆ. ಮುಷ್ಕರದ ಬಿಸಿ ನಮ್ಮ ಮೆಟ್ರೋಗೆ ತಟ್ಟಿದ್ದು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.

ಸಮಯ 10.15 : ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ. ಬಸ್‌ಗಳ ಸಂಚಾರ ಆರಂಭಿಸಿ ಎಂದು ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅವರು ಬಸ್ಸುಗಳಿಗೆ ಭದ್ರತೆ ನೀಡಲಾಗುತ್ತದೆ ಎಂದು ಹೇಳಿದರು.

ಸಮಯ 10 ಗಂಟೆ : ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ 45 ಬಸ್ಸುಗಳು ಸಂಚಾರ ಆರಂಭಿಸಿದ್ದು, ಪೊಲೀಸರು ಎಲ್ಲಾ ಬಸ್ಸುಗಳಿಗೂ ಭದ್ರತೆ ಒದಗಿಸಿದ್ದಾರೆ.

ಸಮಯ 9.35 : ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಒಟ್ಟು 25 ಬಿಎಂಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಸಮಯ 9.15 : ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ, ಪ್ರಯಾಣಿಕರ ಪರದಾಟ

Tweet by Addl Commissioner of Police- L & O-West,Bengaluru City.Sri. Alok Kumar, IPS@AddlCPwest@CPBlrHeartening...

Posted by BENGALURU CITY POLICE on Wednesday, April 29, 2015

ಸಮಯ 9 ಗಂಟೆ : ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ಕೊಟ್ಟ ನಿರ್ವಾಹಕ ನಂತರ ಬಸ್ ಹೋಗುವುದಿಲ್ಲ ಎಂದು ಹೇಳಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಜನರ ಪ್ರತಿಭಟನೆ ಬಳಿಕ ಹಣವನ್ನು ವಾಪಸ್ ನೀಡಿದ್ದಾನೆ.

ಸಮಯ 8.40 : ಬೆಳಗಾವಿಯಲ್ಲಿ ಮುಷ್ಕರಕ್ಕೆ ಭಾರೀ ಬೆಂಬಲ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ

ಸಮಯ 8.16 : ಮುಷ್ಕರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಆಟೋ ಸಂಘಟನೆಗಳು.

auto

ಸಮಯ 8.06 : ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 180 ವೋಲ್ವೊ ಬಸ್‌ಗಳ ಪೈಕಿ 60 ಬಸ್ಸುಗಳು ಮಾತ್ರ ಸಂಚಾರ ನಡೆಸುತ್ತಿವೆ.

ಸಮಯ 8 ಗಂಟೆ : ಹುಬ್ಬಳ್ಳಿಯಲ್ಲಿ 2 ಕೆಎಸ್ಆರ್‌ಟಿಸಿ ಬಸ್ಸುಗಳಿಗೆ ಕಲ್ಲು ತೂರಿದ ಕಿಡಿಗೇಡಿಗಳು

ಸಮಯ 7.45 : ಸಾರಿಗೆ ಮುಷ್ಕರದ ಹಿನ್ನಲೆಯಲ್ಲಿ ಇಂದು ನಡೆಯಬೇಕಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಬಿಎ, ಬಿಎಸ್ಸಿ, ಬಿ.ಕಾಂ, ಬಿಬಿಎಂ, ಬಿಎಚ್‌ಎಂ, ಬಿಸಿಎ, ಬಿಎಸ್ಸಿ (ಎಫ್‌ಎಡಿ), ಬಿಎಸ್‌ಎಲ್‌ಪಿಎ ಪದವಿಗಳ 4ನೇ ಸೆಮಿಸ್ಟರ್‌ ಹಾಗೂ ಬಿಎ ಪದವಿಯ 6ನೇ ಸೆಮಿಸ್ಟರ್‌ ಪರೀಕ್ಷೆಗಳನ್ನು ಮೇ 3ಕ್ಕೆ ಮುಂದೂಡಲಾಗಿದೆ.

ಸಮಯ 7.30 : ತುಮಕೂರಿನಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ಸಮಯ 7.15 : ಮಂಗಳೂರಿನಲ್ಲಿ 1,500 ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತ, ಆಟೋಗಳಿಗೆ ಪೊಲೀಸರ ಭದ್ರತೆ

ಸಮಯ 7 ಗಂಟೆ : ಬೆಂಗಳೂರಿನಿಂದ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಗೆ ತೆರಳಬೇಕಾಗಿದ್ದ ಕೆಎಸ್ಆರ್‌ಟಿಸಿ ಬಸ್ಸುಗಳ ಸಂಚಾರ ಸ್ಥಗಿತ

bmtc

ಸಮಯ 6.45 : ಬೆಂಗಳೂರಲ್ಲಿ ಬಿಎಂಟಿಸಿ ಸಂಚಾರ ವಿರಳ, ರಸ್ತೆಗಿಳಿದಿವೆ ಆಟೋ, ಕ್ಯಾಬ್. ಹೋಟೆಲ್ ತೆರೆದಿವೆ ಬೆಳಗ್ಗಿನ ತಿಂಡಿ-ಮಧ್ಯಾಹ್ನದ ಊಟದ ಚಿಂತೆಇಲ್ಲ.

ಸಮಯ 6.30 :ಮೈಸೂರಿನಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತ, ರೈಲು ನಿಲ್ದಾಣದಲ್ಲಿ ಜನಸಾಗರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+