SWR: ರೈಲು ಪ್ರಯಾಣಿಕರೇ ಗಮನಿಸಿ: 70 ನಿಮಿಷ ರೈಲು ವಿಳಂಬ, ಸಮಯ ಬದಲಾವಣೆ, ವಿವರ
South Western Railway: ನೈಋತ್ಯ ರೈಲ್ವೆ ವಲಯದ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಮರುನಿಗದಿ ಮಾಡಲಾಗಿದೆ. ಮಾರ್ಗ ಮಧ್ಯದಲ್ಲೇ 20 ನಿಮಿಷಗಳ ಕಾಲ ನಿಲ್ಲಲಿವೆ. ದೇವರುಗುಡ್ಡ-ಕುಮಾರಪಟ್ಟಣಂ ಪಾಲಿಫೈಬರ್ಸ್ ಸೈಡಿಂಗ್ ಭಾಗದಲ್ಲಿ ಹಳಿ ನಿರ್ವಹಣೆ ಮತ್ತು ಸುರಕ್ಷತೆ-ಸಂಬಂಧಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ ಈ ಕೆಳಗಿನ ರೈಲು ಸೇವೆಗಳನ್ನು ಮರು ನಿಗದಿಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಉತ್ತರ ಕರ್ನಾಟಕದ ಎಸ್.ಎಸ್.ಎಸ್ ಹುಬ್ಬಳ್ಳಿ ರೈಲುನಿಲ್ದಾಣದಿಂದ ಚಿತ್ರದುರ್ಗ ದೈನಂದಿನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17347) ಹುಬ್ಬಳ್ಳಿಯಿಂದ 70 ನಿಮಿಷಗಳ ಕಾಲ ವಿಳಂಬವಾಗಿ ಹೊರಡಲಿದೆ. ಈ ರೈಲು ಜೂನ್ 24, 26, 27, 29, 30, ಜುಲೈ 1, 3, 4, 6, 7, 8, 10, 11, 13, 14, 15, 17, 18, 20, 21, 22, 24, 25, 27, 28, 29, 31, ಆಗಸ್ಟ್ 1 2 3, 2025 ರಂದು ತಡವಾಗಿ ಹೊರಡಲಿದೆ.

* ಜೂನ್ 24, 29, ಜುಲೈ 1, 6, 8, 13, 15, 20, 22, 27, 2 29, 2025 ರಂದು ಹೊರಡುವ ಬಿಕಾನೇರ್ - ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16588) ಮಾರ್ಗಮಧ್ಯೆ 70 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
SWR ರೈಲುಗಳ ಮರು ವೇಳಾಪಟ್ಟಿ
* ಬೆಂಗಳೂರು ಸರ್. ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ)-ದಾನಪುರ್ ಎಕ್ಸ್‌ಪ್ರೆಸ್ ರೈಲು (03252) ವಿವಿಧ ಕಾರ್ಯಾಚರಣೆ ಕಾರಣದಿಂದಾಗಿ ಬದಲಾದ ಸಮಯದಲ್ಲಿ ಜೂನ್ 25ರಂದು ಮಧ್ಯಾಹ್ನ 2 ಗಂಟೆಗೆ ಪ್ರಯಾಣ ಹೊರಡಲಿದೆ. ಈ ಹಿಂದೆ ಜೂನ್ 24ರಂದು ರಾತ್ರಿ 11.50ಕ್ಕೆ ಹೊರಡುವುದಿತ್ತು. ಅದರ ಸಮಯ ಬದಲಾಯಿಸಲಾಗಿದೆ.
* ಮೈಸೂರು-ದರ್ಬಾಂಗ್ ಎಕ್ಸ್‌ಪ್ರೆಸ್ ರೈಲು (06211) ಬದಲಾದ ಸಮಯದಲ್ಲಿ ಇಂದು ಮಂಗಳವಾರ ಜೂನ್ 24ರಂದು ರಾತ್ರಿ 11 ಗಂಟೆಗೆ ಹೊರಡಲಿದೆ. ಇದೇ ಮಂಗಳವಾರ ರಾತ್ರಿ 8.30 ಗಂಟೆಗೆ ಹೊರಡುವುದಿತ್ತು. ವಿವಿಧ ಕಾರ್ಯಾಚರಣೆ ಕಾರಣದಿಂದಾಗಿ ಈ ಸಮಯದಲ್ಲಿ ಬದಲಾವಣೆ ಮಾಡಿದೆ. ಪ್ರಯಾಣಿಕರು ಗಮನಿಸಿ ಓಡಾಡುವಂತೆ ಅಧಿಕಾರಿಗಳು ಕೋರಿದ್ದಾರೆ.












Click it and Unblock the Notifications